ADVERTISEMENT

ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಪೋಸ್ಟ್‌ಕಾರ್ಡ್ ಮೂಲಕ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2024, 5:34 IST
Last Updated 25 ಸೆಪ್ಟೆಂಬರ್ 2024, 5:34 IST
<div class="paragraphs"><p>ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಸ್ಪರ್ಧಿಗಳು&nbsp;</p></div>

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಸ್ಪರ್ಧಿಗಳು 

   

(ಚಿತ್ರ ಕೃಪೆ: X/@mansukhmandviya)

ಬೆಂಗಳೂರು: 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಪದಕ ವಿಜೇತರನ್ನು ಗೌರವಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆಯು 'ಪೋಸ್ಟ್‌ಕ್ರಾಸಿಂಗ್ ಸೊಸೈಟಿ ಆಫ್‌ ಇಂಡಿಯಾ' ಸಹಯೋಗದಲ್ಲಿ 28 ಪೋಸ್ಟ್‌ಕಾರ್ಡ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ADVERTISEMENT

ಜನರಲ್‌ ಪೋಸ್ಟ್‌ ಆಫೀಸ್‌ (ಜಿಪಿಒ) ಬುಧವಾರ ಈ ಕಾರ್ಯಕ್ರಮ ನಡೆಯಲಿದೆ.

ಪ್ಯಾರಿಸ್‌ನಲ್ಲಿ ನಡೆದ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ, 7 ಚಿನ್ನದ ಪದಕಗಳೂ ಸೇರಿದಂತೆ ಒಟ್ಟು 29 ಪದಕಗಳನ್ನು ಜಯಿಸಿದೆ. ಟೋಕಿಯೊದಲ್ಲಿ ನಡೆದ 2020ರ ಕ್ರೀಡಾಕೂಟದಲ್ಲಿ 19 ಪದಕ ಗೆದ್ದದ್ದು ಇದುವರೆಗೆ ಸಾಧನೆಯಾಗಿತ್ತು.

ಈ ವರ್ಷದ ಸಾಧನೆಯ ಸ್ಮರಣಾರ್ಥ, ಅಥ್ಲೀಟ್‌ಗಳಿಗೆ ಮೀಸಲಾದ ಚಿತ್ರಗಳನ್ನೊಳಗೊಂಡ ಪೋಸ್ಟ್‌ಕಾರ್ಡ್‌ಗಳ ಸಂಗ್ರಾಹಕ ಆವೃತ್ತಿಯನ್ನು ಜಿಪಿಒ ಪ್ರಕಟಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.