ADVERTISEMENT

ಆಸ್ಟ್ರೇಲಿಯಾ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣಯ್ ಶುಭಾರಂಭ

ಪಿಟಿಐ
Published 12 ಜೂನ್ 2024, 19:39 IST
Last Updated 12 ಜೂನ್ 2024, 19:39 IST
ಪ್ರಣಯ್
ಪ್ರಣಯ್   

ಸಿಡ್ನಿ: ಭಾರತದ ಎಚ್‌.ಎಸ್‌. ಪ್ರಣಯ್‌ ಅವರು ಆಸ್ಟ್ರೇಲಿಯಾ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಬುಧವಾರ ನಡೆದ ಪುರುಷರ ಸಿಂಗನ್ಸ್‌ನ ಮೊದಲ ಸುತ್ತಿನಲ್ಲಿ 21–10, 23–21ರಿಂದ ಬ್ರೆಜಿಲ್‌ನ ಯಗೊರ್ ಕೊಯೆಲ್ಹೋ ಅವರನ್ನು ಹಿಮ್ಮೆಟ್ಟಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಕಿರಣ್‌ ಜಾರ್ಜ್‌ 21–17, 21–10ರಿಂದ ಕೆನಡಾದ ಕ್ಸಿಯಾಡಾಂಗ್ ಶೆಂಗ್ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.

ADVERTISEMENT

ಮಹಿಳೆಯರ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್‌ 21-14, 21-11ರಿಂದ ಉಕ್ರೇನ್‌ನ ಪೋಲಿನಾ ಬುಹ್ರೋವಾ ಅವರನ್ನು ಸೋಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.