ADVERTISEMENT

ಕೊರಿಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ನಾಲ್ಕರ ಘಟ್ಟಕ್ಕೆ ಕಿರಣ್‌ ಜಾರ್ಜ್

ಪಿಟಿಐ
Published 8 ನವೆಂಬರ್ 2024, 12:59 IST
Last Updated 8 ನವೆಂಬರ್ 2024, 12:59 IST
ಕಿರಣ್ ಜಾರ್ಜ್
ಕಿರಣ್ ಜಾರ್ಜ್   

ಇಕ್ಸಾನ್‌ ಸಿಟಿ (ಕೊರಿಯಾ): ಯಶಸ್ಸಿನ ಓಟ ಮುಂದುವರಿಸಿರುವ ಭಾರತದ ಕಿರಣ್ ಜಾರ್ಜ್ ಅವರು ಕೊರಿಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಐದನೇ ಶ್ರೇಯಾಂಕದ ಜಪಾನ್‌ ಆಟಗಾರನ ಮೇಲೆ ನೇರ ಸೆಟ್‌ಗಳ ಗೆಲುವು ಪಡೆದು ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ವಿಶ್ವ ಕ್ರಮಾಂಕದಲ್ಲಿ 41ನೇ ಸ್ಥಾನದಲ್ಲಿರುವ ಕಿರಣ್, ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ತಕುಮಾ ಒಬಾಯಾಶಿ ಅವರನ್ನು ಕೇವಲ 39 ನಿಮಿಷಗಳಲ್ಲಿ 21–14, 21–16 ರಿಂದ ಸೋಲಿಸಿದರು.

24 ವರ್ಷ ವಯಸ್ಸಿನ ಕಿರಣ್ ಜಾರ್ಜ್, ಸೂಪರ್‌ 300 ಮಟ್ಟದ ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಕುನ್ಲಾವುತ್‌ ವಿಟಿಡ್‌ಸರ್ನ್ ಅವರನ್ನು ಎದುರಿಸಲಿದ್ದಾರೆ.

ADVERTISEMENT

ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿರುವ ಥಾಯ್ಲೆಂಡ್‌ನ ಆಟಗಾರ ಕುನ್ಲಾವುತ್‌ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಲಿಯು ಲಿಯಾಂಗ್ ಅವರನ್ನು 21–15, 21–11 ರಿಂದ ಹಿಮ್ಮೆಟ್ಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.