ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇಪದಕ ಸಂದಿದೆ.
ಕನ್ನಡಿಗ, ಉಡುಪಿ ಜಿಲ್ಲೆಯ ಕುಂದಾಪುರದಗುರುರಾಜ್ ಪೂಜಾರಿ ಅವರು ಪುರುಷರವೇಟ್ ಲಿಫ್ಟಿಂಗ್ ಕ್ರೀಡೆಯ 61 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. 269 ಕೆಜಿ ಭಾರ ಎತ್ತುವ ಮೂಲ ಗುರುರಾಜ್ ಈ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಮಲೇಷ್ಯಾದ ಕ್ರೀಡಾಪಟು ಚಿನ್ನ ಹಾಗೂ ಪಪುವಾ ನ್ಯೂಗಿನಿಯಾ ಕ್ರೀಡಾಪಟು ಬೆಳ್ಳಿ ಗೆದ್ದರು.
ವಿಶೇಷವೆಂದರೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್ 2018 ರಲ್ಲಿ ಕೂಡ ಗುರುರಾಜ್ ಪೂಜಾರಿ ಬೆಳ್ಳಿ ಗೆದ್ದಿದ್ದರು. ಈ ಮೂಲಕ ಸತತವಾಗಿ ಎರಡನೇ ಬಾರಿಗೆ ಅವರು ಪದಕ ಸಾಧನೆ ಮಾಡಿದಂತಾಗಿದೆ
ಇದಕ್ಕೂ ಮೊದಲು ಮಹಾರಾಷ್ಟ್ರದ ಸಾಂಗ್ಲಿಯ ಸಂಕೇತ್ ಸರ್ಗರ್ ಅವರು 55 ಕೆಜಿ ಪುರುಷರ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಪದಕಗಳ ಪಟ್ಟಿಯಲ್ಲಿ ಭಾರತ ಖಾತೆ ತೆರೆಯುವಂತೆ ಮಾಡಿದ್ದರು.
ಈ ಇಬ್ಬರೂ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.
ಶನಿವಾರ ನಡೆದ ಪುರುಷರ 55 ಕೆ.ಜಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಸಂಕೇತ್ ಸರ್ಗರ್ ಬೆಳ್ಳಿ ಪದಕ ಗೆದ್ದಿದ್ದರು.
ಇದೇ ವಿಭಾಗದಲ್ಲಿ ಮಲೇಷ್ಯಾದ ಮಹಮ್ಮದ್ ಹನಿಕ್ ಅವರು ಚಿನ್ನ ಗೆದ್ದರೆ, ಶ್ರೀಲಂಕಾದ ದಿಲಂಕಾ ಇಸೂರು ಕುಮಾರ್ ಅವರು ಕಂಚಿನ ಪದಕ ಗೆದ್ದರು.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸಂಕೇತ್ ಅವರು ಸ್ವಲ್ಪದರಲ್ಲೇ ಚಿನ್ನದ ಪದಕದಿಂದವಂಚಿತರಾದರು. ಸಂಕೇತ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು–ಅಭಿನಂದಿಸಿದ್ದಾರೆ.
‘ಬ್ರಿಟಿಷರ ವಿರುದ್ಧಸ್ವಾತಂತ್ರ್ಯಹೋರಾಟದಲ್ಲಿ ಮಡಿದ ಭಾರತೀಯರಿಗೆ ಪದಕವನ್ನು ಸಮರ್ಪಿಸುತ್ತೇನೆ’ ಎಂದು ಸಂಕೇತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.