ನವದೆಹಲಿ: ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಒಡಿಶಾದಲ್ಲಿ ಜನವರಿ 13ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಟೂರ್ನಿಯಲ್ಲಿ ಆಡಲಿರುವ 18 ಆಟಗಾರರ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ.
ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿಯೂ ಅವರು ಭಾರತ ತಂಡದ ನಾಯಕತ್ವ ವಹಿಸಿದ್ದರು. ಆತಿಥೇಯ ಆಸ್ಟ್ರೇಲಿಯಾ 4–1ರಿಂದ ಜಯಿಸಿತ್ತು.
ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮಿಡ್‌ಫೀಲ್ಡರ್ ಮನಪ್ರೀತ್‌ಸಿಂಗ್ ಮುನ್ನಡೆಸಿದ್ದರು. ಆಗ ತಂಡವು ಕಂಚಿನ ಪದಕ ಜಯಿಸಿತ್ತು. ಅವರು ಈ ತಂಡದಲ್ಲಿದ್ದಾರೆ. ಮುಖ್ಯ ಕೋಚ್ ಗ್ರಹಾಂ ರೀಡ್ ಅವರು ಹರ್ಮನ್‌ಪ್ರೀತ್‌ಗೆ ನಾಯಕತ್ವ ಹೊಣೆ ನೀಡಲು ಒಲವು ತೋರಿದ್ದರು. ಅನುಭವಿ ಆಟಗಾರರ ಗುಂಪಿನಿಂದ ನಾಯಕರನ್ನು ಬೆಳೆಸುವ ಉದ್ದೇಶ ಅವರದ್ದಾಗಿದೆ ಎನ್ನಲಾಗಿದೆ.
ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದಲ್ಲಿ ಎರಡು ದಿನಗಳ ಕಾಲ 33 ಆಟಗಾರರು ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರು. ಅದರಲ್ಲಿ ತಂಡವನ್ನು ಆಯ್ಕೆ ಮಾಡಲಾಗಿದೆ.
ತಂಡ : ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್ (ಉಪನಾಯಕ), ಜರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ವರುಣ್ ಕುಮಾರ್, ನೀಲಂ ಸಂಜೀಪ್ ಕ್ರಿಸ್.
ಮಿಡ್‌ಫೀಲ್ಡರ್ಸ್: ಮನಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಆಕಾಶದೀಪ್ ಸಿಂಗ್.
ಫಾರ್ವರ್ಡ್ಸ್: ಮನದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್, ಸುಖಜೀತ್ ಸಿಂಗ್
ಗೋಲ್ ಕೀಪರ್ಸ್: ಕಿಶನ್ ಬಹಾದ್ದೂರ್ ಪಾಠಕ್ ಮತ್ತು ಪಿ.ಆರ್. ಶ್ರೀಜೇಶ್
ಮೀಸಲು ಆಟಗಾರರು: ರಾಜಕುಮಾರ್ ಪಾಲ್, ಜುಗರಾಜ್ ಸಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.