ADVERTISEMENT

ಉದ್ದೀಪನ ಮದ್ದು ತಡೆಗೆ ಜೆಎಸ್‌ಡಬ್ಲ್ಯು ಕ್ರಮ

ಪಿಟಿಐ
Published 10 ಜನವರಿ 2024, 21:16 IST
Last Updated 10 ಜನವರಿ 2024, 21:16 IST
ಉದ್ದೀಪನ ಮದ್ದು ಪರೀಕ್ಷೆ
ಉದ್ದೀಪನ ಮದ್ದು ಪರೀಕ್ಷೆ   

ಬೆಂಗಳೂರು: ಕ್ರೀಡಾಪಟುಗಳಲ್ಲಿ ಉದ್ದೀಪನ ಮದ್ದು ಸೇವನೆಯ ಪಿಡುಗು ಮಟ್ಟ ಹಾಕಲು ಜೆಎಸ್‌ಡಬ್ಲ್ಯು ಇನ್‌ಸ್ಪೈರ್ ಇನ್ಸಿಟಿಟ್ಯೂಟ್‌ ಆಫ್ ಸ್ಪೋರ್ಟ್ಸ್‌ ಸಂಸ್ಥೆಯು  ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಗಳೊಂದಿಗೆ ಕೈಜೋಡಿಸಲು ನಿರ್ಧರಿಸಿದೆ.

ಈಚೆಗೆ ಬಳ್ಳಾರಿಯಲ್ಲಿರುವ  ಈ ಸಂಸ್ಥೆಯು ಕ್ರೀಡಾ ತರಬೇತಿ ಕೇಂದ್ರದಲ್ಲಿ ಈಚೆಗೆ ಉದ್ದೀಪನ ಮದ್ದು ಬಳಕೆ ಮಾಡಿದ್ದರೆನ್ನಲಾದ 23 ಆಟಗಾರರನ್ನು ಹೊರಹಾಕಿತ್ತು. ಕಳೆದ ಅಕ್ಟೋಬರ್‌ನಲ್ಲಿ ಬೇರೆ ಬೇರೆ ಕ್ರೀಡೆಗಳಲ್ಲಿ ಇರುವ ಅಥ್ಲೀಟ್‌ಗಳು ಇದರಲ್ಲಿದ್ದರು.

‘ನಮ್ಮ ಕ್ಯಾಂಪಸ್‌ನಲ್ಲಿ ಕೆಲವು ಸಿರಿಂಜ್‌ಗಳು ಪತ್ತೆಯಾಗಿದ್ದವು ಮತ್ತು ಶಿಸ್ತು ಕ್ರಮವಾಗಿ ಕೆಲವು ಅಥ್ಲೀಟ್‌ಗಳನ್ನು ಇಲ್ಲಿಂದ ಹೊರಹಾಕಲಾಗಿತ್ತು. ನಮ್ಮ ಆಂತರಿಕ ನಿಯಮಗಳು ಕಟ್ಟುನಿಟ್ಟಾಗಿವೆ. ಅವುಗಳನ್ನು ಪಾಲಿಸುವುದು ಕಡ್ಡಾಯ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಶ್ದಿ ವಾರ್ಲೆ ಸುದ್ದಿಸಂಸ್ಥೆಗೆ ನೀಡಿರುವ ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

‘ಈ ಕ್ರಮದ ಮೂಲಕ ನಮ್ಮ ಸಂಸ್ಥೆಯು ನಿಯಮಗಳೊಂದಿಗೆ ರಾಜೀ ಮಾಡಿಕೊಳ್ಳುವುದಿಲ್ಲ ಮತ್ತು ತಪ್ಪು ನಡೆಯಲು ಆಸ್ಪದ ಕೊಡುವುದಿಲ್ಲ ಎಂಬ ಸಂದೇಶ ನೀಡಿದೆ. ಇಲ್ಲಿಯ ಅಥ್ಲೀಟ್‌ಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದೂ ಅವರು ಹೇಳಿದ್ದಾರೆ.

‘ಜೆಎಸ್‌ಡಬ್ಲ್ಯು ಐಐಎಸ್ ದೇಶದ ಖ್ಯಾತನಾಮ ಅಥ್ಲೀಟ್‌ಗಳಿಗೆ ತರಬೇತಿ ನೀಡುತ್ತಿದೆ. ಆದ್ದರಿಂದ ಎಲ್ಲ ರೀತಿಯಿಂದಲೂ ಉತ್ತಮಗೊಳಿಸಲು ನಾಡಾ ಮತ್ತು ವಾಡಾದ ನೆರವು ಕೇಳಿದ್ದೇವೆ. ಅವರೊಂದಿಗೆ ಕಾರ್ಯನಿರ್ವಹಿಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.