ನವದೆಹಲಿ: ಮುಂದಿನ ವರ್ಷ ನಡೆಯಲಿರುವ 17 ವರ್ಷದೊಳಗಿನವರ ಫಿಫಾ ಮಹಿಳಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಆಯೋಜಿಸುವ ಅವಕಾಶ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ಗೆ ಲಭಿಸಿದೆ. ಈ ವಿಷಯ ವನ್ನು ಫೆಡರೇಷನ್ ಅಧ್ಯಕ್ಷ ಪ್ರಫುಲ್ ಪಟೇಲ್ ಶನಿವಾರ ತಿಳಿಸಿದ್ದಾರೆ.
ಫಿಫಾದ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುವ ಅವಕಾಶ ಎರಡನೇ ಬಾರಿ ಭಾರತದ ಪಾಲಾಗಿದೆ. ಮೂರು ವರ್ಷಗಳ ಹಿಂದೆ 17 ವರ್ಷದೊಳಗಿನ ಪುರುಷರ ವಿಶ್ವಕಪ್ ಟೂರ್ನಿ ಭಾರ ತದಲ್ಲೇ ನಡೆದಿತ್ತು.‘17 ವರ್ಷದೊಳಗಿನ ಪುರುಷರ ವಿಶ್ವಕಪ್ ಆಯೋಜಿಸಿದ ರೀತಿಗೆ ಫಿಫಾ ಖುಷಿಗೊಂಡಿದೆ. ಹೀಗಾಗಿ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ವಹಿಸಿದೆ. ಇದು ಸಂತೋಷದ ವಿಷಯ. ಫಿಫಾ ಮತ್ತು ಭಾರತ ಸರ್ಕಾರಕ್ಕೆ ಫೆಡರೇಷನ್ ಋಣಿಯಾಗಿದೆ’ ಎಂದು ಪ್ರಫುಲ್ ಪಟೇಲ್ ಹೇಳಿದರು.
ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಈ ಅವಕಾಶಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ‘ಇದೊಂದು ಐತಿ ಹಾಸಿಗ ಕ್ಷಣ. ಇದನ್ನು ಮಾತಿನಲ್ಲಿ ಬಣ್ಣಿ ಸಲು ನನಗೆ ಸಾಧ್ಯವಾಗುತ್ತಿಲ್ಲ. ಕಳೆದ ಬಾರಿ 17 ವರ್ಷದೊಳಗಿನ ಪುರುಷರ ಆಯೋಜಿಸಿದ ಬೆನ್ನಲ್ಲೇ ಈ ಅವಕಾಶ ಲಭಿಸಿದ್ದು ಸಂಭ್ರಮ ತಂದಿದೆ’ ಎಂದರು.
17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ನ ಮೊದಲ ಆವೃತ್ತಿ 2008ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿತ್ತು. ಇಲ್ಲಿಯ ವರೆಗೆ ಆರು ಆವೃತ್ತಿಗಳು ನಡೆದಿವೆ. ಕಳೆದ ಬಾರಿಯ ಟೂರ್ನಿಯಲ್ಲಿ ಸ್ಪೇನ್ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಮೆಕ್ಸಿಕೊ ತಂಡವನ್ನು ಸ್ಪೇನ್ 2–1ರಿಂದ ಮಣಿಸಿತ್ತು. ಉತ್ತರ ಕೊರಿಯಾ (2008, 2016), ದಕ್ಷಿಣ ಕೊರಿಯಾ (2010) ಮತ್ತು ಜಪಾನ್ (2014) ಏಷ್ಯಾದಿಂದ ಉತ್ತಮ ಸಾಧನೆ ಮಾಡಿವೆ. ಫ್ರಾನ್ಸ್ (2012) ಮತ್ತು ಸ್ಪೇನ್ ಪ್ರಶಸ್ತಿ ಗೆದ್ದ ಏಷ್ಯಾದ ಹೊರಗಿನ ತಂಡಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.