ADVERTISEMENT

ಎಲಿಮಿನೇಷನ್‌ ಸುತ್ತಿಗೆ ಭಾರತದ ಪುರುಷರ ರಿಕರ್ವ್ ತಂಡ

ಒಲಿಂಪಿಕ್ಸ್‌ ಅಂತಿಮ ಕ್ವಾಲಿಫೈಯರ್ಸ್‌

ಪಿಟಿಐ
Published 15 ಜೂನ್ 2024, 14:21 IST
Last Updated 15 ಜೂನ್ 2024, 14:21 IST
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ   

ಅಂತಾಲ್ಯ (ಟರ್ಕಿ): ಭಾರತದ ಪುರುಷರ ರಿಕರ್ವ್‌ ತಂಡ, ಒಲಿಂಪಿಕ್ಸ್‌ ಅಂತಿಮ ಕ್ವಾಲಿಫೈಯರ್‌ನಲ್ಲಿ ಅಗ್ರ ಶ್ರೇಯಾಂಕದೊಡನೆ 24 ತಂಡಗಳ ಎಲಿಮಿನೇಷನ್‌ ಸುತ್ತನ್ನು ತಲುಪಿದೆ.

ತರುಣದೀಪ್ ರೈ, ಧೀರಜ್‌ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ ಅವರನ್ನು ಒಳಗೊಂಡ ತಂಡ 2018 ಪಾಯಿಂಟ್ಸ್‌ ಕಲೆಹಾಕಿ, ಚೀನಾ ತೈಪಿ (2008) ಮತ್ತು ಜರ್ಮನಿ (1998) ತಂಡಗಳನ್ನು ಹಿಂದೆಹಾಕಿತು. 32ರ ಸುತ್ತಿನಿಂದ ಅಗ್ರ 24ರ ಸುತ್ತನ್ನು ಪ್ರವೇಶಿಸಿತು.  ಒಟ್ಟು 46 ತಂಡಗಳು ಭಾಗವಹಿಸಿದ್ದವು.

ಅಗ್ರಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ ಕಾರಣ ಭಾರತ ಅಂತಿಮ 16ರ (ಪ್ರಿಕ್ವಾರ್ಟರ್‌ ಫೈನಲ್‌) ಸುತ್ತಿಗೆ ಬೈ ಪಡೆದಿದೆ. ಈ ಸುತ್ತಿನಲ್ಲಿ ಭಾರತದ ಎದುರಾಳಿ 17ನೇ ಶ್ರೇಯಾಂಕದ ಲಕ್ಸೆಂಬರ್ಗ್. ಎಲಿಮಿನೇಷನ್‌ ಸುತ್ತಿನಲ್ಲಿ ಮೊದಲ ಮೂರು ರ್‍ಯಾಂಕ್ ಪಡೆಯುವ ತಂಡಗಳು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತವೆ.

ADVERTISEMENT

ಭಾರತದ ಮಹಿಳಾ ರಿಕರ್ವ್‌ ತಂಡ ಶುಕ್ರವಾರ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಕೆಳ ಕ್ರಮಾಂಕದ ಉಕ್ರೇನ್‌ ಎದುರು 3–5ರಲ್ಲಿ ಅನಿರೀಕ್ಷಿತ ಆಘಾಗ ಅನುಭವಿಸಿತ್ತು. ಈಗಾಗಲೇ ಪ್ರಬಲ ತಂಡಗಳು ಅರ್ಹತಾ ಕೋಟಾದಲ್ಲಿ ಒಲಿಂಪಿಕ್ಸ್‌ಗೆ ಸ್ಥಾನ ಕಾದಿರಿಸಿರುವ ಕಾರಣ, ಅಗ್ರ ರ್‍ಯಾಂಕ್ ಆಧಾರದಲ್ಲೂ ಭಾರತ ಮಹಿಳಾ ತಂಡಕ್ಕೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅವಕಾಶವಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.