ADVERTISEMENT

Olympics | ಜಿಮ್ನಾಸ್ಟಿಕ್ಸ್‌: ‘ಚಿನ್ನದ ಹುಡುಗಿ’ ಬೈಲ್ಸ್ ಚಾರಿತ್ರಿಕ ಸಾಧನೆ

ಏಜೆನ್ಸೀಸ್
Published 2 ಆಗಸ್ಟ್ 2024, 15:56 IST
Last Updated 2 ಆಗಸ್ಟ್ 2024, 15:56 IST
<div class="paragraphs"><p>ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಜಿಮ್ನಾಸ್ಟಿಕ್ಸ್‌ ಆಲ್‌ರೌಂಡ್ ವಿಭಾಗದಲ್ಲಿ ಪದಕ ಜಯಿಸಿದ ರೆಬೆಕಾ ಆ್ಯಂಡ್ರೇಡ್ (ಬೆಳ್ಳಿ), ಸಿಮೊನ್ ಬೈಲ್ಸ್ (ಚಿನ್ನ) ಮತ್ತು ಸುನಿಸಾ ಲೀ (ಕಂಚು) ಅವರು ಸೆಲ್ಫಿ ತೆಗೆದುಕೊಂಡರು&nbsp;  </p></div>

ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಜಿಮ್ನಾಸ್ಟಿಕ್ಸ್‌ ಆಲ್‌ರೌಂಡ್ ವಿಭಾಗದಲ್ಲಿ ಪದಕ ಜಯಿಸಿದ ರೆಬೆಕಾ ಆ್ಯಂಡ್ರೇಡ್ (ಬೆಳ್ಳಿ), ಸಿಮೊನ್ ಬೈಲ್ಸ್ (ಚಿನ್ನ) ಮತ್ತು ಸುನಿಸಾ ಲೀ (ಕಂಚು) ಅವರು ಸೆಲ್ಫಿ ತೆಗೆದುಕೊಂಡರು 

   

–ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್ 

ಪ್ಯಾರಿಸ್: ಅಮೆರಿಕದ ಜಿಮ್ನಾಸ್ಟಿಕ್ಸ್ ತಾರೆ ಸಿಮೊನ್ ಬೈಲ್ಸ್ ಒಲಿಂಪಿಕ್ಸ್‌ ಆಲ್‌ರೌಂಡ್‌  ವಿಭಾಗದ ಚಿನ್ನದ ಪದಕವನ್ನು  ಗಳಿಸಿದರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಎಂಟು ವರ್ಷಗಳ ನಂತರ ಈ ಪದಕವನ್ನು ಮತ್ತೆ ಜಯಿಸಿದ ಏಕೈಕ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ADVERTISEMENT

ಅವರು 2016ರಲ್ಲಿ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಅವರು ಆಲ್‌ರೌಂಡ್ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಆದರೆ ಮೂರು ವರ್ಷಗಳ ಹಿಂದೆ ನಡೆದಿದ್ದ  ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದೀಗ ಮತ್ತೆ ಮರಳಿ ಚಾಂಪಿಯನ್ ಆಗಿದ್ದಾರೆ

ಇದರೊಂದಿಗೆ ಅವರು ಒಲಿಂಪಿಕ್ಸ್‌ನಲ್ಲಿ ಆರನೇ ಮತ್ತು ಪ್ಯಾರಿಸ್‌ನಲ್ಲಿ ಎರಡನೇ ಚಿನ್ನ ಜಯಿಸಿದರು. ಈಚೆಗೆ ಇಲ್ಲಿ ತಂಡ ವಿಭಾಗದಲ್ಲಿಯೂ ಚಿನ್ನ ಜಯಿಸಿದ್ದರು. 

ಗುರುವಾರ ನಡೆದ ಸ್ಪರ್ಧೆಯಲ್ಲಿ ಅವರು 59.131 ಅಂಕಗಳನ್ನು ಗಳಿಸಿದರು. ಬ್ರೆಜಿಲ್‌ನ ರೆಬೆಕಾ ಆ್ಯಂಡ್ರೆಡ್  ಮತ್ತು ಟೋಕಿಯೊ ಒಲಿಂಪಿಕ್ಸ್‌ ಚಾಂಪಿಯನ್, ಅಮೆರಿಕದ 21 ವರ್ಷದ ಸುನಿಸಾ ಲೀ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.  

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅವರು ಇನ್ನೂ ಮೂರು ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ವಾಲ್ಟ್, ಫ್ಲೋರ್ ಎಕ್ಸೈಸ್‌ ಮತ್ತು ಬ್ಯಾಲೆನ್ಸ್‌ ಭೀಮ್‌ನಲ್ಲಿ ಅವರು ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.