ADVERTISEMENT

ಮೈಸೂರು ಜಿಲ್ಲೆಗೆ ಸಮಗ್ರ ಪ್ರಶಸ್ತಿ

ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 20:15 IST
Last Updated 30 ಜನವರಿ 2019, 20:15 IST
100 ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದ ಉಡುಪಿ ಜಿಲ್ಲೆಯ ಶೈಲೇಶ್‌ ಎನ್‌.ಶೆಟ್ಟಿ ಸಂಭ್ರಮಿಸಿದ ಪರಿ –ಪ್ರಜಾವಾಣಿ ಚಿತ್ರ
100 ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದ ಉಡುಪಿ ಜಿಲ್ಲೆಯ ಶೈಲೇಶ್‌ ಎನ್‌.ಶೆಟ್ಟಿ ಸಂಭ್ರಮಿಸಿದ ಪರಿ –ಪ್ರಜಾವಾಣಿ ಚಿತ್ರ   

ಮೈಸೂರು: ಉಡುಪಿ ಜಿಲ್ಲೆಯ ಶೈಲೇಶ್‌ ಎನ್‌.ಶೆಟ್ಟಿ ಮತ್ತು ಮೈಸೂರು ಜಿಲ್ಲೆಯ ಡಾ.ಎಸ್‌.ನಳಿನಿ ಇಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದ್ದಾರೆ.

ಚಾಮುಂಡಿವಿಹಾರ ಕ್ರೀಡಾಂಗ ಣದಲ್ಲಿ ಬುಧವಾರ ನಡೆದ 100 ಮೀ. ಓಟದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದರು. ನಳಿನಿ 200 ಮೀ. ಹಾಗೂ 400 ಮೀ.ನಲ್ಲೂ ಮೊದಲ ಸ್ಥಾನ ಪಡೆದರು. ಶೈಲೇಶ್‌ ಲಾಂಗ್‌ ಜಂಪ್‌ನಲ್ಲೂ ಅಗ್ರಸ್ಥಾನ ಗಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟದಲ್ಲಿ ಮೈಸೂರು ಜಿಲ್ಲೆ ಸಮಗ್ರ ಚಾಂಪಿಯನ್‌ ಆಯಿತು. ಬೆಳಗಾವಿ ಜಿಲ್ಲೆ ದ್ವಿತೀಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ತೃತೀಯ ಸ್ಥಾನ ಪಡೆದವು.

