ADVERTISEMENT

ಮಹಿಳಾ ಹಾಕಿ: ರಾಷ್ಟ್ರೀಯ ಶಿಬಿರಕ್ಕೆ 34 ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟ

ಪಿಟಿಐ
Published 26 ಡಿಸೆಂಬರ್ 2023, 19:50 IST
Last Updated 26 ಡಿಸೆಂಬರ್ 2023, 19:50 IST
<div class="paragraphs"><p> ಮಹಿಳಾ ಹಾಕಿ (ಸಂಗ್ರಹ ಚಿತ್ರ )</p></div>

ಮಹಿಳಾ ಹಾಕಿ (ಸಂಗ್ರಹ ಚಿತ್ರ )

   

ಬೆಂಗಳೂರು : ರಾಂಚಿಯಲ್ಲಿ ನಡೆಯಲಿರುವ ಒಲಿಂಪಿಕ್ ಅರ್ಹತಾ ಪಂದ್ಯಗಳು ಮತ್ತು ಹಾಕಿ ಫೈವ್ಸ್‌ ವಿಶ್ವಕಪ್ ಸಿದ್ಧತೆಗಾಗಿ  34 ಆಟಗಾರರು ಗುರುವಾರ ಇಲ್ಲಿ ಪ್ರಾರಂಭವಾಗುವ ಹಿರಿಯ ಮಹಿಳಾ ಹಾಕಿ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

5 ರಾಷ್ಟ್ರಗಳ ಟೂರ್ನಿಯಲ್ಲಿ ಬೆಲ್ಜಿಯಂ, ಜರ್ಮನಿ, ಐರ್ಲೆಂಡ್ ಮತ್ತು ಆತಿಥೇಯರ ವಿರುದ್ಧ ಆಡಿದ ನಂತರ ಸ್ಪೇನ್ ಪ್ರವಾಸದಿಂದ ಸ್ವಲ್ಪ ವಿರಾಮದ ನಂತರ ಭಾರತೀಯ ಆಟಗಾರರು ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. 

ADVERTISEMENT

ಒಲಿಂಪಿಕ್ ಅರ್ಹತಾ ಪಂದ್ಯಗಳು ಜನವರಿ 13 ರಿಂದ 19 ರವರೆಗೆ ರಾಂಚಿಯಲ್ಲಿ ನಡೆಯಲಿದ್ದು, ಇದರಲ್ಲಿ ಭಾರತವು ನ್ಯೂಜಿಲೆಂಡ್, ಇಟಲಿ ಮತ್ತು ಅಮೆರಿಕಾದೊಂದಿಗೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. 'ಎ' ಗುಂಪಿನಲ್ಲಿ ಜರ್ಮನಿ, ಜಪಾನ್, ಚಿಲಿ ಮತ್ತು ಚೆಕ್ ಗಣರಾಜ್ಯ ತಂಡಗಳಿವೆ.

ರಾಂಚಿಯಲ್ಲಿ ನಡೆದ ಜಾರ್ಖಂಡ್ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಉತ್ತಮ ಪ್ರದರ್ಶನವನ್ನು ನೀಡಿತ್ತು ಮತ್ತು ಅದೇ ಉತ್ಸಾಹದಿಂದ ಮೈದಾನಕ್ಕೆ ಮರಳಲಿದೆ.

‘ಒಲಿಂಪಿಕ್ ಅರ್ಹತಾ ಪಂದ್ಯಗಳಿಗೆ ಮುಂಚಿತವಾಗಿ 5 ರಾಷ್ಟ್ರಗಳ ಪಂದ್ಯಾವಳಿಯು ಉತ್ತಮ ಲಿಟ್ಮಸ್ ಪರೀಕ್ಷೆಯಾಗಿ ಕಾರ್ಯನಿರ್ವಹಿಸಿತು. ನಾವು ಸುಧಾರಿಸಿಕೊಳ್ಳಬೇಕಾದ ಕ್ಷೇತ್ರಗಳನ್ನು ಗುರುತಿಸಿದ್ದೇವೆ’ ಎಂದು ಜನ್ನೆಕ್‌ ಸ್ಕೋಪ್ಮನ್ ತಿಳಿಸಿದರು. 

‘ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಯಗಳಿಸಿದ ಬಳಿಕ ತಂಡವು ರಾಂಚಿಗೆ ಮರಳಲು ಉತ್ಸುಕವಾಗಿದೆ. ಪ್ಯಾರಿಸ್ 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ದೈಹಿಕವಾಗಿ, ತಂತ್ರಗಾರಿಕೆಯಿಂದ ಮತ್ತು ಮಾನಸಿಕವಾಗಿ ಉತ್ತಮ ಸ್ಥಾನದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಟವನ್ನು ಪರಿಷ್ಕರಿಸುವತ್ತ ಗಮನ ಹರಿಸುತ್ತೇವೆ‘ ಎಂದರು. 

 ಭಾರತ ತಂಡ:

ಗೋಲ್ ಕೀಪರ್ಸ್: ಸವಿತಾ, ರಜನಿ ಎಟಿಮಾರ್ಪು, ಬಿಚು ದೇವಿ ಖರಿಬಾಮ್, ಬನ್ಸಾರಿ ಸೋಲಂಕಿ.

ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಅಕ್ಷತಾ ಅಬಾಸೊ ಧೇಕಲೆ, ಜ್ಯೋತಿ ಛತ್ರಿ, ಮಹಿಮಾ ಚೌಧರಿ.

ಮಿಡ್ ಫೀಲ್ಡರ್ಸ್: ನಿಶಾ, ಸಲೀಮಾ ಟೆಟೆ, ಸುಶೀಲಾ ಚಾನು ಪುಕ್ರಂಬಮ್, ಜ್ಯೋತಿ, ನವಜೋತ್ ಕೌರ್, ಮೋನಿಕಾ, ಮರಿಯಾನಾ ಕುಜುರ್, ಸೋನಿಕಾ, ನೇಹಾ, ಬಲ್ಜೀತ್ ಕೌರ್, ರೀನಾ ಖೋಖರ್, ವೈಷ್ಣವಿ ವಿಠ್ಠಲ್ ಫಾಲ್ಕೆ, ಅಜ್ಮಿನಾ ಕುಜುರ್.

ಫಾರ್ವರ್ಡ್ಸ್: ಲಾಲ್ರೆಮ್ಸಿಯಾಮಿ, ನವನೀತ್ ಕೌರ್, ವಂದನಾ ಕಟಾರಿಯಾ, ಶರ್ಮಿಳಾ ದೇವಿ, ದೀಪಿಕಾ, ಸಂಗೀತಾ ಕುಮಾರಿ, ಮುಮ್ತಾಜ್ ಖಾನ್, ಸುನೆಲಿಟಾ ಟೊಪ್ಪೊ, ಬ್ಯೂಟಿ ಡುಂಗ್ಡಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.