ನವದೆಹಲಿ: ಭಾರತ ಪುರುಷರ ಹಾಕಿ ತಂಡದ ಶಿಬಿರವನ್ನು ಸೋಮವಾರದಿಂದ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಆಯೋಜಿಸಲಾಗಿದೆ.
ಈ ತಂಡದಲ್ಲಿ 39 ಆಟಗಾರರು ಸ್ಥಾನ ಪಡೆದಿದ್ದಾರೆ. ಜುಲೈ 19ರವರೆಗೆ ಶಿಬಿರವು ನಡೆಯಲಿದೆ. ನಂತರ ತಂಡವು ಸ್ಪೇನ್‌ನ ಟೆರಾಸ್ಸಾಕ್ಕೆ ಪ್ರಯಾಣ ಬೆಳೆಸಲಿದೆ. ಜುಲೈ 25ರಿಂದ 30ರವರೆಗೆ ನಡೆಯಲಿರುವ ಸ್ಪ್ಯಾನಿಷ್ ಹಾಕಿ ಫೆಡರೇಷನ್ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಇಂಗ್ಲೆಂಡ್, ನೆದರ್ಲೆಂಡ್ ಮತ್ತು ಆತಿಥೇಯ ತಂಡದ ವಿರುದ್ಧ ಸ್ಪರ್ಧಿಸಲಿದೆ.
ಆಗಸ್ಟ್ 3ರಿಂದ ಚೆನ್ನೈನಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು. ಅದರಲ್ಲಿ ಭಾರತ ಸೇರಿದಂತೆ ಕೊರಿಯಾ, ಮಲೇಷ್ಯಾ, ಪಾಕಿಸ್ತಾನ, ಜಪಾನ್ ಮತ್ತು ಚೀನಾ ತಂಡಗಳು ಭಾಗವಹಿಸಲಿವೆ.
‘ಬೆಲ್ಜಿಯಂ ಮತ್ತು ನೆದರ್ಲೆಂಡ್‌ನಲ್ಲಿ ನಡೆದ ಎಫ್‌ಐಎಚ್ ಪುರುಷರ ಹಾಕಿ ಪ್ರೊ ಲೀಗ್‌ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಮುಂದೆ ನಡೆಯುವ ಪ್ರಮುಖ ಟೂರ್ನಿಗಳಿಗಾಗಿ ಈಗ ಸ್ವಲ್ಪ ಸ್ಥಿರತೆ ಕಾಯ್ದುಕೊಳ್ಳುವ ಅಗತ್ಯವಿದೆ’ ಎಂದು ತಂಡದ ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಹೇಳಿದ್ದಾರೆ.
‘ರಾಷ್ಟ್ರೀಯ ಶಿಬಿರವು ಆಟಗಾರರ ಕೌಶಲ, ಕಾರ್ಯಕ್ಷಮತೆ ವೃದ್ಧಿಸಲು ಮತ್ತು ಗುಂಪಾಗಿ ಅಭ್ಯಾಸ ನಡೆಸಲು ನೆರವಾಗಲಿದೆ. ಮುಂದೆ ಬರುವ ಹೀರೊ ಏಷ್ಯನ್ ಚಾಂಪಿಯನ್ಸ್ ಟ್ರೋಫಿ, ನಂತರ ಚೀನಾದಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ಗೆ ಇದು ಉತ್ತಮ ಆರಂಭವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಂಡ: ಗೋಲ್‌ಕೀಪರ್: ಕ್ರಿಶನ್ ಬಹದ್ದೂರ್ ಪಾಠಕ್, ಪಿ.ಆರ್. ಶ್ರೀಜೇಶ್, ಸೂರಜ್ ಕರ್ಕೇರ, ಪವನ್ ಮಲಿಕ್ ಮತ್ತು ಪ್ರಶಾಂತ್ ಕುಮಾರ್ ಚೌಹಾಣ್.
ಡಿಫೆಂಡರ್: ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ವರುಣ್ ಕುಮಾರ್, ಅಮಿತ್ ರೋಹಿದಾಸ್, ಗುರಿಂದರ್ ಸಿಂಗ್, ಜುಗ್ರಾಜ್ ಸಿಂಗ್, ಮನದೀಪ್ ಮೋರ್, ನೀಲಂ ಸಂಜೀಪ್, ಸಂಜಯ್, ಯಶದೀಪ್ ಸಿವಾಚ್, ದಿಪ್ಸನ್ ಟಿರ್ಕಿ ಮತ್ತು ಮಂಜೀತ್.
ಮಿಡ್‌ಫೀಲ್ಡರ್: ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಮೊಯರಂಗತೇಮ್ ರವಿಚಂದ್ರ ಸಿಂಗ್, ಶಂಶೇರ್ ಸಿಂಗ್, ನೀಲಕಂಠ ಶರ್ಮಾ, ರಾಜ್‌ಕುಮಾರ್ ಪಾಲ್, ಸುಮಿತ್, ಆಕಾಶದೀಪ್ ಸಿಂಗ್, ಗುರ್ಜಂತ್ ಸಿಂಗ್, ಮೊಹಮ್ಮದ್, ರಾಹೀಲ್ ಮೌಸೀನ್ ಮತ್ತು ಮಣಿಂದರ್ ಸಿಂಗ್.
ಫಾರ್ವರ್ಡ್: ಎಸ್. ಕಾರ್ತಿ, ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಸಿಮ್ರಂಜೀತ್ ಸಿಂಗ್, ಶಿಲಾನಂದ್ ಲಾಕ್ರಾ ಮತ್ತು ಪವನ್ ರಾಜ್‌ಭರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.