ADVERTISEMENT

ಫಲಿತಾಂಶ: ಪುರುಷರು: 45 ವರ್ಷದೊಳಗಿನವರು: 100 ಮೀ.: ಶೈಲೇಶ್‌ ಎನ್‌.ಶೆಟ್ಟಿ (ಕಂದಾಯ; ಉಡುಪಿ)–1, ನಾಗರಾಜ್‌ ಬಿ.ಲಮಾಣಿ (ನೀರಾವರಿ; ಬೆಳಗಾವಿ)–2, ನಾಗೇಶ್ (ಶಿಕ್ಷಣ; ಯಾದ ಗಿರಿ)–3; 400 ಮೀ: ಎಸ್‌.ಜಿ.ವರುಣ್‌ (ಆರ್‌ಡಿಪಿಆರ್‌; ಶಿವಮೊಗ್ಗ)–1, ನಾಗೇಶ್‌ (ಶಿಕ್ಷಣ; ಯಾದಗಿರಿ)–2, ನಾಗರಾಜ್‌ ಬಿ.ಲಮಾಣಿ (ನೀರಾವರಿ; ಬೆಳಗಾವಿ)–3; 1,500 ಮೀ: ಎ.ಎಸ್‌.ಪ್ರಮೋದ್‌ (ಶಿಕ್ಷಣ; ಹಾಸನ)–1, ಎಂ.ಬಿ.ನಾಗರಾಜು (ಕಂದಾಯ; ರಾಮನಗರ)–2, ಯಲ್ಲಾಲಿಂಗ ನಾಗವಿ (ಕಂದಾಯ; ಶಿವಮೊಗ್ಗ)–3; 110 ಹರ್ಡಲ್ಸ್‌: ರೇವಪ್ಪ ಕೊಟ್ಟೂರು (ಶಿಕ್ಷಣ; ಬೆಳಗಾವಿ)–1, ಗಿರೀಶ್‌ ನಲ್ಲಿಕೊಪ್ಪ (ಶಿಕ್ಷಣ; ಹಾವೇರಿ)–2, ಡಿ.ಕೊಟ್ರೇಶ (ಶಿಕ್ಷಣ; ಕೊಪ್ಪಳ)–3; 400 ಮೀ. ಹರ್ಡಲ್ಸ್‌: ಎಂ.ಎಂ.ಪ್ರಕಾಶ್‌ (ಶಿಕ್ಷಣ; ಚಾಮರಾಜನಗರ)–1, ರೇವಪ್ಪ ಕೊಟ್ಟೂರು (ಶಿಕ್ಷಣ; ಬೆಳಗಾವಿ)–2, ಡಿ.ಕೊಟ್ರೇಶ (ಶಿಕ್ಷಣ; ಕೊಪ್ಪಳ)–3; 10,000 ಮೀ: ಡಿ.ವಿ.ರಾಘವೇಂದ್ರ (ಕಾರಾಗೃಹ; ಕೊಡಗು)–1, ಉದಯಗೌಡ (ಶಿಕ್ಷಣ; ಮೈಸೂರು)–2, ಸಿ.ಕೆ.ಗಂಗಾಧರಪ್ಪ (ಶಿಕ್ಷಣ; ಚಿಕ್ಕಬಳ್ಳಾಪುರ)–3; ಲಾಂಗ್‌ಜಂಪ್‌: ಶೈಲೇಶ್‌ ಎನ್‌.ಶೆಟ್ಟಿ (ಕಂದಾಯ; ಉಡುಪಿ)–1, ಎಸ್‌.ಜಿ.ವರುಣ್‌ (ಆರ್‌ಡಿಪಿಆರ್; ಶಿವಮೊಗ್ಗ)–2, ಎಂ.ಎಂ.ಪ್ರಭಾಕರ (ಶಿಕ್ಷಣ; ಚಾಮರಾಜನಗರ)–3; ಟ್ರಿಪಲ್‌ ಜಂಪ್‌: ಡಿ.ಕೊಟ್ರೇಶ (ಶಿಕ್ಷಣ; ಕೊಪ್ಪಳ)–1, ಸಚಿನ್‌ ಜಾಧವ್‌ (ಶಿಕ್ಷಣ; ಬಾಗಲಕೋಟೆ)–2, ಡಿ.ವಿ.ರಮೇಶ್‌ (ಶಿಕ್ಷಣ; ಶಿವಮೊಗ್ಗ)–3; ಶಾಟ್‌ಪಟ್‌: ಬಾಲಚಂದ್ರ (ಶಿಕ್ಷಣ; ಚಿಕ್ಕಮಗಳೂರು)–1, ಜಿ.ಎನ್‌.ಸೋಮಶೇಖರ್‌ (ಶಿಕ್ಷಣ; ಕೋಲಾರ)–2, ಹುಸೇನ್‌ ಮಕಂದರ್‌ (ಶಿಕ್ಷಣ; ದ.ಕನ್ನಡ)–3.

