ADVERTISEMENT

ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟ: ಇಯಾನ್‌ ಅಮನ್ನ, ಪೂಜಾ ವೇಗದ ಓಟಗಾರರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 23:16 IST
Last Updated 17 ನವೆಂಬರ್ 2024, 23:16 IST
<div class="paragraphs"><p>100 ಮೀ. ಓಟದಲ್ಲಿ ಚಿನ್ನ ಗೆದ್ದ ಮಂಗಳೂರಿನ ಇಯಾನ್‌ ಅಮನ್ನ (ಬಾಲಕರು). ಉಡುಪಿಯ ಪೂಜಾ (ಬಾಲಕಿಯರು) –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್‌</p></div>

100 ಮೀ. ಓಟದಲ್ಲಿ ಚಿನ್ನ ಗೆದ್ದ ಮಂಗಳೂರಿನ ಇಯಾನ್‌ ಅಮನ್ನ (ಬಾಲಕರು). ಉಡುಪಿಯ ಪೂಜಾ (ಬಾಲಕಿಯರು) –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್‌

   

ಬೆಂಗಳೂರು: ಮಂಗಳೂರಿನ ಇಯಾನ್‌ ಅಮನ್ನ ಮತ್ತು ಉಡುಪಿಯ ಪೂಜಾ ಅವರು ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ನಾಲ್ಕನೇ ದಿನವಾದ ಭಾನುವಾರ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ 100 ಮೀಟರ್‌ ಓಟದಲ್ಲಿ ಮಿಂಚು ಹರಿಸಿದರು.

ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ (ಕೆಒಎ) ಆಶ್ರಯದಲ್ಲಿ ನಡೆಯುತ್ತಿರುವ ಕೂಟ
ದಲ್ಲಿ 11.7 ಸೆಕೆಂಡ್‌ನಲ್ಲಿ ಗುರಿಮುಟ್ಟಿದ ಇಯಾನ್‌ ಚಿನ್ನಕ್ಕೆ ಮುತ್ತಿಕ್ಕಿದರು. ಉಡುಪಿಯ ಮಿಹಿರ್ ಮುಕುಲ್ ಕರ್ಕೇರ ಮತ್ತು ಯಾದಗಿರಿಯ ಸಿದ್ದಾ ರೆಡ್ಡಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ಪೂಜಾ 13 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಕೊರಳಿಗೇರಿಸಿಕೊಂಡರು.

ADVERTISEMENT

ಫಲಿತಾಂಶಗಳು: ಬಾಲಕರು: ಅಥ್ಲೆಟಿಕ್ಸ್‌: 100 ಮೀ ಓಟ: ಇಯಾನ್‌ ಅಮನ್ನ (ಮಂಗಳೂರು; ಕಾಲ 11.7ಸೆ)–1, ಮಿಹಿರ್ ಮುಕುಲ್ ಕರ್ಕೇರ (ಉಡುಪಿ)–2, ಸಿದ್ದಾ ರೆಡ್ಡಿ (ಯಾದಗಿರಿ)–3; ಹೈಜಂಪ್‌: ಮನೋಜ್‌ ಕುಮಾರ್‌ (ಸೋಮವಾರಪೇಟೆ; ಎತ್ತರ 1.49 ಮೀ)–1, ಆರ್‌.ವೇದಾಂತ್‌ (ಬೆಂಗಳೂರು)–2, ಜಿತೇಂದ್ರ ದೇವು ಗೌಡ (ಉತ್ತರ ಕನ್ನಡ)–3; ಷಾಟ್‌ಪಟ್‌: ನಿರಂಜನ್‌ ಎಂ.ಕೆ. (ರಾಮನಗರ; ಎಸೆತ 11.08 ಮೀ)–1, ಸೂರ್ಯ ಸಮರ್ಥ್ (ಶಿವಮೊಗ್ಗ)–2, ಎಸ್. ಸುದರ್ಶನ್ (ಚಾಮರಾಜನಗರ)–3.

