ಬೆಂಗಳೂರು: ಮೂರನೇ ದಿನವೂ ಈಜುಕೊಳದಲ್ಲಿ ಪದಕಗಳ ಬೇಟೆಯಾಡಿದ ಆತಿಥೇಯ ಜೈನ್ ವಿವಿ ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಪಾರಮ್ಯ ಮುಂದುವರಿಸಿದೆ. ಜೈನ್‌ಗೆ ಭಾರಿ ಪೈಪೋಟಿ ಒಡ್ಡಿರುವ ಮುಂಬೈ ವಿಶ್ವವಿದ್ಯಾಲಯ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
7 ಚಿನ್ನದೊಂದಿಗೆ ಜೈನ್ ವಿವಿ ಒಟ್ಟು 10 ಪದಕಗಳನ್ನು ಕಲೆ ಹಾಕಿದೆ. ಮುಂಬೈ ವಿವಿ ಖಾತೆಯಲ್ಲೂ 10 ಪದಕಗಳು ಇವೆ. ಆದರೆ ಆ ತಂಡ ಗೆದ್ದಿರುವ ಚಿನ್ನದ ಪದಕ ಐದು ಮಾತ್ರ. ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ವಿವಿ 4 ಚಿನ್ನದೊಂದಿಗೆ 15 ಪದಕ ಗಳಿಸಿ ಮೂರನೇ ಸ್ಥಾನದಲ್ಲಿದೆ. ಮೊದಲ ಆವೃತ್ತಿಯ ಚಾಂಪಿಯನ್ ಪಂಜಾಬ್ ವಿವಿ 4 ಚಿನ್ನದೊಂದಿಗೆ ನಾಲ್ಕನೇ ಸ್ಥಾನ ಗಳಿಸಿದೆ.
ತಮಿಳುನಾಡಿನ ಅಣ್ಣಾ ಮತ್ತು ಮಹಾರಾಷ್ಟ್ರದ ಶಿವಾಜಿ ವಿವಿಗಳು ಕೂಡ 4 ಚಿನ್ನದ ಪದಕಗಳನ್ನು ಗೆದ್ದುಕೊಂಡಿವೆ. ಕರ್ನಾಟಕದ ಒಟ್ಟು 7 ವಿವಿಗಳು ಕನಿಷ್ಠ ಒಂದು ಪದಕವನ್ನಾದರೂ ಗೆದ್ದುಕೊಂಡಿವೆ. ಮಂಗಳವಾರ ಈಜು ಸ್ಪರ್ಧೆಯ ಒಟ್ಟು 10 ಫೈನಲ್‌ಗಳಲ್ಲಿ 4 ಚಿನ್ನದ ಪದಕಗಳು ಜೈನ್ ವಿವಿ ಪಾಲಾದವು. ಎಂಟು ದಾಖಲೆಗಳು ಮುರಿದುಬಿದ್ದವು.
ಮೂರನೇ ದಿನದ ಫಲಿತಾಂಶಗಳು: ಪುರುಷರ ಈಜು: 50 ಮೀ ಬ್ರೆಸ್ಟ್‌ಸ್ಟ್ರೋಕ್: ಧನುಷ್ (ಅಣ್ಣಾ)–1. ಕಾಲ: 28.90 (ಕೂಟ ದಾಖೆಲ. ಹಳೆಯದು: 29.57,ಅಂಶ್ ಅರೋರ), ಜಯ್ ಏಕಬೋಟೆ (ಮುಂಬೈ)–2, ಯಾದೇಶ್ ಬಾಬು (ಅಣ್ಣಾ)–3; 50 ಮೀ ಬಟರ್‌ಫ್ಲೈ: ಆದಿತ್ಯ ದಿನೇಶ್ (ಅಣ್ಣಾ)–1. ಕಾಲ: 25.49, ಬೆನೆಡಿಕ್ಟನ್ ರೋಹಿತ್ (ಅಣ್ಣಾ)–2, ಸ್ವಪ್ನಿಲ್ ಚಕ್ರವರ್ತಿ (ಪಶ್ಚಿಮ ಬಂಗಾಳ ವಿವಿ)–3; 200 ಮೀ ಬಟರ್‌ಫ್ಲೈ: ಆರ್ಯನ್ ಪಾಂಚಾಲ್ (ಗುಜರಾತ್ ವಿವಿ)–1. ಕಾಲ: 2:04.72 (ಕೂಟ ದಾಖಲೆ. ಹಳೆಯದು: 2:09.88, ವಿನಾಯಕ್ ಪರಿಹಾರ್); ರಾಜ್ ರೆಲೇಕರ್ (ಜೈನ್)–2, ವಿಕಾಸ್ ಪ್ರಭಾಕರ್ (ಎಸ್‌ಆರ್‌ಎಂ)–3; 200 ಬ್ಯಾಕ್‌ಸ್ಟ್ರೋಕ್: ಶಿವ ಶ್ರೀಧರ್ (ಜೈನ್)–1.