ADVERTISEMENT

ಉದ್ದೀಪನ ಮದ್ದು ಸೇವನೆ: ಸಿಕ್ಕಿಬಿದ್ದ ರಚನಾ ಕುಮಾರಿ

ಪಿಟಿಐ
Published 24 ನವೆಂಬರ್ 2023, 15:48 IST
Last Updated 24 ನವೆಂಬರ್ 2023, 15:48 IST
ಉದ್ದೀಪನ ಮದ್ದು ಪರೀಕ್ಷೆ
ಉದ್ದೀಪನ ಮದ್ದು ಪರೀಕ್ಷೆ   

ನವದೆಹಲಿ (ಪಿಟಿಐ): ಚೀನಾದ ಹಾಂಗ್‌ಔನಲ್ಲಿ ಈಚೆಗೆ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಭಾರತದ ಹ್ಯಾಮರ್ ಥ್ರೋ ಅಥ್ಲೀಟ್ ರಚನಾ ಕುಮಾರಿ ಅವರು ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಅಂತರರಾಷ್ಟ್ರೀಯ ಅಥೆಟಿಕ್ಸ್‌ ಫೆಡರೇಷನ್ ಭದ್ರತಾ ಘಟಕ (ಎಐಯು) ಏಷ್ಯನ್ ಕ್ರೀಡಾಕೂಟಕ್ಕೂ ಮೊದಲು ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿತ್ತು.

30 ವರ್ಷದ ರಚನಾಕುಮಾರಿ ಅವರ ಮಾದರಿಯಲ್ಲಿ ನಿಷೇಧಿತ ಮದ್ದುಗಳಾದ ಸ್ಟ್ಯಾನೊಜೊಲಲ್, ಮೆಟಾಂಡಿನೊನ್ ಮತ್ತು ಡಿಹೈಡ್ರೊಕ್ಲೊರೊಮಿಥೈಲ್‌ಟೆಸ್ಟೊಸ್ಟಿರಾನ್ (ಡಿಎಚ್‌ಸಿಎಂಟಿ) ಅಂಶಗಳು ಇರುವುದು ಪತ್ತೆಯಾಗಿದೆ. ಅವರನ್ನು ತಾತ್ಕಾಲಿಕ ಅಮಾನತು ಮಾಡಲಾಗಿದೆ.

ADVERTISEMENT

‘ಪಟಿಯಾಲದಲ್ಲಿ ಸೆಪ್ಟೆಂಬರ್ 24ರಂದು ಪರೀಕ್ಷೆಗಾಗಿ ಮೂತ್ರದ ಮಾದರಿ ನೀಡಿದ್ದೆ. ವಿದೇಶದ ಡೋಪ್ ಟೆಸ್ಟಿಂಗ್ ಏಜೆನ್ಸಿಯವರು ಮಾದರಿಯನ್ನು ಸಂಗ್ರಹಿಸಿದ್ದರು’ ಎಂದು ಉತ್ತರಪ್ರದೇಶದ ರಚನಾ ತಿಳಿಸಿದ್ದಾರೆ.

‘ರಾಷ್ಟ್ರೀಯ ಉದ್ದೀಪನ ಮದ್ದು ಘಟಕ (ನಾಡಾ) ಯಾವುದೇ ರೀತಿಯ ಮಾದರಿಯನ್ನು ಸಂಗ್ರಹಿಸಿಲ್ಲ. ಆದರೆ ಎಐಯು ಈ ಪರೀಕ್ಷೆ ನಡೆಸಿರಬಹುದು. ನಮ್ಮ ಬಳಿ ಹೆಚ್ಚು ಮಾಹಿತಿ ಇಲ್ಲ’ ಎಂದು ನಾಡಾ ಮೂಲಗಳು ತಿಳಿಸಿವೆ.

ಏಷ್ಯನ್ ಗೇಮ್ಸ್‌ನಲ್ಲಿ ಅವರು ಮಹಿಳೆಯರ ವಿಭಾಗದಲ್ಲಿ 58.13 ಮೀಟರ್ಸ್ ದೂರ ಹ್ಯಾಮರ್ ಥ್ರೋ ಮಾಡಿ ಒಂಬತ್ತನೇ ಸ್ಥಾನ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.