ADVERTISEMENT

Tokyo Olympics| ಭಾರತದ ಮಹಿಳಾ ಹಾಕಿ ತಂಡವನ್ನು ಹೊಗಳಿದ ಗ್ರೇಟ್‌ ಬ್ರಿಟನ್‌ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2021, 6:52 IST
Last Updated 6 ಆಗಸ್ಟ್ 2021, 6:52 IST
ಸೋಲಿನ ಬೇಸರದಲ್ಲಿದ್ದ ಭಾರತೀಯ ಹಾಕಿ ತಂಡದ ಆಟಗಾರರನ್ನು ಸಂತೈಸುತ್ತಿರುವ ಗ್ರೇಟ್‌ ಬ್ರಿಟನ್‌ ತಂಡದ ಆಟಗಾರ್ತಿ (ಪಿಟಿಐ)
ಸೋಲಿನ ಬೇಸರದಲ್ಲಿದ್ದ ಭಾರತೀಯ ಹಾಕಿ ತಂಡದ ಆಟಗಾರರನ್ನು ಸಂತೈಸುತ್ತಿರುವ ಗ್ರೇಟ್‌ ಬ್ರಿಟನ್‌ ತಂಡದ ಆಟಗಾರ್ತಿ (ಪಿಟಿಐ)   

ದೆಹಲಿ: ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಹಾಕಿಯ ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಭಾರತ ತಂಡ ಗ್ರೇಟ್‌ ಬ್ರಿಟನ್‌ ಎದುರು ಸೋಲುಂಡಿದೆ. ಆದರೆ, ಭಾರತೀಯ ಮಹಿಳಾ ಹಾಕಿ ತಂಡವನ್ನು ಗೆದ್ದ ಗ್ರೇಟ್‌ ಬ್ರಿಟನ್‌ ತಂಡ ಹೊಗಳಿದೆ.

ಪಂದ್ಯದ ನಂತರ ಟ್ವೀಟ್‌ ಮಾಡಿರುವ ಗ್ರೇಟ್‌ ಬ್ರಿಟನ್‌ ಮಹಿಳಾ ಹಾಕಿ ತಂಡ, ‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹಾಕಿ ಇಂಡಿಯಾ ವಿಶೇಷವಾದದ್ದನ್ನು ಸಾಧಿಸಿದೆ. ಬರಲಿರುವ ವರ್ಷಗಳು ತಂಡಕ್ಕೆ ಉಜ್ವಲವಾಗಿರಲಿದೆ,’ ಎಂದು ಹೇಳಿದೆ.

ಇದಕ್ಕೂ ಮೊದಲು ಗುರುವಾರ ಭಾರತೀಯ ಪುರುಷರ ತಂಡವು ಜರ್ಮನಿಯ ವಿರುದ್ಧ ಗೆಲುವು ಸಾಧಿಸಿ, ಕಂಚಿನ ಪದಕವನ್ನು ಗಳಿಸಿತ್ತು. 41 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾರತದ ಪುರಷರ ಹಾಕಿ ತಂಡವು ಪದಕದ ಸಾಧನೆ ಮಾಡಿತ್ತು.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.