ನವದೆಹಲಿ: ಕ್ರೀಡೆಯಲ್ಲಿ ಲಿಂಗ ಸಮಾನತೆಯ ಉದ್ದೇಶದಿಂದ ತನ್ನ ಕೌನ್ಸಿಲ್‌ನಲ್ಲಿ ಶೇಕಡ 40ರಷ್ಟು ಮಹಿಳೆಯರಿಗೆ ಅವಕಾಶ ನೀಡುವುದಾಗಿ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯು ಬುಧವಾರ ಶಪಥ ಮಾಡಿದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅಥ್ಲೆಟಿಕ್ಸ್ ಸಂಸ್ಥೆಯು, ಉಕ್ರೇನ್‌ನ ಮಹಿಳಾ ಅಥ್ಲೀಟ್‌ಗಳಿಗೆ ನೆರವು ನೀಡುವುದು ಸೇರಿದಂತೆ ಕೆಲವು ಉಪಕ್ರಮಗಳನ್ನು ಪ್ರಕಟಿಸಿದೆ.
‘ಸಂಸ್ಥೆಯ ಕೌನ್ಸಿಲ್‌ನಲ್ಲಿ ಮಹಿಳಾ ಸದಸ್ಯರ ಸಂಖ್ಯೆಯನ್ನು ಈಗಿರುವ 8ರಿಂದ 10ಕ್ಕೆ ಹೆಚ್ಚಿಸಲಾಗುವುದು. ಈ ವರ್ಷದ ಆಗಸ್ಟ್‌ನಲ್ಲಿ ನಡೆಯಲಿರುವ ಸಂಸ್ಥೆಯ ಚುನಾವಣೆಯಲ್ಲಿ ಓರ್ವ ಮಹಿಳಾ ಉಪಾಧ್ಯಕ್ಷರನ್ನು ಆಯ್ಕೆ ಮಾಡ ಲಾಗುವುದು‘ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.