ADVERTISEMENT

ರಾಷ್ಟ್ರೀಯ ಮಹಿಳಾ ಹಾಕಿ ಲೀಗ್: ಹರಿಯಾಣ, ಮಧ್ಯಪ್ರದೇಶಕ್ಕೆ ಜಯ

ಪಿಟಿಐ
Published 4 ಮೇ 2024, 22:25 IST
Last Updated 4 ಮೇ 2024, 22:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಂಚಿ: ರಾಷ್ಟ್ರೀಯ ಮಹಿಳಾ ಹಾಕಿ ಲೀಗ್ (ಹಂತ 1) ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಹರಿಯಾಣ ಮತ್ತು ಮಧ್ಯಪ್ರದೇಶ ಕ್ರಮವಾಗಿ ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರವನ್ನು ಸೋಲಿಸಿವೆ.

ಹರಿಯಾಣ 4-3 ಗೋಲುಗಳಿಂದ ಬಂಗಾಳವನ್ನು ತಂಡವನ್ನು ಸೋಲಿಸಿ ಸತತ ಮೂರನೇ ಗೆಲುವು ದಾಖಲಿಸಿದರೆ, ಮತ್ತೊಂದು ಪಂದ್ಯದಲ್ಲಿ ಮಧ್ಯಪ್ರದೇಶ  2–1 ಗೋಲುಗಳಿಂದ ಮಹಾರಾಷ್ಟ್ರವನ್ನು ಮಣಿಸಿತು.

ADVERTISEMENT

ದಿನದ ಮೊದಲ ಪಂದ್ಯದಲ್ಲಿ ಸಿಲ್ಬಿಯಾ ನಾಗ್ (2ನೇ ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ ಬಂಗಾಳ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಎರಡನೇ ಕ್ವಾರ್ಟರ್‌ನಲ್ಲಿ ಸೆಲೆಸ್ಟಿನಾ ಹೊರೊ (19ನೇ ನಿಮಿಷ) ಪೆನಾಲ್ಟಿ ಕಾರ್ನರ್‌ನಲ್ಲಿ ಸಿಕ್ಕ ಅವಕಾಶ ಬಳಸಿಕೊಂಡು ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ಹರಿಯಾಣ ತಂಡದ ನಾಯಕಿ ನೀಲಂ (20ನೇ ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು. ನಂದಿನಿ (41ನೇ ನಿಮಿಷ) ಪೆನಾಲ್ಟಿ ಕಾರ್ನರ್ ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರೆ, ಶಶಿ ಖಾಸಾ (43ನೇ ನಿಮಿಷ) ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಹರಿಯಾಣ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಅಂತಿಮ ಕ್ವಾರ್ಟರ್‌ನ ಆರಂಭದಲ್ಲಿ ಪಿಂಕಿ (46 ನೇ) ಗೋಲು ಗಳಿಸಿ ಹರಿಯಾಣಕ್ಕೆ 4-2 ಮುನ್ನಡೆಗೆ ತಂದುಕೊಟ್ಟರು. ಶಾಂತಿ ಹೋರೊ (51ನೇ) ಬಂಗಾಳದ ಪರವಾಗಿ ಗೋಲು ಗಳಿಸಿ ಗೆಲುವಿನ ಆಸೆ ಚಿಗುರಿಸಿದರು.  ಆದರೆ ಹರಿಯಾಣ ಆಟಗಾರರು ಅವಕಾಶ ನೀಡಲಿಲ್ಲ.

 ದಿನದ ಎರಡನೇ ಪಂದ್ಯದಲ್ಲಿ ಮಧ್ಯಪ್ರದೇಶ 2-1 ಗೋಲುಗಳಿಂದ ಮಹಾರಾಷ್ಟ್ರವನ್ನು ಸೋಲಿಸಿತು. ಮೊದಲಾರ್ಧದಲ್ಲಿ ಯಾವುದೇ ಗೋಲು ಗಳಿಸಿರಲಿಲ್ಲ. ಬಳಿಕ ಮಧ್ಯಪ್ರದೇಶ ಮೂರನೇ ಕ್ವಾರ್ಟರ್‌ನ ಕೊನೆಯಲ್ಲಿ ಆಂಚಲ್ ಸಾಹು (45ನೇ ನಿಮಿಷ) ಗಳಿಸಿದ ಗೋಲಿನಿಂದ ಮುನ್ನಡೆ ಸಾಧಿಸಿತು.

ಮಹಾರಾಷ್ಟ್ರ ತಂಡದ ನಾಯಕಿ ಅಶ್ವಿನಿ ಕೋಲೇಕರ್ (50ನೇ ನಿಮಿಷ) ಅಂತಿಮ ಕ್ವಾರ್ಟರ್ ನಲ್ಲಿ ಕೇವಲ ಐದು ನಿಮಿಷಗಳಲ್ಲಿ  ಗೋಲ್ ಬಾರಿಸಿ ತಂಡದ ಮೊತ್ತವನ್ನು ಸಮಬಲಗೊಳಿಸಿದರು. ಆದರೆ, ಸ್ವಾತಿ (54ನೇ ನಿಮಿಷ) ಗೋಲು ಬಾರಿಸಿ ಮಧ್ಯಪ್ರದೇಶಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ ಮಧ್ಯಪ್ರದೇಶ ತಂಡ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿ, ಗೆಲುವು ದಾಖಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.