ರಾಂಚಿ : ಉತ್ತರ ಪ್ರದೇಶದ ಗುಲ್‌ವೀರ್ ಸಿಂಗ್ ಅವರು ಸೋಮವಾರ ಇಲ್ಲಿ ಆರಂಭವಾದ ಫೆಡರೇಷನ್ ಕಪ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 10 ಸಾವಿರ ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಜಯಿಸಿದರು. ಇದರೊಂದಿಗೆ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸಿದರು.
ಏಷ್ಯನ್ ಚಾಂಪಿಯನ್‌ಷಿಪ್ ಜುಲೈ 12ರಿಂದ 16ರವರೆಗೆ ಬ್ಯಾಂಕಾಕ್‌ನಲ್ಲಿ ನಡೆಯಲಿದೆ.
ಗುಲ್‌ವೀರ್ ಇಲ್ಲಿ 29 ನಿಮಿಷ 5.90 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಆ ಮೂಲಕ ಏಷ್ಯನ್ ಕೂಟಕ್ಕೆ ಇದ್ದ ಅರ್ಹತಾ ಮಾನದಂಡವನ್ನು (29 ನಿ. 30 ಸೆ.) ಮೀರಿದರು.
ಮಹಿಳೆಯರ ವಿಭಾಗದಲ್ಲಿ ಮಹಾರಾಷ್ಟ್ರದ ಸಂಜೀವನಿ ಜಾಧವ್ (33 ನಿ. 32 ಸೆ.) ಅಗ್ರಸ್ಥಾನ ಗಳಿಸಿದರು.
ಮಹಿಳೆಯರ 400 ಮೀ. ಹೀಟ್ಸ್‌ನಲ್ಲಿ ಮಹಾರಾಷ್ಟ್ರದ ಐಶ್ವರ್ಯಾ ಮಿಶ್ರಾ (52 ನಿ. 85 ಸೆ.) ಮತ್ತು ತಮಿಳುನಾಡಿನ ಆರ್. ವಿದ್ಯಾ ರಾಮರಾಜ್ (53 ನಿ. 32 ಸೆ.) ಕೂಡ ಏಷ್ಯಾ ಟಿಕೆಟ್ ಗಿಟ್ಟಿಸಿದರು. ಈ ವಿಭಾಗದ ಏಷ್ಯನ್ ಅರ್ಹತಾ ಮಾನದಂಡ 53 ನಿ. 54 ಸೆ. ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.