ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಗೂಗಲ್ ವಿಶೇಷವಾದ ಡೂಡಲ್ ಒಂದನ್ನು ರೂಪಿಸಿದೆ.
ಗೂಗಲ್ ಸರ್ಚ್ ಮುಖಪುಟ ತೆರೆಯುತ್ತಿದ್ದಂತೆ, ಡೂಡಲ್ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಡೂಡಲ್ ಪ್ಲೇ ಆಗುತ್ತದೆ.
ನೀಲಿ, ಕೆಂಪು, ಹಳದಿ ಮತ್ತು ಹಸಿರು ಎಂಬ ನಾಲ್ಕು ತಂಡಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಮತ್ತು ಲಕ್ಕಿ ಎಂಬ ನಿಂಜಾ ಬೆಕ್ಕಿನ ಆಟವನ್ನು ಗೂಗಲ್ ಬಳಕೆದಾರರಿಗೆ ಒದಗಿಸಿದೆ.
ಶುಕ್ರವಾರ ಒಲಿಂಪಿಕ್ಸ್ ವರ್ಣರಂಜಿತ ಸಮಾರಂಭದ ಮೂಲಕ ಆರಂಭವಾಗಲಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ 120ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ಗೂಗಲ್, ವಿಶೇಷ ಸಂದರ್ಭದಲ್ಲಿ ಡೂಡಲ್ ಮೂಲಕ ಆ ದಿನವನ್ನು ಸ್ಮರಣೀಯವಾಗಿಸುವ ಪರಿಪಾಠ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.