ADVERTISEMENT

ವಿಶ್ವ ಪ್ಯಾರಾ ಆರ್ಚರಿ: ಶ್ಯಾಮ್, ಜ್ಯೋತಿ ಐತಿಹಾಸಿಕ ಸಾಧನೆ

ಪಿಟಿಐ
Published 23 ಫೆಬ್ರುವರಿ 2022, 18:29 IST
Last Updated 23 ಫೆಬ್ರುವರಿ 2022, 18:29 IST

ದುಬೈ: ಭಾರತದ ಶ್ಯಾಮ್ ಸುಂದರ್‌ ಸ್ವಾಮಿ ಮತ್ತು ಜ್ಯೋತಿ ಬಲಿಯಾನ್ ಅವರು ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ತಲುಪುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದಾರೆ.

ಬುಧವಾರ ಕಾಂಪೌಂಡ್‌ ಮಿಶ್ರ ತಂಡ ವಿಭಾಗದಲ್ಲಿ ಈ ಜೋಡಿಯು ಪ್ರಶಸ್ತಿ ಸುತ್ತಿಗೆ ತಲುಪಿದ್ದು ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಭಾರತದ ಜೋಡಿಯು 151–145ರಿಂದ ಫ್ರಾನ್ಸ್‌ನ ಜೂಲಿ ಚುಪಿನ್‌ ಮತ್ತು ಥಿಯರಿ ಜೌಸುಮ್ ಅವರನ್ನು ಸೋಲಿಸಿತು.

ಶುಕ್ರವಾರ ನಡೆಯುವ ಫೈನಲ್ ಹಣಾಹಣಿಯಲ್ಲಿ ಭಾರತದ ಜೋಡಿಗೆ ರಷ್ಯಾ ತಂಡದ ಸವಾಲು ಎದುರಾಗಿದೆ.

ADVERTISEMENT

ಭಾರತದ ಪ್ಯಾರಾ ಆರ್ಚರ್‌ಗಳು 2017ರಿಂದ ಪ್ರತಿ ಟೂರ್ನಿಯಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಆದರೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಒಲಿದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.