45 ವರ್ಷದ ಮೇಲಿನವರು: 100 ಮೀ.: ಎ.ಸುಧೀರ್ (ಅಬಕಾರಿ; ದ.ಕನ್ನಡ)–1, ಗಣಪತಿ ಜಕಾತಿ (ಸಮಾಜ ಕಲ್ಯಾಣ; ಮೈಸೂರು)–2, ವೇಣುಗೋಪಾಲ ರೆಡ್ಡಿ (ಆರ್‌ಟಿಒ; ಕೋಲಾರ)–3; 400 ಮೀ.: ಬಿ.ಅಣ್ಣಪ್ಪ (ಶಿಕ್ಷಣ; ಶಿವಮೊಗ್ಗ)–1, ಡಾ.ಬಿ.ಪದ್ಮನಾಭ (ಶಿಕ್ಷಣ; ಮೈಸೂರು)–2, ಎಸ್‌.ಕೆ.ಪುಟ್ಟಣ್ಣ ಗೌಡ (ಶಿಕ್ಷಣ; ದಾವಣಗೆರೆ)–3; ಶಾಟ್‌ಪಟ್‌: ಗೋಪಾಲ ಕೃಷ್ಣಮೂರ್ತಿ (ಉನ್ನತ ಶಿಕ್ಷಣ; ಮೈಸೂರು)–1, ಕೆ.ಜಿ.ಗೌಡ (ಶಿಕ್ಷಣ; ಉತ್ತರ ಕನ್ನಡ)–2, ಕೆ.ಬಿ.ಅಯ್ಯಪ್ಪ (ಶಿಕ್ಷಣ; ಮೈಸೂರು)–3.ಮಹಿಳೆಯರು: 40 ವರ್ಷದೊಳಗಿನವರು: 100 ಮೀ.: ಡಾ.ಎಸ್‌.ನಳಿನಿ (ಆಯುಷ್‌; ಮೈಸೂರು)–1, ದೀಪಿಕಾ (ಶಿಕ್ಷಣ; ದ.ಕನ್ನಡ)–2, ಅಂಬೂರ್‌ ಕಬಾಲಿ (ಶಿಕ್ಷಣ; ಬೆಳಗಾವಿ)–3; 400 ಮೀ.: ಡಾ.ಎಸ್‌.ನಳಿನಿ (ಆಯುಷ್‌; ಮೈಸೂರು)–1, ಬಿ.ಶೋಭಾವತಿ (ಶಿಕ್ಷಣ; ದ.ಕನ್ನಡ)–2, ಎನ್‌.ಟಿ.ವಿಶಾಲಾಕ್ಷಿ (ಆರೋಗ್ಯ; ದ. ಕನ್ನಡ)–3; 100 ಮೀ.ಹರ್ಡಲ್ಸ್‌: ಎಂ.ಬಿ.ಗಂಗಮ್ಮ (ಶಿಕ್ಷಣ; ತುಮಕೂರು)–1, ಟಿ.ರಮ್ಯಾ (ವಾಣಿಜ್ಯ ತೆರಿಗೆ; ಬೆಂಗಳೂರು ನಗರ)–2, ಬಿ.ಎಂ.ಯಲ್ಲಮ್ಮ (ಶಿಕ್ಷಣ; ಕೊಪ್ಪಳ)–3; ಹೈಜಂಪ್‌: ಎ.ಆರ್‌.ಲತಾ (ಶಿಕ್ಷಣ; ತುಮಕೂರು)–1, ಎಂ.ಬಿ.ಗಂಗಮ್ಮ (ಶಿಕ್ಷಣ; ತುಮಕೂರು)–2, ಹನಾಬಾದ್‌ ಕಡಬಿ (ಶಿಕ್ಷಣ; ಬೆಳಗಾವಿ)–3; ಜಾವಲಿನ್‌ ಥ್ರೋ: ಚಾಂದಿನಿ ಪಿ.ಹೆಗ್ಡೆ (ಬೆಂಗಳೂರು ಗ್ರಾಮಾಂತರ)–1, ಯುಮುನಾ ವಿ.ನಾಯ್ಕ (ಶಿಕ್ಷಣ; ಉತ್ತರ ಕನ್ನಡ)–2, ಬಿ.ಡಿ.ನಾಯ ಕರ (ಶಿಕ್ಷಣ; ಧಾರವಾಡ)–3. 40 ವರ್ಷ ಮೇಲಿನವರು: 100 ಮೀ: ಯಮುನಾ (ಶಿಕ್ಷಣ; ಉ.ಕನ್ನಡ)–1, ಗೀತಾ (ಶಿಕ್ಷಣ; ಉಡುಪಿ)–2, ಗ್ರೇಟಾ ಮಸ್ಕರೇನ್ಹಸ್‌ (ಶಿಕ್ಷಣ; ಉಡುಪಿ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.