ADVERTISEMENT

ಐಒಎ ಸಂವಿಧಾನ ತಿದ್ದುಪಡಿಗೆ 6 ಸದಸ್ಯರ ಸಮಿತಿ ರಚಿಸಿದ ಭಾರತ ಒಲಿಂಪಿಕ್ ಸಮಿತಿ

ಪಿಟಿಐ
Published 19 ಡಿಸೆಂಬರ್ 2021, 14:09 IST
Last Updated 19 ಡಿಸೆಂಬರ್ 2021, 14:09 IST
ನರಿಂದರ್ ಬಾತ್ರಾ -ಪ್ರಜಾವಾಣಿ ಚಿತ್ರ
ನರಿಂದರ್ ಬಾತ್ರಾ -ಪ್ರಜಾವಾಣಿ ಚಿತ್ರ   

ನವದೆಹಲಿ: ಚುನಾವಣೆಗೂ ಮೊದಲು ತನ್ನ ಸಂವಿಧಾನದ ತಿದ್ದುಪಡಿಗಾಗಿ ಭಾರತ ಒಲಿಂಪಿಕ್ ಸಮಿತಿ (ಐಒಎ) ಆರು ಸದಸ್ಯರ ಸಮಿತಿಯನ್ನು ಭಾನುವಾರ ರಚಿಸಿದೆ. ರಾಷ್ಟ್ರೀಯ ಕ್ರೀಡಾ ನೀತಿ ಅನುಗುಣವಾಗಿ ನಿಯಮಾವಳಿಗಳನ್ನು ರೂಪಿಸಲು ಐಒಎ ಈ ಮೂಲಕ ಉದ್ದೇಶಿಸಿದೆ.

ಸಮಿತಿಯು ಐಒಎ ಅಧ್ಯಕ್ಷ ನರಿಂದರ್ ಬಾತ್ರಾ, ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಖಜಾಂಚಿ ಆನಂದೇಶ್ವರ್ ಪಾಂಡೆ, ಹಿರಿಯ ಉಪಾಧ್ಯಕ್ಷರಾದ ಅನಿಲ್ ಖನ್ನಾ, ಆರ್.ಕೆ. ಆನಂದ್ ಮತ್ತು ಲಲಿತ್ ಭಾನೋಟ್ ಅವರನ್ನು ಒಳ‌‌‌‌‌ಗೊಂಡಿದೆ.

ಒಲಿಂಪಿಕ್ ಸಮಿತಿಯ ವಾರ್ಷಿಕ ಸಾಮಾನ್ಯ ಸಭೆಯನ್ನುನಿವೃತ್ತ ನ್ಯಾಯಮೂರ್ತಿ ರಾಜೀವ್ ಸಹಾಯ್ ಎಂಡ್ಲಾವ್ ಅವರು ನಡೆಸಿದರು. ಸಭೆಯ ಹಿನ್ನೆಲೆಯಲ್ಲಿ ಅವರನ್ನು ಆಡಳಿತಾಧಿಕಾರಿಯಾಗಿ ದೆಹಲಿ ಹೈಕೋರ್ಟ್‌ ನೇಮಕ ಮಾಡಿತ್ತು. ಮಾಜಿ ಕ್ರೀಡಾ ಕಾರ್ಯದರ್ಶಿ ಇಂಜೆತಿ ಶ್ರೀನಿವಾಸ್ ಅವರು ಇದ್ದರು.

ADVERTISEMENT

ಸಾಮಾನ್ಯ ಸಭೆ ಭಾನುವಾರ ಗುವಾಹಟಿಯಲ್ಲಿ ನಡೆಯಬೇಕಿತ್ತು. ಆದರೆ ವಕೀಲ ರಾಹುಲ್‌ ಮೆಹ್ರಾ ಅವರು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಮಾಡಿರುವ ಮನವಿಯ ಹಿನ್ನೆಲೆಯಲ್ಲಿ ದೆಹಲಿಗೆ ಸ್ಥಳಾಂತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.