ನವದೆಹಲಿ: ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಇದೇ 12 ರಿಂದ 30ರವರೆಗೆ ನಡೆಯಲಿರುವ ಸೀನಿಯರ್ ಪುರುಷರ ಹಾಕಿ ತರಬೇತಿ ಶಿಬಿರಕ್ಕೆ 28 ಮಂದಿ ಸಂಭವನೀಯ ಆಟಗಾರರನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿರುವ ಆಟಗಾರರೆಲ್ಲ ಅನುಭವಿಗಳಾಗಿದ್ದಾರೆ.
ಈ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆಯಲ್ಲಿರುವ ಭಾರತ ತಂಡಕ್ಕೆ ಈ ಶಿಬಿರ ಅಂತಿಮ ಸ್ಪರ್ಶ ನೀಡಲು ನೆರವಾಗಲಿದೆ. ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಉತ್ತಮ ಸಾಧನೆಯೊಡನೆ ತಂಡದ ಆಟಗಾರರು ಶಿಬಿರ ಸೇರಿಕೊಳ್ಳಲಿದ್ದಾರೆ. ಭುವನೇಶ್ವರ ಮತ್ತು ರೂರ್ಕೆಲಾ ಲೆಗ್‌ಗಳಲ್ಲಿ ಭಾರತ ಎಂಟು ಪಂದ್ಯಗಳಿಂದ 15 ಪಾಯಿಂಟ್ಸ್ ಕಲೆಹಾಕಿದ್ದು, ಪ್ರಸ್ತುತ ಮೂರನೇ ಸ್ಥಾನದಲ್ಲಿದೆ.
ಲೀಗ್ ಮೇ 22ರಂದು ಆ್ಯಂಟ್‌ವರ್ಪ್‌ನಲ್ಲಿ (ಬೆಲ್ಜಿಯಂ) ಮುಂದುವರಿಯಲಿದೆ. ಜೂನ್ 1ರಂದು ಲಂಡನ್ ಲೆಗ್ ಶುರುವಾಗಲಿದೆ. ನೆದರ್ಲೆಂಡ್ಸ್‌ನಲ್ಲಿ ಅಂತಿಮ ಹಂತ ನಡೆಯಲಿದೆ.
ಗೋಲ್‌ಕೀಪರ್ಸ್: ಕೃಷನ್ ಬಹಾದ್ದೂರ್ ಪಾಠಕ್, ಪಿ.ಆರ್.ಶ್ರೀಜೇಶ್, ಸೂರಜ್ ಕರ್ಕೇರಾ. ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗರಾಜ್ ಸಿಂಗ್, ಸಂಜಯ್, ಸುಮಿತ್, ಅಮಿರ್ ಅಲಿ.
ಮಿಡ್‌ಫೀಲ್ಡರ್ಸ್: ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ರವಿಚಂದ್ರ ಸಿಂಗ್ ಮೊಯ್ರಂಗ್‌ಥೆಮ್, ಶಂಷೇರ್ ಸಿಂಗ್, ನೀಲಕಂಠ ಶರ್ಮಾ, ರಾಜಕುಮಾರ್ ಪಾಲ್, ವಿಷ್ಣುಕಾಂತ ಸಿಂಗ್.
ಫಾರ್ವರ್ಡ್ಸ್: ಆಕಾಶ್‌ದೀಪ್ ಸಿಂಗ್, ಮನದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಗುರ್ಜಂತ್ ಸಿಂಗ್, ಮೊಹಮದ್ ರಾಹೀಲ್ ಮೌಸೀನ್, ಬಾಬಿ ಸಿಂಗ್ ಧಾಮಿ, ಅರಿಜೀತ್ ಸಿಂಗ್ ಹುಂಡಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.