ಬೆಳಗಾವಿ: ಭಾರತೀಯ ವಾಯುದಳದ ಮಾರ್ಷಲ್ ಆಗಿದ್ದ ದಿ. ಅರ್ಜುನ್ ಸಿಂಗ್ ಜನ್ಮ ಶತಮಾನೋತ್ಸವ ಅಂಗವಾಗಿ ಇಲ್ಲಿನ ಸಾಂಬ್ರಾದಲ್ಲಿರುವ ಏರ್‌ಮನ್ ತರಬೇತಿ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಹಾಫ್ ಮ್ಯಾರಾಥಾನ್‌ನಲ್ಲಿ ಪ್ರಶಿಕ್ಷಣಾರ್ಥಿ ಸಚಿನ್ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು.
ದೀಪಕ್ ಹಾಗೂ ಗಜೇಂದ್ರ ಸಿಂಗ್ ಕ್ರಮವಾಗಿ 2ನೇ ಮತ್ತು 3ನೇ ಬಹುಮಾನ ಗಳಿಸಿದರು.
ಏರ್ ಕಮೋಡೋರ್ ಆರ್. ರವಿಶಂಕರ್ ಹಸಿರುನಿಶಾನೆ ತೋರಿದರು. 200 ಮಂದಿ ಏರ್ ವಾರಿಯರ್‌ಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.