ಕಾಲ: 2:06.29 (ಕೂಟ ದಾಖಲೆ. ಹಳೆಯದು: 2:08.82, ಅನುರಾಗ್ ದಾಗರ್), ಸಿದ್ಧಾರ್ಥ್ ಸೇಜ್ವಾಲ್–2, ಅನುರಾಗ್ ದಾಗಾರ್ (ಇಬ್ಬರೂ ಪಂಜಾಬ್ ವಿವಿ)–3; 1500 ಮೀ ಫ್ರೀಸ್ಟೈಲ್: ಶುಭಂ ದೈಗುಡೆ (ಸಾವಿತ್ರಿಬಾಯಿ ಫುಲೆ)–1. ಕಾಲ: 16:21.96 (ಕೂಟ ದಾಖಲೆ. ಹಳೆಯದು: 17:55.16, ಶೌನಕ್ ಪ್ರಸಾದ್), ಅಹಮ್ಮದ್ ಹಬೀಬುಲ್ಲ (ಮದ್ರಾಸ್)–2, ಮೋಹಿತ್ ವೆಂಕಟೇಶ್ (ಪಿಇಎಸ್); 4x100 ಮೀ ಫ್ರೀಸ್ಟೈಲ್: ಜೈನ್ ವಿವಿ (ಶಿವ ಶ್ರೀಧರ್, ಸಂಜಯ್, ರೆಲೇಕರ್ ಶ್ರೀಹರಿ)–1. ಕಾಲ: 3:34.86 (ಕೂಟ ದಾಖಲೆ. ಹಳೆಯದು: 3:46.14, ಪಂಜಾಬ್ ವಿವಿ); ಅಣ್ಣಾ ವಿವಿ–2, ಪಂಜಾಬ್ ವಿವಿ–3.
ಮಹಿಳೆಯರ 50 ಮೀ ಬ್ರೆಸ್ಟ್ ಸ್ಟ್ರೋಕ್: ಆರತಿ ಪಾಟೀಲ್ (ಮುಂಬೈ)–1. ಕಾಲ: 34.95 (ಕೂಟ ದಾಖಲೆ. ಹಳೆಯದು: 36.28, ಆರತಿ ಪಾಟೀಲ್); ಜ್ಯೋತಿ ಪಾಟೀಲ್ (ಮುಂಬೈ)–2, ರೀತಾ ವರ್ಮಾ (ಪಂಜಾಬ್); 50 ಮೀ ಬಟರ್‌ಫ್ಲೈ: ಋತುಜಾ ಖಾಡೆ (ಶಿವಾಜಿ)–1. ಕಾಲ: 29.16 (ಕೂಟ ದಾಖಲೆ. ಹಳೆಯದು: 29.74, ಆರ್ಯ ರಾಜಗುರು); ಸೃಷ್ಟಿ ಉಪಾಧ್ಯಾಯ (ಜಾಧವಪುರ್)–2, ಸಾಧ್ವಿ ಧುರಿ (ಸಾವಿತ್ರಿಬಾಯಿ ಫುಲೆ)–3; 200 ಮೀ ಬ್ಯಾಕ್‌ಸ್ಟ್ರೋಕ್: ಶೃಂಗಿ ಬಾಂದೇಕರ್ (ಜೈನ್)–1. ಕಾಲ: 2:27.27 (ಕೂಟ ದಾಖಲೆ. ಹಳೆಯದು: 2:36.32, ದಾಮಿನಿ ಗೌಡ), ಮಧುಮಿತಾ (ಮದ್ರಾಸ್)–2, ದಾಮಿನಿ ಗೌಡ (ರಾಜೀವ್‌ಗಾಂಧಿ)–3; 400 ಮೀ ವೈಯಕ್ತಿಕ ಮೆಡ್ಲೆ: ಕಲ್ಯಾಣಿ ಸಕ್ಸೇನ (ವೀರ್ ನರ್ಮದ್)–1.ಕಾಲ 5:24.40 (ಕೂಟ ದಾಖಲೆ. ಹಳೆಯದು: 5:24.78, ಕಲ್ಯಾಣಿ ಸಕ್ಸೇನ), ಶೃಂಗಿ ಬಾಂದೇಕರ್ (ಜೈನ್)–2, ಪ್ರೀತಾ (ಬೆಂಗಳೂರು ವಿವಿ)–3.
