ADVERTISEMENT

ಜೂನಿಯರ್ ಅಥ್ಲೆಟಿಕ್ಸ್: ಪೂಜಾ, ಸಿದ್ಧಾರ್ಥ್‌ ಕೂಟ ದಾಖಲೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 21:48 IST
Last Updated 11 ಸೆಪ್ಟೆಂಬರ್ 2024, 21:48 IST
ಬೆಳ್ಳಿ ಪದಕ ಗೆದ್ದ ಕರ್ನಾಟಕದ ಸುಧೀಕ್ಷಾ
ಬೆಳ್ಳಿ ಪದಕ ಗೆದ್ದ ಕರ್ನಾಟಕದ ಸುಧೀಕ್ಷಾ   

ಬೆಂಗಳೂರು: ಭಾರತದ ಪೂಜಾ ಮತ್ತು ಸಿದ್ಧಾರ್ಥ ಚೌಧರಿ ಅವರು ಚೆನ್ನೈನಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಹೈಜಂಪ್‌ ಮತ್ತು ಪುರುಷರ ಷಾಟ್‌ಪಟ್‌ನಲ್ಲಿ ಕೂಟ ದಾಖಲೆ ಬರೆದರು.

ಬುಧವಾರ ನಡೆದ ಸ್ಪರ್ಧೆಯಲ್ಲಿ ಪೂಜಾ 1.80 ಮೀ. ಎತ್ತರ ಜಿಗಿದು (ಹಿಂದಿನ ದಾಖಲೆ 1.75 ಮೀ.) ಚಾಂಪಿಯನ್‌ ಆದರು. ಸಿದ್ಧಾರ್ಥ್ 19.19 ಮೀ. ಸಾಧನೆಯೊಂದಿಗೆ (ಹಿಂದಿನ ದಾಖಲೆ 18.53 ಮೀ) ಚಿನ್ನಕ್ಕೆ ಕೊರಳೊಡ್ಡಿದರು.

ಭಾರತ ತಂಡದಲ್ಲಿರುವ ಕರ್ನಾಟಕದ ಸುಧೀಕ್ಷಾ ಮಹಿಳೆಯರ 100 ಮೀಟರ್‌ ಓಟದಲ್ಲಿ (11.92ಸೆ) ಬೆಳ್ಳಿ ಗೆದ್ದರೆ, ಬೋಪಣ್ಣ ಕ್ಲಾಪ್ಪ ಪುರುಷರ 800 ಮೀಟರ್‌ ಓಟದಲ್ಲಿ (1ನಿ.50.45ಸೆ) ಕಂಚಿನ ಪದಕ ಗೆದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.