ADVERTISEMENT

ಹರ್ಮನ್‌ಪ್ರೀತ್, ಶ್ರೀಜೇಶ್‌ಗೆ ಎಫ್‌ಐಎಚ್‌ ವಾರ್ಷಿಕ ಪ್ರಶಸ್ತಿ

ಪಿಟಿಐ
Published 10 ನವೆಂಬರ್ 2024, 13:23 IST
Last Updated 10 ನವೆಂಬರ್ 2024, 13:23 IST
   

ಲಾಸೆನ್, ಸ್ವಿಟ್ಜರ್‌ಲೆಂಡ್: ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್‌ ಮತ್ತು ಗೋಲ್‌ ಕೀಪರ್ ಪಿ.ಆರ್. ಶ್ರೀಜೇಶ್ ಅವರು ಎಫ್‌ಐಎಚ್ ವಾರ್ಷಿಕ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಒಮಾನ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಹರ್ಮನ್ ಮತ್ತು ಶ್ರೀಜೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು 2024ನೇ ಸಾಲಿನ ಪ್ರಶಸ್ತಿಯಾಗಿದೆ.

ಈ ಪ್ರಶಸ್ತಿಗಾಗಿ ಪೈಪೋಟಿಯಲ್ಲಿದ್ದ ನೆದರ್ಲೆಂಡ್ಸ್‌ನ ಜೋಪ್ ಡಿ ಮೊಲ್, ಥೀರಿ ಬ್ರಿಂಕ್‌ಮ್ಯಾನ್, ಜರ್ಮನಿಯ ಹೆನೆಸ್ ಮುಲ್ಲರ್, ಇಂಗ್ಲೆಂಡ್‌ನ ಝಾಕ್ ವಾಲೆಸ್ ಅವರನ್ನು ಹಿಂದಿಕ್ಕಿದ ಹರ್ಮನ್ ಪ್ರಶಸ್ತಿ ಗಳಿಸಿದ್ದರು.

ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ 10 ಗೋಲು ಗಳಿಸಿದರು. ತಂಡವು ಕಂಚಿನ ಪದಕ ಗಳಿಸಿತ್ತು.

ಪ್ಯಾರಿಸ್ ಒಲಿಂಪಿಕ್ಸ್ ನಂತರ ನಿವೃತ್ತಿ ಘೋಷಿಸಿದ್ದ ಶ್ರೀಜೇಶ್ ಅವರು, ಪಿರ್ಮಿನ್ ಬ್ಲಾಕ್ (ನೆದರ್ಲೆಂಡ್ಸ್), ಲೂಯಿಸ್ ಕಾಲ್‌ಝಾಡೊ (ಸ್ಪೇನ್), ಜೀನ್ ಪಾಲ್ ಡ್ಯಾನ್‌ಬರ್ಗ್ (ಜರ್ಮನಿ) ಮತ್ತು ಥಾಮಸ್ ಸ್ಯಾಂಟಿಯಾಗೊ (ಅರ್ಜೆಂಟೀನಾ) ಅವರ ಸ್ಪರ್ಧೆಯನ್ನು ಮೀರಿ ಪ್ರಶಸ್ತಿ ಪಡೆದರು. ಶ್ರೀಜೇಶ್ ಅವರು ಟೋಕಿಯೊ ಮತ್ತು ಪ್ಯಾರಿಸ್‌ ಒಲಿಂಪಿಕ್ ಕೂಟಗಳಲ್ಲಿ ಪದಕ ಜಯಿಸಿದ ಭಾರತದ ಗೋಲ್‌ಕೀಪರ್ ಆಗಿ ಮಿಂಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.