ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದಲ್ಲಿದ್ದ ಹಿರಿಯ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ನಿವೃತ್ತಿ ಹೊಂದಿದ್ದು, ಅವರ ಜೆರ್ಸಿ ಸಂಖ್ಯೆ 16ಕ್ಕೆ ವಿದಾಯ ಹೇಳಲು ಹಾಕಿ ಇಂಡಿಯಾ ನಿರ್ಧರಿಸಿದೆ.
ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಪ್ರಮುಖ ಪಾತ್ರ ವಹಿಸಿದ್ದರು.
ಇದೇವೇಳೆ ಶ್ರೀಕೇಶ್ ಅವರು ಜೂನಿಯರ್ ಹಾಕಿ ತಂಡದ ಕೋಚ್ ಆಗಲಿದ್ದಾರೆ ಎಂದೂ ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಹೇಳಿದ್ದಾರೆ.
‘ಶ್ರೀಜೇಶ್ ಅವರು ಭಾರತದ ಜೂನಿಯರ್ ಹಾಕಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೆ, ಶ್ರೀಜೇಶ್ ಸುಮಾರು 20 ವರ್ಷಗಳ ಕಾಲ ಧರಿಸಿದ್ದ ಜೆರ್ಸಿ ಸಂಖ್ಯೆ 16 ಅನ್ನು ಹಿರಿಯ ತಂಡದಿಂದ ನಿವೃತ್ತಿ ಘೋಷಿಸುತ್ತಿದ್ದೇವೆ. ಕಿರಿಯರ ತಂಡದಲ್ಲಿ ಆ ಸಂಖ್ಯೆಗೆ ನಿವೃತ್ತಿ ಘೋಷಿಸಲಾಗಿಲ್ಲ’ಎಂದೂ ಅವರು ಹೇಳಿದ್ದಾರೆ.
ಈ ಮೂಲಕ ಶ್ರೀಜೇಶ್ ಧರಿಸುತ್ತಿದ್ದ ಜೆರ್ಸಿ ಸಂಖ್ಯೆ 16 ಅನ್ನು ಇನ್ನುಮುಂದೆ ಹಾಕಿ ಹಿರಿಯರ ತಂಡದ ಯಾವೊಬ್ಬ ಆಟಗಾರರಿಗೂ ನೀಡುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.