ADVERTISEMENT

ಸೇನ್‌ ಮುನ್ನಡೆ: ಸಿಂಧುಗೆ ನಿರಾಸೆ

ಪಿಟಿಐ
Published 21 ನವೆಂಬರ್ 2024, 23:48 IST
Last Updated 21 ನವೆಂಬರ್ 2024, 23:48 IST

ಭಾರತದ ಲಕ್ಷ್ಯ ಸೇನ್‌

ಭಾರತದ ಲಕ್ಷ್ಯ ಸೇನ್‌

ಶೆನ್‌ಝೆನ್‌ (ಚೀನಾ): ಭಾರತದ ಯುವ ತಾರೆ ಲಕ್ಷ್ಯ ಸೇನ್ ಅವರು ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿದರು. ಆದರೆ, ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಎರಡನೇ ಸುತ್ತಿನಲ್ಲಿ ಹೊರಬಿದ್ದರು.

ADVERTISEMENT

23 ವರ್ಷ ವಯಸ್ಸಿನ ಸೇನ್‌ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ 21-6, 21-18ರಿಂದ ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ಅವರನ್ನು ಹಿಮ್ಮೆಟ್ಟಿಸಿದರು. ಸೇನ್‌ ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಆಂಡರ್ಸ್ ಆಂಟೊನ್‌ಸೆನ್ (ಡೆನ್ಮಾರ್ಕ್‌) ಅವರನ್ನು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ತಮಗಿಂತ ಮೇಲಿನ ಕ್ರಮಾಂಕದ ಬುಸಾನನ್ ಒಂಗ್ಬಾಮ್‌ರುಂಗ್‌ಫಾನ್ ಅವರನ್ನು ಸೋಲಿಸಿದ್ದ 29 ವರ್ಷದ ಸಿಂಧು, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 16-21, 21-17, 21-23ರಿಂದ ಸಿಂಗಪುರದ ಯೋ ಜಿಯಾ ಮಿನ್ ಅವರಿಗೆ ಶರಣಾದರು.

ಭಾರತದ ಯುವ ಆಟಗಾರ್ತಿಯರಾದ ಅನುಪಮಾ ಉಪಾಧ್ಯಾಯ ಮತ್ತು ಮಾಳವಿಕಾ ಬನ್ಸೋಡ್‌ ಅವರೂ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದರು.

ಹಾಲಿ ಚಾಂಪಿಯನ್‌ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ಕಣಕ್ಕೆ ಇಳಿದಿರುವ ಅವರು ಎರಡನೇ ಸುತ್ತಿನಲ್ಲಿ 21–19, 21–15ರಿಂದ ಡೆನ್ಮಾರ್ಕ್‌ನ ರಾಸ್ಮಸ್ ಕ್ಜೇರ್ ಮತ್ತು ಫ್ರೆಡೆರಿಕ್ ಸೊಗಾರ್ಡ್ ಅವರನ್ನು ಮಣಿಸಿ ಮುನ್ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.