ಸೆಪಾಂಗ್ (ಮಲೇಷ್ಯಾ): ಭಾರತದ 11 ವರ್ಷದ ಕಾರ್ಟ್ ರೇಸರ್ ಹಮ್ಜಾ ಬಾಲಸಿನೊರ್‌ವಾಲಾ ಇಲ್ಲಿ ನಡೆದ ಐಎಎಂಇ ಏಷ್ಯಾ ಸೀರೀಸ್ ಎಕ್ಸ್–30 ಚಾಂಪಿಯನ್‌ಶಿಪ್‌ನ 4ನೇ ಸುತ್ತಿನಲ್ಲಿ ಬೆಳ್ಳಿ ಪದಕ ಗೆದ್ದರು.
ರೇಸ್‌ನುದ್ದಕ್ಕೂ ಉತ್ತಮ ಕೌಶಲ ಪ್ರದರ್ಶಿಸಿದ ಹಮ್ಜಾ, ವೇಗ ಕಾಯ್ದುಕೊಂಡರು. ಅನುಭವಿ ರೇಸರ್‌ಗಳಾದ ಫ್ರಿಹುಬರ್, ಅನುಚಟ್ಕಲ್ ಹಾಗೂ ಮೆಹ್ತಾ ಅವರನ್ನು ಹಿಂದಿಕ್ಕಿದ ಹಮ್ಜಾ, ಕೇವಲ ಎರಡು ಸೆಕೆಂಡ್‌ಗಳ ಅಂತರದಿಂದ ಮೊದಲ ಸ್ಥಾನದಿಂದ ವಂಚಿತರಾದರು. ಸಿಂಗಪುರದ ಮೈಕಲ್ ಲೆಡೆರರ್ ಚಿನ್ನ ಗೆದ್ದರೆ, ಫಿಲಿಪ್ಪೀನ್ಸ್‌ನ ಫ್ರಿಹುರ್ ಕಂಚು ಗೆದ್ದರು.
‘ಇದು ನನ್ನ ಮೊದಲ ಅಂತರರಾಷ್ಟ್ರೀಯ ಪೋಡಿಯಂ ಫಿನಿಶ್. ಈ ಸಾಧನೆ ಸಂತೋಷ ತಂದಿದೆ. ನನ್ನನ್ನು ನಿರಂತರವಾಗಿ ಬೆಂಬಲಿಸುತ್ತಿರುವ ನನ್ನ ಕುಟುಂಬ ಹಾಗೂ ತಂಡಕ್ಕೆ ಧನ್ಯವಾದ ಹೇಳುತ್ತೇನೆ’ ಎಂದು ಈಗಾಗಲೇ ಇಂಡಿಕಾರ್ಟಿಂಗ್ ಪ್ರೊ ಮಟ್ಟದಲ್ಲಿ ಹಲವು ರೇಸ್‌ಗಳನ್ನು ಗೆದ್ದಿರುವ ಹಮ್ಜಾ ಖುಷಿಯನ್ನು ಹಂಚಿಕೊಂಡರು.
ಹಮ್ಜಾ ಅವರು ಮುಂಬೈನ ಪೊದಾರ್ ಅಂತರರಾಷ್ಟ್ರೀಯ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.