ಪುರುಷರ ವೇಟ್‌ಲಿಫ್ಟಿಂಗ್: 96ಕೆಜಿ: ವೈಷ್ಣವ್ ಠಾಕೂರ್ (ಸಾವಿತ್ರಿಬಾಯಿ ಫುಲೆ)–1. ಭಾರ: 135, ಗುರುಪ್ರೀತ್ (ಸಂತ್ ಬಾಬಾ ಭಾಗ್)–2, ಪುನೀತ್ ಚಂದ್ರ (ಕೆಐಐಟಿ)–3; 102 ಕೆಜಿ: ಚರಾಗ್ (ಸಾವಿತ್ರಿಬಾಯಿ ಫುಲೆ)–1. ಭಾರ: 139 ಕೆಜಿ, ಸಿದ್ಧಾಂತ್ ಚೌಧರಿ (ಮಹಾತ್ಮ ಜ್ಯೋತಿಬಾ ಫುಲೆ)–2, ಜಸ್ವೀರ್ ಸಿಂಗ್ (ಪಂಜಾಬ್); 109 ಕೆಜಿ: ವಿಘ್ನೇಶ್ (ಅಣ್ಣಾ)–1. ಭಾರ: 124 ಕೆಜಿ, ಸುನಿಲ್ ಪ್ರಶಾಂತ್ (ನಾಗಪುರ್)–2, ಪ್ರಿನ್ಸ್ (ಲವ್ಲಿ)–3. ಮಹಿಳೆಯರ 76 ಕೆಜಿ: ಸ್ವಾತಿ ಕಿಶೋರ್ (ಕ್ಯಾಲಿಕಟ್)–1. ಭಾರ: 188ಕೆಜಿ, ಧಾತ್ರಿ (ಆದಿಕವಿ ನಾಣಯ್ಯ)–2, ನಿಸಿಮೋಳ್ ಥಾಮಸ್ (ಕ್ಯಾಲಿಕಟ್)–3; 81 ಕೆಜಿ: ರಾಖಿ (ಪಂಜಾಬ್)–1. ಭಾರ: 194 ಕೆಜಿ, ಅಂಜಲಿ ಜೋಶಿ (ಲವ್ಲಿ)–2, ಯೋಗಿತಾ (ಸಾವಿತ್ರಿಬಾಯಿ ಫುಲೆ)–3; 87 ಕೆಜಿ: ಅಕ್ಷತಾ (ಲವ್ಲಿ)–1. ಭಾರ: 197ಕೆಜಿ; ಡಿಂಪಿ (ಚಂಡೀಗಢ್)–2, ಬಿಶ್ನಾ ವರ್ಗೀಸ್ (ಕ್ಯಾಲಿಕಟ್)–3.
ವಾಲಿಬಾಲ್: ಎಸ್‌ಆರ್‌ಎಂ ವಿವಿಗೆ ‘ಡಬಲ್’ ಸಂಭ್ರಮ
ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯ ತಂಡ ವಾಲಿಬಾಲ್‌ನಲ್ಲಿ ಡಬಲ್ ಸಾಧನೆ ಮಾಡಿತು. ಪುರುಷರ ಮತ್ತು ಮಹಿಳೆಯರ ವಿಭಾಗಗಳ ಪ್ರಶಸ್ತಿಗಳು ಎಸ್‌ಆರ್‌ಎಂ ಪಾಲಾದವು. ಜೈನ್ ವಿವಿ ಆವರಣದಲ್ಲಿ ನಡೆದ ಪುರುಷರ ಫೈನಲ್‌ನಲ್ಲಿ ಎಸ್‌ಆರ್‌ಎಂ ಕೇರಳದ ಕ್ಯಾಲಿಕಟ್ ವಿವಿಯನ್ನು 3–0ಯಿಂದ ಮಣಿಸಿತು. ಮೊದಲೆರಡು ಸೆಟ್‌ಗಳಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದ ಎದುರಾಳಿಗಳನ್ನು ಎಸ್‌ಆರ್‌ಎಂ ಕ್ರಮವಾಗಿ 25–22, 25–23ರಲ್ಲಿ ಮಣಿಸಿತು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ 25–19ರಿಂದ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿತು.
