ADVERTISEMENT

ವಿಶ್ವ ಬ್ಲಿಟ್ಜ್‌ ಚೆಸ್‌: 2ನೇ ಸ್ಥಾನದಲ್ಲಿ ಹಂಪಿ

ಅಗ್ರಸ್ಥಾನದಲ್ಲಿ ರಷ್ಯಾದ ಲಾಗ್ನೊ

ಪಿಟಿಐ
Published 30 ಡಿಸೆಂಬರ್ 2019, 19:45 IST
Last Updated 30 ಡಿಸೆಂಬರ್ 2019, 19:45 IST
ಕೊನೆರು ಹಂಪಿ
ಕೊನೆರು ಹಂಪಿ   

ಮಾಸ್ಕೊ: ವಿಶ್ವ ರ‍್ಯಾಪಿಡ್‌ ಮತ್ತು ಬ್ಲಿಟ್ಸ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ ಜೀವಂತವಾಗಿ ಉಳಿಸಿಕೊಂಡಿದ್ದಾರೆ. ಬ್ಲಿಟ್ಜ್‌ (ಅತಿ ವೇಗದ) ವಿಭಾಗದಲ್ಲಿ ಅವರು ಮೂವರು ಆಟಗಾರ್ತಿಯರೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

32 ವರ್ಷದ ಹಂಪಿ ಶನಿವಾರ ರ‍್ಯಾಪಿಡ್ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದರು.

ಎರಡು ದಿನಗಳ ಬ್ಲಿಟ್ಜ್‌ ಚಾಂಪಿಯನ್‌ಷಿಪ್‌ನ ಮೊದಲ ಐದು ಸುತ್ತುಗಳ ಪಂದ್ಯಗಳನ್ನು ಗೆದ್ದ ಭಾರತದ ಆಟಗಾರ್ತಿ ಒಂದು ಹಂತದಲ್ಲಿ ಅಗ್ರಸ್ಥಾನದದಲ್ಲಿದ್ದರು. ಆದರೆ ನಂತರ ಎರಡು ಪಂದ್ಯ ಡ್ರಾ ಮಾಡಿಕೊಂಡ ಹಂಪಿ, ಎಂಟನೇ ಸುತ್ತಿನ ಪಂದ್ಯ ಗೆದ್ದುಕೊಂಡರು. ಭಾನುವಾರದ ಕೊನೆಯ ಪಂದ್ಯದಲ್ಲಿ ಅವರು ರಷ್ಯಾದ ಕ್ಯಾತರಿನಾ ಲಾಗ್ನೊ ಅವರಿಗೆ ಮಣಿದರು.

ADVERTISEMENT

2018ರ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ಲಾಗ್ನೊ, 9 ಸುತ್ತುಗಳಿಂದ ಎಂಟು ಪಾಯಿಂಟ್ಸ್‌ ಸಂಗ್ರಹಿಸಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ನಾಲ್ವರು ಆಟಗಾರ್ತಿಯರು– ಅಲೆಕ್ಸಾಂಡ್ರಾ ಕೊಸ್ಟೆನಿಯುಕ್‌, ಕೋನೇರು ಹಂಪಿ, ಡೇರಿಯಾ ಚಾರೊಚ್ಕಿನಾ ಮತ್ತು ಅಲಿನಾ ಕಾಶ್ಲಿನ್‌ಕಾಯಾ– ತಲಾ ಏಳು ಪಾಯಿಂಟ್‌ಗಳೊಡನೆ ಲಾಗ್ನೊ ಬೆನ್ನ ಹಿಂದೆ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.