ADVERTISEMENT

ರೇಸ್‌ ವಾಕಿಂಗ್: ಅಕ್ಷದೀಪ್–ಪ್ರಿಯಾಂಕಾಗೆ ಒಲಿಂಪಿಕ್ಸ್‌ ಟಿಕೆಟ್

ಪಿಟಿಐ
Published 21 ಏಪ್ರಿಲ್ 2024, 16:21 IST
Last Updated 21 ಏಪ್ರಿಲ್ 2024, 16:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಂತಾಲಿಯ, ಟರ್ಕಿ: ಅಕ್ಷದೀಪ್ ಸಿಂಗ್ ಮತ್ತು ಪ್ರಿಯಾಂಕಾ ಗೋಸ್ವಾಮಿ ಅವರನ್ನೊಳಗೊಂಡ ಭಾರತದ ಮಿಶ್ರ ರಿಲೆ ತಂಡ ಭಾನುವಾರ ಇಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ರೇಸ್ ವಾಕಿಂಗ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ 18 ನೇ ಸ್ಥಾನ ಪಡೆಯಿತು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿತು.

ಅಗ್ರ 22 ತಂಡಗಳು ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆಯುತ್ತವೆ. ಭಾರತದ ಜೋಡಿ 42.195 ಕಿ.ಮೀ ದೂರವನ್ನು ಕ್ರಮಿಸಿ, 3ಗಂಟೆ, 05 ನಿಮಿಷ, 3 ಸೆಕೆಂಡುಗಳಲ್ಲಿ ಗುರಿ ತಲುಪಿತು. ‌

ADVERTISEMENT

ಇಟಲಿಯ ಫ್ರಾನ್ಸೆಸ್ಕೊ ಫೋರ್ಟುನಾಟೊ ಮತ್ತು ವ್ಯಾಲೆಂಟಿನಾ ಟ್ರಾಪ್ಲೆಟ್ಟಿ ತಂಡ 2ಗಂ,56ನಿ, 45ಸೆ ಸಮಯದೊಂದಿಗೆ ಚಿನ್ನದ ಪದಕ ಗೆದ್ದಿತು. ಇದು ಇವರಿಬ್ಬರ ವೈಯಕ್ತಿಕ ಶ್ರೇಷ್ಠ ಸಮಯವಾಗಿದೆ.

ಜಪಾನಿನ ಇಕೆಡಾ ಮತ್ತು ಕುಮಿಕೊ ಒಕಾಡಾ 2ಗಂ,57ನಿ,:04 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಸ್ಪೇನ್ ನ ಅಲ್ವಾರೊ ಮಾರ್ಟಿನ್ ಮತ್ತು ಲಾರಾ ಗಾರ್ಸಿಯಾ-ಕ್ಯಾರೊ ಜೋಡಿ 2:57:47 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದುಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.