ಲುಸಾನ್ (ಸ್ವಿಜರ್ಲೆಂಡ್): ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ತನ್ನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿ ಜನವರಿ 30ರಂದು ಸಭೆ ನಿಗದಿಪಡಿಸಿದೆ. ಸಭೆಯಲ್ಲಿ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿರುವ ಏಳು ಮಂದಿ ಆಕಾಂಕ್ಷಿಗಳು ಮತದಾರರನ್ನು ಭೇಟಿಯಾಗುವ ಅವಕಾಶವಿದೆ.
ಮತದಾನ ಮಾರ್ಚ್‌ನಲ್ಲಿ ನಡೆಯಲಿದೆ. ನಿಯಮಗಳ ಪ್ರಕಾರ, ಅಭ್ಯರ್ಥಿಗಳು ಪ್ರಚಾರಕ್ಕೆ ವಿಡಿಯೊಗಳನ್ನು ಬಳಸುವುದನ್ನು, ಸಭೆಗಳನ್ನು ಸಂಘಟಿಸುವುದನ್ನು ಅಥವಾ ಚರ್ಚಾಕೂಟಗಳಲ್ಲಿ ಭಾಗಿಯಾಗುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಜನವರಿಯಲ್ಲಿ ನಡೆಯುವ ಸಭೆಯೇ ಪ್ರಚಾರಕ್ಕೆ ಅವಕಾಶ ಕಲ್ಪಿಸಲಿದೆ.
‘ಇದು ಕ್ಯಾಮೆರಾ ಮುಂದೆಯೇ ನಡೆಯುವ ಸಭೆಯಾಗಿದ್ದು, ಏಳು ಮಂದಿ ಅಭ್ಯರ್ಥಿಗಳಿಂದ ಅವರ ಮುಂದಿನ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಐಒಸಿ ಸದಸ್ಯರಿಗೆ ಅವಕಾಶ ಒದಗಿಸಲಿದೆ’ ಎಂದು ಸಮಿತಿ ಪ್ರಕಟಣೆ ಗುರುವಾರ ತಿಳಿಸಿದೆ. ಥಾಮಸ್ ಬಾಕ್ ಅವರು ಅವಧಿ ಪೂರ್ಣಗೊಳಿಸಿದ್ದಾರೆ. ಹಾಲಿ ಉಪಾಧ್ಯಕ್ಷ ಜುವಾನ್ ಅಂಟೊನಿಯಾ ಸಮರಾನ್ ಜೂನಿಯರ್ (ಸ್ಪೇನ್), ಪ್ರಿನ್ಸ್ ಫೈಸಲ್ ಅಲ್ ಹುಸೇನ್ (ಜೋರ್ಡಾನ್), ಕಿರ್ಸ್ಟಿ ಕೊವೆಂಟ್ರಿ (ಜಿಂಬಾಬ್ವೆ) ಅವರು ಅಧ್ಯಕ್ಷ ಸ್ಥಾನದ ಕಣದಲ್ಲಿರುವ ಮೂವರು ಹಾಲಿ ಪದಾಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.