ಹಾಂಗ್‌ಝೌ (ಪಿಟಿಐ): ಭಾರತ ಪುರುಷರ ಮತ್ತು ಮಹಿಳಾ ತಂಡಗಳು, ಏಷ್ಯನ್ ಕ್ರೀಡಾಕೂಟದ ಚೆಸ್‌ನಲ್ಲಿ ನಿರೀಕ್ಷೆಯಂತೆ ಶನಿವಾರ ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡವು.
ಕಳೆದ ಕೆಲವು ಸುತ್ತುಗಳಿಂದ ಭಾರತ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಎರಡನೇ ಸ್ಥಾನದಲ್ಲೇ ಇತ್ತು. ಮಹಿಳೆಯರ ವಿಭಾಗದ ಕೊನೆಯ ಸುತ್ತಿನಲ್ಲಿ ನಿರೀಕ್ಷೆಯಂತೆ ಭಾರತ 4–0 ಯಿಂದ ದಕ್ಷಿಣ ಕೊರಿಯಾ ಮೇಲೆ ಜಯಗಳಿಸಿತು. ಡಿ.ಹಾರಿಕಾ, ವೈಶಾಲಿ ಆರ್., ವಂತಿಕಾ ಅಗರವಾಲ್ ಮತ್ತು ಸವಿತಾಶ್ರೀ ಭಾಸ್ಕರ್ ತಮ್ಮ ತಮ್ಮ ಪಂದ್ಯಗಳನ್ನು ಗೆದ್ದುಕೊಂಡರು.
ಇನ್ನೊಂದೆಡೆ ಅಗ್ರಸ್ಥಾನದಲ್ಲಿದ್ದ, ಅಗ್ರ ಶ್ರೇಯಾಂಕದ ಚೀನಾ ಸ್ವರ್ಣ ಗೆದ್ದುಕೊಂಡಿತು. ಅದು ಅಂತಿಮ ಸುತ್ತಿನಲ್ಲಿ ದುರ್ಬಲ ಯುಎಇ ವಿರುದ್ಧ 4–0 ಜಯ ದಾಖಲಿಸಿತು. ಅದು ಗರಿಷ್ಠ 18ರಲ್ಲಿ 17 ಮ್ಯಾಚ್ ಪಾಯಿಂಟ್ಸ್ ಸಂಗ್ರಹಿಸಿತು. ಭಾರತ 15 ಮ್ಯಾಚ್ ಪಾಯಿಂಟ್ಸ್ ಸಂಗ್ರಹಿಸಿತು. ಕಜಕಸ್ತಾನ ಕಂಚಿನ ಪದಕ ಪಡೆಯಿತು.
ಅಗ್ರ ಶ್ರೇಯಾಂಕದ ಪುರುಷರ ತಂಡ ಪುರುಷರ ತಂಡ 3.5–0.5 ರಿಂದ ಫಿಲಿಪೀನ್ಸ್ ವಿರುದ್ಧ ಗೆಲುವಿನೊಡನೆ ಅಭಿಯಾನವನ್ನು ಬೆಳ್ಳಿ ಪದಕದೊಡನೆ ಮುಗಿಸಿತು. ಮೂರನೇ ಶ್ರೇಯಾಂಕದ ಇರಾನ್ 16 ಮ್ಯಾಚ್ ಪಾಯಿಂಟ್ಸ್ ಸಂಗ್ರಹಿಸಿ ಮೊದಲ ಸ್ಥಾ ಪಡದರೆ, ಭಾರತ 15 ಮ್ಯಾಚ್ ಪಾಯಿಂಟ್ಸ್ ಪಡೆಯಿತು. ಉಜ್ಬೇಕಿಸ್ತಾನ ಕಂಚಿನ ಪದಕ ಪಡೆದರೆ, ಚೀನಾ ನಾಲ್ಕನೇ ಸ್ಥಾನ ಗಳಿಸಿತು.
ಅರ್ಜುನ್ ಇರಿಗೇಶಿ, ವಿದಿತ್ ಗುಜರಾತಿ ಮತ್ತು ಹರಿಕೃಷ್ಣ ಅವರು ಫಿಲಿಪೀನ್ಸ್ ಎದುರಾಳಿಗಳ ವಿರುದ್ಧ ತಮ್ಮ ಪಂದ್ಯಗಳನ್ನು ಗೆದ್ದುಕೊಂಡರೆ, ಪ್ರಜ್ಞಾನಂದ ತಮ್ಮ ಪಂದ್ಯವನ್ನು ‘ಡ್ರಾ’ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.