ADVERTISEMENT

ಹಾಕಿ: ಭಾರತ ತಂಡಕ್ಕೆ ಮನ್‌ಪ್ರೀತ್‌ ಸಾರಥ್ಯ

ಎಫ್‌ಐಎಚ್ ಪ್ರೋ ಲೀಗ್: ಅರ್ಜೆಂಟೀನಾ ವಿರುದ್ಧದ ಪಂದ್ಯಗಳು

ಪಿಟಿಐ
Published 30 ಮಾರ್ಚ್ 2021, 11:44 IST
Last Updated 30 ಮಾರ್ಚ್ 2021, 11:44 IST
ಮನ್‌ಪ್ರೀತ್ ಸಿಂಗ್‌–ಪಿಟಿಐ ಚಿತ್ರ
ಮನ್‌ಪ್ರೀತ್ ಸಿಂಗ್‌–ಪಿಟಿಐ ಚಿತ್ರ   

ನವದೆಹಲಿ: ಮನ್‌ಪ್ರೀತ್ ಸಿಂಗ್ ಅವರು ಒಲಿಂಪಿಕ್ ಚಾಂಪಿಯನ್‌ ಅರ್ಜೆಂಟೀನಾ ಎದುರುಮುಂದಿನ ತಿಂಗಳು ನಡೆಯಲಿರುವ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಿಗೆ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ವೈಯಕ್ತಿಕ ಕಾರಣ ನೀಡಿ ಇತ್ತೀಚೆಗೆ ಕೊನೆಗೊಂಡ ಯೂರೋಪ್ ಪ್ರವಾಸದಲ್ಲಿ ಅವರು ತಂಡದಲ್ಲಿ ಆಡಿರಲಿಲ್ಲ.

ಅರ್ಜೆಂಟೀನಾ ವಿರುದ್ಧ ಏಪ್ರಿಲ್ 11 ಹಾಗೂ 12ರಂದು ಬ್ಯೂನಸ್ ಐರಿಸ್‌ನಲ್ಲಿ ನಿಗದಿಯಾಗಿರುವ ಪಂದ್ಯಗಳಿಗೆ ಭಾರತದ 22 ಆಟಗಾರರ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಏಪ್ರಿಲ್ 6, 7 ಬಳಿಕ 13 ಹಾಗೂ 14ರಂದು ಅಭ್ಯಾಸ ಪಂದ್ಯಗಳನ್ನು ಅರ್ಜೆಂಟೀನಾ ವಿರುದ್ಧ ಭಾರತ ಆಡಲಿದೆ. ಜುಲೈನಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಪೂರ್ವಸಿದ್ಧತೆಯಾಗಿ ಈ ಪಂದ್ಯಗಳು ನಡೆಯಲಿವೆ.

ಪುನಶ್ಚೇತನ ಶಿಬಿರದಲ್ಲಿದ್ದ ಅನುಭವಿ ಡ್ರ್ಯಾಗ್‌ಫ್ಲಿಕ್‌ ತಜ್ಞ ರೂಪಿಂದರ್ ಪಾಲ್ ಸಿಂಗ್‌ ಹಾಗೂ ವರುಣ್ ಕುಮಾರ್ ಯೂರೋಪ್ ಪ್ರವಾಸಕ್ಕೆ ತೆರಳಿರಲಿಲ್ಲ. ಈಗ ಅವರೂ ತಂಡಕ್ಕೆ ಮರಳಿದ್ದಾರೆ.

ADVERTISEMENT

ಯೂರೋಪ್‌ ಪ್ರವಾಸದಲ್ಲಿ ಆಡಿದ್ದ ಆಕಾಶದೀಪ್ ಸಿಂಗ್, ರಮಣದೀಪ್ ಸಿಂಗ್ ಹಾಗೂ ಸಿಮ್ರನ್ ಜೀತ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

‘ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಯಲ್ಲಿರುವ ಆಟಗಾರರಿಗೆ ಅಂತರರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸಿಕೊಡುವ ದೃಷ್ಟಿಯಿಂದ 22 ಆಟಗಾರರ ಸಮತೋಲಿತ ತಂಡವನ್ನು ಅರ್ಜೆಂಟೀನಾಕ್ಕೆ ಕರೆದೊಯ್ಯುತ್ತಿದ್ದೇವೆ‘ ಎಂದು ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.

ಭಾರತ ತಂಡವು ಬುಧವಾರ ಬೆಂಗಳೂರಿನಿಂದ ಬ್ಯೂನಸ್ ಐರಿಸ್‌ಗೆ ಪ್ರಯಾಣ ಬೆಳೆಸಲಿದೆ. ಅದಕ್ಕೂ ಮೊದಲು ಆಟಗಾರರು ಕೋವಿಡ್‌–19ಕ್ಕೆ ಸಂಬಂಧಿಸಿದ ಕಡ್ಡಾಯ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕಿದೆ.

ತಂಡ ಇಂತಿದೆ: ಮನ್‌ಪ್ರೀತ್ ಸಿಂಗ್‌ (ನಾಯಕ), ಹರ್ಮನ್‌ಪ್ರೀತ್ ಸಿಂಗ್‌ (ಉಪನಾಯಕ), ಪಿ.ಆರ್‌.ಶ್ರೀಜೇಶ್‌, ಕೃಷ್ಣ ಬಹಾದ್ದೂರ್ ಪಾಠಕ್‌, ಅಮಿತ್ ರೋಹಿದಾಸ್‌, ಗುರಿಂದರ್ ಸಿಂಗ್‌, ಸುರೇಂದರ್ ಕುಮಾರ್‌, ಬೀರೇಂದ್ರ ಲಾಕ್ರಾ, ಹಾರ್ದಿಕ್ ಸಿಂಗ್‌, ವಿವೇಕ್ ಸಾಗರ್‌ ಪ್ರಸಾದ್‌, ರಾಜ್ ಕುಮಾರ್ ಪಾಲ್‌, ನೀಲಕಂಠ ಶರ್ಮಾ, ಶಂಶೇರ್ ಸಿಂಗ್‌, ಗುರ್ಜಂತ್ ಸಿಂಗ್‌, ದಿಲ್‌ಪ್ರೀತ್ ಸಿಂಗ್‌, ಮನದೀಪ್ ಸಿಂಗ್‌, ಲಲಿತ್ ಉಪಾಧ್ಯಾಯ, ಜಸ್ಕರಣ್ ಸಿಂಗ್‌, ಸುಮಿತ್ ಹಾಗೂ ಶೀಲಾನಂದ ಲಾಕ್ರಾ, ರೂಪಿಂದರ್ ಪಾಲ್ ಸಿಂಗ್‌ ಹಾಗೂ ವರುಣ್ ಕುಮಾರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.