ನಾಪೋಕ್ಲು (ಕೊಡಗು ಜಿಲ್ಲೆ): ಐನಂಡ, ಮೇಕೆರಿರ ತಂಡಗಳು ಕುಂಡ್ಯೋಳಂಡ ಕಪ್ಗಾಗಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಸೋಮವಾರ ಭರ್ಜರಿ ಜಯ ದಾಖಲಿಸಿದವು.
ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ, ಐನಂಡ ತಂಡವು ಚೇರಂಡ ವಿರುದ್ಧ 6-1 ಗೋಲುಗಳಿಂದ ಜಯ ಸಾಧಿಸಿದರೆ, ಮೇಕೆರಿರ ತಂಡದವರು ಕಾಂಗೀರ ತಂಡದವರನ್ನು 6-2 ಗೋಲುಗಳಿಂದ ಮಣಿಸಿದರು.
ಮುಕ್ಕಾಟಿರ (ಬೋಂದ) ತಂಡವು ವಸಂತ್ ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಬಿದ್ದಾಟಂಡ ವಿರುದ್ದ 4-0 ಅಂತರದಲ್ಲಿ ಜಯ ಗಳಿಸಿತು. 1–1ರ ಸಮಬಲ ಸಾಧಿಸಿದ ಐಚೆಟ್ಟಿರ ಮತ್ತು ಮಾರ್ತಂಡ ತಂಡಗಳಿಗೆ ನಂತರ ನಡೆದ ಪೆನಾಲ್ಟಿ ಶೂಟೌಟ್ನಲ್ಲಿ ಐಚೆಟ್ಟಿರ ತಂಡವು 5 -4 ಅಂತರದಿಂದ ರೋಚಕ ಗೆಲುವು ಸಾಧಿಸಿತು.
ಫಲಿತಾಂಶ: ಬಿದ್ದಂಡ ತಂಡವು 3–1ರಿಂದ ಚೋಳಂಡ ವಿರುದ್ಧ; ಚೋಕಿರ 1–0ರಿಂದ ಚೆಯ್ಯಂಡ ವಿರುದ್ಧ; ಕಂಬೇಯಂಡ 4–0ರಿಂದ ಕೋಲುಮಾದಂಡ ವಿರುದ್ಧ; ಚಂಗೇಟಿರ 3–2ರಲ್ಲಿ ಮೊಳ್ಳೆರ ವಿರುದ್ಧ; ಕಾಂಡೇರ ತಂಡವು 3–0ರಿಂದ ಮಾಣಿರ ವಿರುದ್ಧ; ಮಂದನೆರವಂಡ 5–0ರಿಂದ ಕೋಲತಂಡ ವಿರುದ್ಧ; ಮುದ್ದಂಡ 1–0ರಿಂದ ಮಾಚಂಡ ವಿರುದ್ಧ; ಮರುವಂಡ ತಂಡವು 4–0ರಿಂದ ಪೋರಂಗಡ ವಿರುದ್ಧ; ಚೇಂದಿರ ತಂಡವು ಮುಕ್ಕಾಟಿರ ವಿರುದ್ಧ 2–1 ಅಂತರದಿಂದ; ಅಳಮೇಂಗಡ 4–0ರಿಂದ ಬಟ್ಟಿಯಂಡ ವಿರುದ್ದ; ಚೌರಿರ (ಹೊದ್ದೂರು) ತಂಡವು ಅಯ್ಯನೆರವಂಡ ವಿರುದ್ಧ 5 -0 ಅಂತರದಿಂದ; ಕೊಳ್ಳಿರ ತಂಡವು 3- 2ರಿಂದ ಬೊಳಕಾರಂಡ ವಿರುದ್ಧ; ಮಲ್ಲಚ್ಚಿರ ತಂಡವು 2–1ರಿಂದ ಐತಿಚಂಡ ವಿರುದ್ದ; ಅಪ್ಪನೆರವಂಡ ತಣಡವು 2–0ರಿಂದ ಪಾಲೆಂಗಡ ವಿರುದ್ದ; ಚಂಗುಲಂಡ ತಂಡವು 4–0 ಅಂತದಿಂದ ಪಾಲೆಯಂಡ ವಿರುದ್ಧ ಗೆಲುವು ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.