ADVERTISEMENT

Paris Olympics | ಆರ್ಚರಿ: ಪದಕದ ಹೊಸ್ತಿಲಲ್ಲಿ ಎಡವಿದ ಮಿಶ್ರ ತಂಡ

ಪಿಟಿಐ
Published 2 ಆಗಸ್ಟ್ 2024, 16:15 IST
Last Updated 2 ಆಗಸ್ಟ್ 2024, 16:15 IST
<div class="paragraphs"><p>ಬಾಣ ಪ್ರಯೋಗಿಸುತ್ತಿರುವ ಧೀರಜ್‌ ಬೊಮ್ಮದೇವರ. ಅಂಕಿತಾ ಭಕತ್‌ ಚಿತ್ರದಲ್ಲಿದ್ದಾರೆ </p></div>

ಬಾಣ ಪ್ರಯೋಗಿಸುತ್ತಿರುವ ಧೀರಜ್‌ ಬೊಮ್ಮದೇವರ. ಅಂಕಿತಾ ಭಕತ್‌ ಚಿತ್ರದಲ್ಲಿದ್ದಾರೆ

   

–ಪಿಟಿಐ ಚಿತ್ರ

ಪ್ಯಾರಿಸ್‌: ಅಂಕಿತಾ ಭಕತ್‌ ಮತ್ತು ಧೀರಜ್‌ ಬೊಮ್ಮದೇವರ ಅವರನ್ನು ಒಳಗೊಂಡ ಭಾರತದ  ಆರ್ಚರಿ ಮಿಶ್ರ ತಂಡವು ಒಲಿಂಪಿಕ್ಸ್‌ ಬಿಲ್ಗಾರಿಕೆಯಲ್ಲಿ ದೇಶಕ್ಕೆ ಮೊದಲ ಪದಕ ಗಳಿಸಿಕೊಡುವ ಅವಕಾಶವನ್ನು ಸ್ವಲ್ಪದರಲ್ಲಿ ಕಳೆದುಕೊಂಡಿತು. ಶುಕ್ರವಾರ ಕಂಚಿನ ಪದಕಕ್ಕೆ ನಡೆದ ಪ್ಲೇ ಆಫ್‌ ಪಂದ್ಯದಲ್ಲಿ 2–6 ರಲ್ಲಿ ಅಮೆರಿಕ ಎದುರು ಸೋಲನುಭವಿಸಿತು.

ADVERTISEMENT

ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಸೋತು ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದ ಭಾರತದ ಜೋಡಿಯು 37–38, 35–37, 38–34, 35–37 ರಲ್ಲಿ ಸೋಲನುಭವಿಸಿತು. ವಿಶ್ವದ ಅಗ್ರಮಾನ್ಯ ಬಿಲ್ಗಾರ್ತಿ ದೇಸಿ ಕೌಫೋಲ್ಡ್‌ ಮತ್ತು ಮೂರು ಬಾರಿಯ ಒಲಿಂಪಿಕ್ ಪದಕ ವಿಜೇತ ಬ್ರಾಡಿ ಎಲಿಸನ್ ಜೋಡಿ ಮೇಲುಗೈ ಸಾಧಿಸಿತು. ಅದರಲ್ಲೂ ಎಲಿಸನ್‌ ಬಹುತೇಕ ಕರಾರುವಾಕ್ ಆಗಿದ್ದರು.

ಅಂಕಿತಾ ಒತ್ತಡಕ್ಕೆ ಒಳಗಾದಂತೆ ಕಂಡುಬಂದರು. ಎರಡು ಬಾರಿ ‘ಏಳು’ ಸ್ಕೋರ್‌ ಮಾಡಿದ ಅವರು, ಎರಡು ಬಾರಿ 10 ಸ್ಕೋರ್ ಮಾಡಿದರು. ಇನ್ನೊಂದೆಡೆ, 22 ವರ್ಷ ವಯಸ್ಸಿನ ಧೀರಜ್‌ ಸ್ಥಿರ ಪ್ರದರ್ಶನ ನೀಡಿದರು. ಆದರೆ ಅಂಕಿತಾ ಗುರಿತಪ್ಪುತ್ತಿದ್ದುದು ದುಬಾರಿಯಾಯಿತು. ಭಾರತದ ಜೋಡಿ ಮೂರನೇ ಸೆಟ್‌ನಲ್ಲಿ ಮಾತ್ರ ಅಮೆರಿಕದ ಗುರಿಕಾರರನ್ನು ಮೀರಿನಿಂತಿತು.

ಸೆಮಿಯಲ್ಲಿ ಸೋಲು:

ಭಾರತದ ಬಿಲ್ಗಾರರು ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್‌ ತಲುಪಿತ್ತು. ಆದರೆ ಅಲ್ಲಿ ಧೀರಜ್‌ ಮತ್ತು ಅಂಕಿತಾ ಜೋಡಿ 2–6 (38-36, 35-38, 37-38, 38-39)ರಿಂದ ದಕ್ಷಿಣ ಕೊರಿಯಾದ ಲಿಮ್ ಸಿಹ್ಯೆನ್ ಮತ್ತು ಕಿಮ್ ವೂ-ಜಿನ್ ಅವರಿಗೆ ಶರಣಾಯಿತು.

ಉತ್ತಮ ಆರಂಭ ಪಡೆದಿದ್ದ ಭಾರತದ ಬಿಲ್ಗಾರರು ನಂತರ ಹಿನ್ನಡೆಗೆ ಜಾರಿದರು. ಮೊದಲ ಸುತ್ತಿನಲ್ಲಿ ನಿಖರವಾಗಿ ಬಾಣ ಪ್ರಯೋಗಿಸುವಲ್ಲಿ ಎಡವಿದ ವಿಶ್ವದ ಅಗ್ರಮಾನ್ಯ ಕೊರಿಯಾ ಜೋಡಿಯು ನಂತರ ಲಯ ಕಂಡುಕೊಂಡಿತು.

ಭಾರತದ ಆರ್ಚರಿಪಟುಗಳು 36 ವರ್ಷಗಳಿಂದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದು, ಈವರೆಗೆ ಒಂದೂ ಪದಕ ಒಲಿದಿಲ್ಲ. ಆದರೆ, ಇಲ್ಲಿ ಪದಕ ಗೆದ್ದು ದಾಖಲೆ ನಿರ್ಮಿಸುವ ತವಕದಲ್ಲಿದ್ದ ಬಿಲ್ಗಾರರಿಗೆ ನಿರಾಸೆಯಾಯಿತು.

ಒಲಿಂಪಿಕ್ಸ್‌ ಆರ್ಚರಿ ಮಿಶ್ರ ಸ್ಪರ್ಧೆಯಲ್ಲಿ ಧೀರಜ್‌ ಬೊಮ್ಮದೇವರ ಅವರು ಬಾಣಪ್ರಯೋಗಕ್ಕೆ ಸಜ್ಜಾದ ಸಂದರ್ಭ. ಎಡಗಡೆ ಇರುವವರು ಜೊತೆಗಾರ್ತಿ ಅಂಕಿತಾ ಭಕತ್. ಪ್ರಜಾವಾಣಿ ಚಿತ್ರ: ಕೆ.ಎನ್‌.ಶಾಂತಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.