ಮಹಿಳೆಯರ ವಿಭಾಗದಲ್ಲಿ ತಮಿಳುನಾಡಿನ ಎರಡು ತಂಡಗಳ ನಡುವಿನ ಪಂದ್ಯ ಕುತೂಹಲ ಕೆರಳಿಸಿತ್ತು. 67 ನಿಮಿಷಗಳ ಜಿದ್ದಾಜಿದ್ದಿಯ ಹಣಾಹಣಿಯಲ್ಲಿ ಎಸ್‌ಆರ್‌ಎಂ 3–0ಯಿಂದ ಭಾರತಿಯಾರ್ ವಿವಿಯನ್ನು ಮಣಿಸಿತು. 25–14, 25–22, 25–14ರಲ್ಲಿ ಭಾರತಿಯಾರ್ ವಿರುದ್ಧ ಎಸ್‌ಆರ್‌ಎಂ ಗೆಲುವು ಸಾಧಿಸಿತು.
ಮಲ್ಲಕಂಬ: ಮುಂಬೈಗೆ ಚಿನ್ನ; ಹಾಕಿಯಲ್ಲಿ ಮೈಸೂರಿಗೆ ಜಯ
ಕೂಟಕ್ಕೆ ಪದಾರ್ಪಣೆ ಮಾಡಿರುವ ಮಲ್ಲಕಂಬದ ಮೊದಲ ಚಿನ್ನ ಮುಂಬೈ ವಿವಿ ಪಾಲಾಯಿತು. ಮಂಗಳವಾರ ಮುಕ್ತಾಯಗೊಂಡ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದರೆ ಮಹಾರಾಷ್ಟ್ರದ ಮತ್ತೊಂದು ತಂಡವಾದ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿ ಬೆಳ್ಳಿ ಗಳಿಸಿತು. ಅಮರಾವತಿ ವಿವಿ ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅಂಗಣದಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಮೈಸೂರು ವಿವಿ ತಂಡ 2-1 ಗೋಲುಗಳಿಂದ ರಾಂಚಿ ವಿವಿಯನ್ನು ಮಣಿಸಿ ಮುನ್ನಡೆಯಿತು.
ಬ್ಯಾಡ್ಮಿಂಟನ್‌ನಲ್ಲಿ ಜೈನ್‌ಗೆ ಗೆಲುವು
ಪುರುಷರ ಮತ್ತು ಮಹಿಳೆಯರ ಬ್ಯಾಡ್ಮಿಂಟನ್ ತಂಡ ವಿಭಾಗದಲ್ಲಿ ಜೈನ್ ವಿವಿ ತಂಡ ಜಯ ಗಳಿಸಿತು. ಪುರುಷರ ತಂಡ ಸಾವಿತ್ರಿಬಾಯಿ ಫುಲೆ ವಿವಿಯನ್ನು 3-0ಯಿಂದ ಮಣಿಸಿತು. ಮಹಿಳಾ ತಂಡ ಎಸ್ಆರ್‌ಎಂ ತಾಂತ್ರಿಕ ವಿವಿ ವಿರುದ್ಧ 2-0 ಅಂತರದಲ್ಲಿ ಗೆದ್ದಿತು.
ಪದಕ ಪಟ್ಟಿಯಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳು
ವಿಶ್ವವಿದ್ಯಾಲಯ;ಚಿನ್ನ;ಬೆಳ್ಳಿ;ಕಂಚು;ಒಟ್ಟು;ಸ್ಥಾನ
ಜೈನ್;7;2;1;10;1
ಬೆಂಗಳೂರು;–;1;1;2;29
ರಾಜೀವ್‌ಗಾಂಧಿ;–;–;2;2;42
ಕ್ರೈಸ್ಟ್;–;–;1;1;45
ರಾಮಯ್ಯ;–;–;1;1;48
ಮಂಗಳೂರು;–;–;1;1;50
ಪಿಇಎಸ್;–;–;1;1;51
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.