ADVERTISEMENT

Asian Games | Hockey: ಜಪಾನ್ ಮಣಿಸಿ ಕಂಚು ಗೆದ್ದ ಭಾರತದ ಮಹಿಳೆಯರ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2023, 10:16 IST
Last Updated 7 ಅಕ್ಟೋಬರ್ 2023, 10:16 IST
<div class="paragraphs"><p>ಭಾರತ ಮಹಿಳಾ ತಂಡದ ಸಂಭ್ರಮ</p></div>

ಭಾರತ ಮಹಿಳಾ ತಂಡದ ಸಂಭ್ರಮ

   

(ರಾಯಿಟರ್ಸ್ ಚಿತ್ರ)

ಹಾಂಗ್‌ಝೌ: ಏಷ್ಯನ್ ಕ್ರೀಡಾಕೂಟದ ಮಹಿಳಾ ಹಾಕಿ ವಿಭಾಗದಲ್ಲಿ ಭಾರತದ ತಂಡ ಕಂಚಿನ ಪದಕವನ್ನು ಗೆದ್ದುಕೊಂಡಿದೆ.

ADVERTISEMENT

ಕಂಚಿನ ಪದಕಕ್ಕಾಗಿ ಶನಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಭಾರತ 2-1 ಗೋಲುಗಳ ಅಂತರದ ಗೆಲುವು ದಾಖಲಿಸಿತು.

ಪುರುಷರ ಹಾಕಿ ವಿಭಾಗದಲ್ಲಿ ಭಾರತ ಚಿನ್ನದ ಪದಕ ಜಯಿಸಿದೆ. ಇದಕ್ಕೆ ಸಮಾನವಾದ ಸಾಧನೆ ಮಾಡಲು ಮಹಿಳಾ ತಂಡಕ್ಕೆ ಸಾಧ್ಯವಾಗಲಿಲ್ಲ.

ಸೆಮಿಫೈನಲ್‌ನಲ್ಲಿ ಅತಿಥೇಯ ಚೀನಾ ವಿರುದ್ಧ 4-0 ಗೋಲುಗಳ ಅಂತರದ ಸೋಲಿಗೆ ಶರಣಾಗಿತ್ತು. ಆದರೂ ಈಗ ಜಪಾನ್ ತಂಡವನ್ನು ಮಣಿಸಿ ಕನಿಷ್ಠ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಮತ್ತೊಂದೆಡೆ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ಪುರುಷ ತಂಡವು, ಫೈನಲ್‌ನಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಮಣಿಸಿ ಸ್ವರ್ಣ ಪದಕದೊಂದಿಗೆ ಮುಂದಿನ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.