ADVERTISEMENT

ವಿಶ್ವಕಪ್‌ ಮಹಿಳಾ ಹಾಕಿ: ಭಾರತ– ಚೀನಾ ಪಂದ್ಯ ಡ್ರಾ

ಪಿಟಿಐ
Published 5 ಜುಲೈ 2022, 16:54 IST
Last Updated 5 ಜುಲೈ 2022, 16:54 IST
ಭಾರತ ತಂಡದ ಲಾಲ್‌ರೆಮ್ಸಿಯಾಮಿ ಅವರ ಗೋಲು ಗಳಿಸುವ ಪ್ರಯತ್ನವನ್ನು ಚೀನಾ ಗೋಲ್‌ಕೀಪರ್ ತಡೆದರು –ಎಎಫ್‌ಪಿ ಚಿತ್ರ
ಭಾರತ ತಂಡದ ಲಾಲ್‌ರೆಮ್ಸಿಯಾಮಿ ಅವರ ಗೋಲು ಗಳಿಸುವ ಪ್ರಯತ್ನವನ್ನು ಚೀನಾ ಗೋಲ್‌ಕೀಪರ್ ತಡೆದರು –ಎಎಫ್‌ಪಿ ಚಿತ್ರ   

ಆ್ಯಮ್‌ಸ್ಟೆಲ್‌ವೀನ್: ಗೋಲು ಗಳಿಸುವ ಹಲವು ಅವಕಾಶಗಳನ್ನು ಹಾಳುಮಾಡಿಕೊಂಡ ಭಾರತ ತಂಡ, ಎಫ್‌ಐಎಚ್‌ ವಿಶ್ವಕಪ್‌ ಮಹಿಳಾ ಹಾಕಿ ಟೂರ್ನಿಯಲ್ಲಿ ಚೀನಾ ಜತೆ 1–1 ಗೋಲುಗಳ ಡ್ರಾ ಸಾಧಿಸಿತು.

ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಬೇಕೆಂಬ ಸವಿತಾ ಪೂನಿಯಾ ಬಳಗದ ಕನಸು ಈಡೇರಲಿಲ್ಲ. ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್‌ ಜತೆ 1–1 ಗೋಲುಗಳ ಡ್ರಾ ಮಾಡಿಕೊಂಡಿತ್ತು.

ಚೀನಾ ವಿರುದ್ಧ ಗೆಲ್ಲುವ ನೆಚ್ಚಿನ ತಂಡ ಎಂಬ ಹಣೆಪಟ್ಟಿಯೊಂದಿಗೆ ಭಾರತ ಕಣಕ್ಕಿಳಿದಿತ್ತು. ಆದರೆ ಆಕ್ರಮಣಕಾರಿ ಆಟವಾಡಿದಚೀನಾ ತಂಡಕ್ಕೆ ಜೆಂಗ್ ಜಿಯಾಲಿ 25ನೇ ನಿಮಿಷದಲ್ಲಿ ಮುನ್ನಡೆ ತಂದುಕೊಟ್ಟರು. ವಂದನಾ ಕಟಾರಿಯಾ 44ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಗುರಿಸೇರಿಸಿ ಸಮಬಲ ತಂದಿತ್ತರು.

ADVERTISEMENT

ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ತಂಡದವರು ಗೆಲುವಿನ ಗೋಲಿಗಾಗಿ ಶಕ್ತಿಮೀರಿ ಪ್ರಯತ್ನಿಸಿದರೂ ಯಶಸ್ಸು ದೊರೆಯಲಿಲ್ಲ.

ಗುರುವಾರ ನಡೆಯುವ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್‌ ಜತೆ ಪೈಪೋಟಿ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.