ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು, ರೇಸಿಂಗ್ ತಂಡವೊಂದನ್ನು ಖರೀದಿಸಿದ್ದಾರೆ.
ಇಂಡಿಯನ್ ರೇಸಿಂಗ್ ಫೇಸ್ಟಿವಲ್‌ನಲ್ಲಿ ಕೋಲ್ಕತ್ತ ರಾಯಲ್ ಟೈಗರ್ಸ್ ಫ್ರಾಂಚೈಸ್ ಅನ್ನು ಖರೀದಿಸಿದ್ದಾರೆ.
ಇಂಡಿಯನ್ ರೇಸಿಂಗ್ ಲೀಗ್ (ಐಆರ್‌ಎಲ್) ಮತ್ತು ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಷಿಪ್ (ಎಫ್4ಐಸಿ) ಎಂಬ ಎರಡು ಪ್ರಮುಖ ಚಾಂಪಿಯನ್‌ಷಿಪ್‌ಗಳನ್ನು ಇಂಡಿಯನ್ ರೇಸಿಂಗ್ ಫೇಸ್ಟಿವಲ್ ಒಳಗೊಂಡಿರಲಿದೆ.
ಇದೇ ಮೊದಲ ಬಾರಿಗೆ ಕೋಲ್ಕತ್ತ ರೇಸಿಂಗ್ ತಂಡ ಪದಾರ್ಪಣೆ ಮಾಡಲಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ, ಗೋವಾ, ಕೊಚ್ಚಿ ಮತ್ತು ಅಹಮದಾಬಾದ್ ಇತರೆ ಪ್ರಮುಖ ಪ್ರಾಂಚೈಸ್ ಆಗಿವೆ.
ಇಂಡಿಯನ್ ರೇಸಿಂಗ್ ಫೇಸ್ಟಿವಲ್‌ನಲ್ಲಿ ಕೋಲ್ಕತ್ತ ತಂಡದೊಂದಿಗೆ ತಮ್ಮ ಪಯಣ ಆರಂಭಿಸಲು ನಿಜಕ್ಕೂ ಉತ್ಸುಕನಾಗಿದ್ದೇನೆ ಎಂದು ಗಂಗೂಲಿ ಹೇಳಿದ್ದಾರೆ.
'ಮೋಟಾರ್‌ಸ್ಪೋರ್ಟ್ಸ್ ಮೇಲೆ ಸದಾ ಅಭಿರುಚಿಯನ್ನು ಹೊಂದಿದ್ದೇನೆ. ಕೋಲ್ಕತ್ತ ರಾಯಲ್ ಟೈಗರ್ಸ್‌ನೊಂದಿಗೆ ಸೇರಿ ಭಾರತೀಯ ರೇಸಿಂಗ್ ಫೇಸ್ಟಿವಲ್‌ನಲ್ಲಿ ಬಲಿಷ್ಠ ಪರಂಪರೆಯನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. ಹೊಸ ಪೀಳಿಗೆಯ ಉತ್ಸಾಹಿಗಳಿಗೆ ಇದು ಸ್ಪೂರ್ತಿ ತುಂಬಲಿದೆ' ಎಂದು ದಾದಾ ಖ್ಯಾತಿಯ ಗಂಗೂಲಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.