ನವದೆಹಲಿ: ಭಾರತದ ಆಟಗಾರ ಲಕ್ಷ್ಯ ಸೇನ್ ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್, ಸಿಂಗಪುರದ ಲೋಹ್ ಕೀನ್ ಯಿವ್ ಅವರನ್ನು ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಭಾನುವಾರ ಲಕ್ಷ್ಯ ಮತ್ತು ಲೋಹ್ ನಡುವೆ ನಡೆದ ಪೈಪೋಟಿಯಲ್ಲಿ 24-22, 21-17 ಅಂತರದಲ್ಲಿ ಲಕ್ಷ್ಯ ಗೆಲುವು ಸಾಧಿಸಿದರು. ಉತ್ತರಾಖಂಡದ ಅಲ್ಮೊರಾದ 20 ವರ್ಷದ ಲಕ್ಷ್ಯ 'ವಿಶ್ವ ಟೂರ್ ಸೂಪರ್ 500' ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದರು.
ಆರಂಭದ ಗೇಮ್‌ನಲ್ಲಿ ಸಿಂಗಪುರದ ಲೋಹ್ 2–0 ಅಂತರದಿಂದ ಮುಂದಿದ್ದರು. ಅನಂತರ ಪುಟಿದೆದ್ದ ಲಕ್ಷ್ಯ ನಾಲ್ಕು ಪಾಯಿಂಟ್‌ಗಳನ್ನು ತಮ್ಮದಾಗಿಸಿಕೊಂಡರು. ಒಂದು ಹಂತದಲ್ಲಿ ಇಬ್ಬರ ಸ್ಕೋರ್ 19–19 ಆಗಿತ್ತು. ಆದರೆ, 24–22ರಲ್ಲಿ ಲಕ್ಷ್ಯ ಗೆಲುವು ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಲೋಹ್ ಮಾಡಿದ ಕೆಲವು ತಪ್ಪುಗಳಿಂದ ಪಾಯಿಂಟ್ ಲಕ್ಷ್ಯ ಪಾಲಾಯಿತು. ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೆ ಲಕ್ಷ್ಯ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಟ್ಟ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.