ADVERTISEMENT

ಡಿ.2ರಿಂದ ಇಂಡಿಯನ್‌ ಬಾಕ್ಸಿಂಗ್‌ ಲೀಗ್‌

ಪಿಟಿಐ
Published 17 ನವೆಂಬರ್ 2019, 21:13 IST
Last Updated 17 ನವೆಂಬರ್ 2019, 21:13 IST
ಮೇರಿ ಕೋಮ್‌ (ಬಲ)
ಮೇರಿ ಕೋಮ್‌ (ಬಲ)   

ನವದೆಹಲಿ: ಮೊತ್ತಮೊದಲ ಒಲಿಂಪಿಕ್‌ ಮಾದರಿಯ ಇಂಡಿಯನ್ ಬಾಕ್ಸಿಂಗ್‌ ಲೀಗ್‌ ಡಿಸೆಂಬರ್‌ 2ರಿಂದ 21ರವರೆಗೆ ನಡೆಯಲಿದೆ ಎಂದು ಶುಕ್ರವಾರ ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.

ಎಂ.ಸಿ.ಮೇರಿ ಕೋಮ್‌, ಸೋನಿಯಾ ಲಾಥರ್‌, ಅಮಿತ್‌ ಪಂಘಲ್‌, ಮನೋಜ್‌ಕುಮಾರ್‌ ಸೇರಿದಂತೆ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ ಬಾಕ್ಸರ್‌ಗಳು ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರೊ ಸ್ಪೋರ್ಟಿಫೈ ಹಾಗೂ ಸ್ಪೋರ್ಟ್ಸ್‌ಲೈವ್‌ ಕಂಪೆನಿಯ ಮಾಲೀಕರು ಜಂಟಿಯಾಗಿ ಈ ಟೂರ್ನಿ ನಡೆಸುತ್ತಿದ್ದಾರೆ. ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ಚಾನೆಲ್‌ನಲ್ಲಿ ಟೂರ್ನಿ ನೇರಪ್ರಸಾರಗೊಳ್ಳಲಿದೆ.

ADVERTISEMENT

ಟೂರ್ನಿಯು ಮೂರು ನಗರಗಳಲ್ಲಿ ನಡೆಯುವ ಸಾಧ್ಯತೆಯಿದೆ. ಆರು ಫ್ರಾಂಚೈಸ್‌ ತಂಡಗಳು ಭಾಗವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.