ADVERTISEMENT

ಹಾಕಿ | ವರ್ಷದ ಆಟಗಾರ ಪ್ರಶಸ್ತಿಗೆ ಹರ್ಮನ್‌ಪ್ರೀತ್ ನಾಮನಿರ್ದೇಶನ

ಪಿಟಿಐ
Published 21 ಸೆಪ್ಟೆಂಬರ್ 2024, 12:44 IST
Last Updated 21 ಸೆಪ್ಟೆಂಬರ್ 2024, 12:44 IST
<div class="paragraphs"><p>ಹರ್ಮನ್‌ಪ್ರೀತ್ ಸಿಂಗ್</p></div>

ಹರ್ಮನ್‌ಪ್ರೀತ್ ಸಿಂಗ್

   

(ಪಿಟಿಐ ಚಿತ್ರ)

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಸತತ ಎರಡನೇ ಬಾರಿ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಎಫ್‌ಐಎಚ್‌ ವರ್ಷದ ಆಟಗಾರ ಪ್ರಶಸ್ತಿಗೆ ಶನಿವಾರ ನಾಮನಿರ್ದೇಶನ ಮಾಡಲಾಗಿದೆ.

ADVERTISEMENT

ವಿಶ್ವಶ್ರೇಷ್ಠ ಡ್ರ್ಯಾಗ್‌ಫ್ಲಿಕ್ಕರ್‌, 28 ವರ್ಷದ ವಯಸ್ಸಿನ ಹರ್ಮನ್‌ಪ್ರೀತ್‌ ಎಂಟು ಪಂದ್ಯಗಳಿಂದ 10 ಗೋಲು ಗಳಿಸಿ ಸರ್ವಾಧಿಕ ಸ್ಕೋರರ್ ಎನಿಸಿದ್ದರು. ಈ ಹಿಂದೆ ಸತತವಾಗಿ ಎರಡು ಬಾರಿ (200–22) ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು.

‘ಈ ಪ್ರಶಸ್ತಿಗೆ ನನ್ನನ್ನು ಮತ್ತೊಮ್ಮೆ ನಾಮನಿರ್ದೇಶನ ಮಾಡಿರುವುದು ನನಗೆ ಸಂದ ದೊಡ್ಡ ಗೌರವ’ ಎಂದು ಅವರು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಿಶ್ವದ ಶ್ರೇಷ್ಠ ಆಟಗಾರರ ಜೊತೆ ನನ್ನ ಹೆಸರೂ ಇರುವುದರಿಂದ ಸಂತಸವಾಗಿದೆ. ಆದರೆ ಇದು ನನ್ನ ತಂಡದ ಬೆಂಬಲವಿಲ್ಲದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಎಂದೂ ಹೇಳಬಯಸುತ್ತೇನೆ’ ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ.

ಹರ್ಮನ್‌ಪ್ರೀತ್ ಜೊತೆಗೆ ಡಚ್‌ ಆಟಗಾರರಾದ ಥಿಯರಿ ಬ್ರಿಂಕ್‌ಮನ್‌ ಮತ್ತು ಜೋಪ್ ಡಿ ಮೊಲ್‌, ಜರ್ಮನಿಯ ಹಾನೆಸ್ ಮುಲ್ಲರ್ ಮತ್ತು ಇಂಗ್ಲೆಂಡ್‌ನ ಝಾಕ್‌ ವಾಲೇಸ್‌ ಕೂಡ ಈ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಟೆಸ್ಟ್‌ ಸೇರಿ 2024ರಲ್ಲಿ ನಡೆದ ಎಲ್ಲ ಅಂತರರಾಷ್ಟ್ರೀಯ ಪಂದ್ಯಗಳು, ಎಚ್‌ಐಎಚ್‌ ಪ್ರೊ ಲೀಗ್‌, ನೇಷನ್ಸ್ ಕಪ್‌, ಎಫ್‌ಐಎಚ್‌ ಒಲಿಂಪಿಕ್‌ ಕ್ವಾಲಿಫೈರ್ಸ್‌ ಮತ್ತು ಒಲಿಂಪಿಕ್‌ ಪಂದ್ಯಗಳ ಪ್ರದರ್ಶನವನ್ನು ಪ್ರಶಸ್ತಿ ಆಯ್ಕೆ ವೇಳೆ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ಈ ಪ್ರಶಸ್ತಿಗೆ ಮತದಾನ ಪ್ರಕ್ರಿಯೆ ಅಕ್ಟೋಬರ್ 11ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.