ADVERTISEMENT

ಏಷ್ಯನ್‌ ಪಿಕಲ್‌ಬಾಲ್‌: ಭಾರತಕ್ಕೆ 14 ಪದಕ

ಪಿಟಿಐ
Published 5 ನವೆಂಬರ್ 2024, 14:17 IST
Last Updated 5 ನವೆಂಬರ್ 2024, 14:17 IST

ಮುಂಬೈ: ಭಾರತದ ಆಟಗಾರರು ತೈವಾನ್‌ನಲ್ಲಿ ಈಚೆಗೆ ನಡೆದ ಏಷ್ಯನ್‌ ಪಿಕಲ್‌ಬಾಲ್ ಕ್ರೀಡಾಕೂಟದಲ್ಲಿ ಐದು ಚಿನ್ನ, ನಾಲ್ಕು ಬೆಳ್ಳಿ ಸೇರಿದಂತೆ ಒಟ್ಟು 14 ಪದಕಗಳನ್ನು ಗೆದ್ದಿದ್ದಾರೆ.

50+ ಓಪನ್ ವಿಭಾಗದ ಪುರುಷರ ಸಿಂಗಲ್ಸ್‌ನಲ್ಲಿ ನಿಟ್ಟೆನ್ ಕೀರ್ತನೆ ಚಿನ್ನ ಗೆದ್ದರೆ, 35+ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ವಿಶಾಲ್ ಜಾಧವ್ ಅವರು ಬೆಳ್ಳಿ ಗೆದ್ದರು. 4.0 ವಿಭಾಗದ 50+ ಪುರುಷರ ಸಿಂಗಲ್ಸ್‌ನಲ್ಲಿ ಸಂದೀಪ್ ತಾವ್ಡೆ ಬೆಳ್ಳಿ ಜಯಿಸಿದರು.

ಖುಷಿ ಸಚ್‌ದೇವ ಮತ್ತು ಶ್ರದ್ಧಾ ದಮಾನಿ ಕ್ರಮವಾಗಿ 19+ ಮತ್ತು 35+ ಮಹಿಳೆಯರ ಸಿಂಗಲ್ಸ್‌ನಲ್ಲಿ ತಲಾ ಬೆಳ್ಳಿ ಪದಕ ಜಯಿಸಿದರು.

ADVERTISEMENT

50+ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಕೀರ್ತನೆ ಮತ್ತು ಸಂದೀಪ್‌ ಜೋಡಿಯು ಚಿನ್ನಕ್ಕೆ ಕೊರಳೊಡ್ಡಿತು. 19+ ಓಪನ್ ಡಬಲ್ಸ್‌ನಲ್ಲಿ ವಂಶಿಕ್ ಕಪಾಡಿಯಾ ಮತ್ತು ತೇಜಸ್ ಮಹಾಜನ್ ಅವರೂ ಚಿನ್ನ ಗೆದ್ದರು.

19+ ಓಪನ್‌ ಮಿಶ್ರ ಡಬಲ್ಸ್‌ನಲ್ಲಿ ವಂಶಿಕ್‌ ಮತ್ತು ವೃಶಾಲಿ ಠಾಕ್ರೆ ಜೋಡಿಯು ಚಿನ್ನ ಗೆದ್ದರೆ, 35+ ಓಪನ್‌ ವಿಭಾಗದಲ್ಲಿ ಜಾಧವ್‌ ಮತ್ತು ಇಶಾ ಲಖಾನಿ ಅವರೂ ಚಾಂಪಿಯನ್‌ ಆದರು.

ಅಭಿಷೇಕ್ ದೇತಾನ್ (35+ಪುರುಷರ ಸಿಂಗಲ್ಸ್‌ 4.0), ಜೋಹಾನ್ ಫರ್ನಾಂಡಿಸ್ (35+ ಓಪನ್‌ ಮಹಿಳಾ ಸಿಂಗಲ್ಸ್), ವೃಶಾಲಿ- ಸಚ್‌ದೇವ (19+ ಓಪನ್ ಮಹಿಳಾ ಡಬಲ್ಸ್), ಶ್ರದ್ಧಾ-ಜೋಹನ್‌ (35+ ಮಹಿಳೆಯರ ಡಬಲ್ಸ್ 4.0), ಚೇತನ್ ಸನಿಲ್- ಸಂದೀಪ್‌ ತಾವ್ಡೆ (50+ ಪುರುಷರ ಡಬಲ್ಸ್ 4.0) ಅವರು ಕಂಚಿನ ಪದಕ ಗೆದ್ದರು.

ಟೂರ್ನಿಯಲ್ಲಿ ತೈವಾನ್‌, ಸಿಂಗಪುರ, ಜಪಾನ್‌, ಚೀನಾ ಇಂಡೊನೇಷ್ಯಾ, ದಕ್ಷಿಣ ಕೊರಿಯಾ, ಮಲೇಷ್ಯಾ ಮತ್ತು ಭಾರತದ ಆಟಗಾರರು ಸ್ಪರ್ಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.