ನವದೆಹಲಿ: ಭಾರತದ ರಿಧಮ್ ಸಂಗ್ವಾನ್ ಅವರು ಐಎಸ್‌ಎಸ್‌ಎಫ್ ವಿಶ್ವಕಪ್ (ಪಿಸ್ತೂಲ್ ಮತ್ತು ರೈಫಲ್) ಶೂಟಿಂಗ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅವರಿಗೆ ಪದಕ ಒಲಿದಿದೆ.
ಫೈನಲ್‌ನಲ್ಲಿ ರಿಧಮ್ 219.1 ಪಾಯಿಂಟ್ಸ್ ಗಳಿಸಿದರು. ಗ್ರೀಸ್‌ನ ಅನ್ನಾ ಕೊರಾಕಾಕಿ (241.3 ಪಾಯಿಂಟ್ಸ್) ಚಿನ್ನ ಮತ್ತು ಉಕ್ರೇನ್‌ನ ಒಲೆನಾ ಕೊಸ್ಟೆವಿಚ್ (240.6) ಬೆಳ್ಳಿ ಜಯಿಸಿದರು.
ಪುರುಷರ ಮತ್ತು ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗಗಳಲ್ಲಿ ಫೈನಲ್ಸ್ ತಲುಪಿದ್ದ ಸರಭ್ಜೋತ್ ಸಿಂಗ್ ಮತ್ತು ಇಶಾ ಸಿಂಗ್ ಪದಕ ತಪ್ಪಿಸಿಕೊಂಡರು.
ಇಶಾ ಆರನೇ ಸ್ಥಾನ ಗಳಿಸಿದರೆ, ಇದೇ ವಿಭಾಗದಲ್ಲಿದ್ದ ದಿವ್ಯಾ ಟಿ.ಎಸ್. 17ನೇ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.