ಈಜು: 4x100 ಮೀ. ಫ್ರೀಸ್ಟೈಲ್ ರಿಲೆ: ಬಸವನಗುಡಿ ಅಕ್ವಾಟಿಕ್‌ ಸೆಂಟರ್‌–1, ಮತ್ಸ್ಯಾಯಿಂಕ್–2, ಗ್ಲೋಬಲ್ ಸ್ವಿಮ್ ಸೆಂಟರ್–3; 4x200 ಮೀ. ಫ್ರೀಸ್ಟೈಲ್ ರಿಲೆ: ಬಸವನಗುಡಿ ಅಕ್ವಾಟಿಕ್ಸ್‌ ಸೆಂಟರ್‌–1, ಮತ್ಸ್ಯಾ ಯಿಂಕ್-2, ವಿಜಯನಗರ ಅಕ್ವಾಟಿಕ್‌ ಸೆಂಟರ್‌–3; 4x100 ಮೀ.ಮೆಡ್ಲೆ ರಿಲೆ; ಬಸವನಗುಡಿ ಅಕ್ವಾಟಿಕ್ಸ್‌ ಸೆಂಟರ್‌–1, ಮತ್ಸ್ಯಾಯಿಂಕ್–2, ಗ್ಲೋಬಲ್ ಸ್ವಿಮ್ ಸೆಂಟರ್–3. 

ಜಿಮ್ನಾಸ್ಟಿಕ್ಸ್: ಫ್ಲೋರ್‌ ಎಕ್ಸ್‌ಸೈಜ್‌: ಕ್ಯಾಲ್ವಿನ್ ಆಶ್ಲಿ ಚಾರ್ಲ್ಸ್ (ಬೆಂಗಳೂರು)–1, ಉತ್ಕರ್ಷ್ ಬೊಕಾರಿಯಾ (ಬೆಂಗಳೂರು)–2, ಸಂಕೇತ್ ಎಸ್. ಮಾನೆ (ಧಾರವಾಡ)–3; ಪೊಮೆಲ್ ಹಾರ್ಸ್: ಉತ್ಕರ್ಷ ಬೋಕಾರಿಯಾ–1, ಕ್ಯಾಲ್ವಿನ್ ಆಶ್ಲಿ ಚಾರ್ಲ್ಸ್–2, ಸಂಕೇತ್ ಎಸ್. ಮಾನೆ–3; ವಾಲ್ಟ್: ಎಸ್‌.ಕೆ. ಅನೀಶ್‌ (ಬೆಂಗಳೂರು)–1, ಕ್ಯಾಲ್ವಿನ್ ಆಶ್ಲಿ ಚಾರ್ಲ್ಸ್–2, ಸಂಕೇತ್ ಎಸ್. ಮಾನೆ–3; ರೋಮನ್ ರಿಂಗ್ಸ್‌: ಸಂಕೇತ್‌ ಎಸ್‌. ಮಾನೆ–1, ಹಿತ್‌ ತುಷಾರ್ ಸೆಂಘಾನಿ (ಬೆಂಗಳೂರು)–2, ಉತ್ಕರ್ಷ ಬೋಕಾರಿಯಾ ಮತ್ತು ಕವನ್‌ ಬಿ.ಎಂ.–3; ಪ್ಯಾರಲಲ್‌ ಬಾರ್ಸ್‌: ಉತ್ಕರ್ಷ ಬೋಕಾರಿಯಾ–1, ರಾಜೇಶ್‌ ಆರ್‌ (ಮೈಸೂರು)–2, ಸಂಕೇತ್ ಎಸ್. ಮಾನೆ-3; ಹಾರಿಜಾಂಟಲ್‌ ಬಾರ್ಸ್‌: ಉತ್ಕರ್ಷ ಬೋಕಾರಿಯಾ–1, ಕ್ಯಾಲ್ವಿನ್ ಆಶ್ಲಿ ಚಾರ್ಲ್ಸ್–2–ಸಂಕೇತ್ ಎಸ್. ಮಾನೆ–3; ಏರೋಬಿಕ್ಸ್ ಜಿಮ್ನಾಸ್ಟಿಕ್ಸ್: ಚಿನ್ಮಯಿ ಗೌಡ ಎಲ್‌ (ಬೆಂಗಳೂರು)–1, ಮಿಹಿರಾ ಕಮಲೇಶ್‌ (ಬೆಂಗಳೂರು)–2, ಶ್ರೀಶಾ ಗೌಡ ಕೆ. (ಹಾಸನ)–3.

ಬ್ಯಾಡ್ಮಿಂಟನ್‌: ಸಿಂಗಲ್ಸ್‌: ಚಿರಾಗ್‌ ಪ್ರಕಾಶ್‌ (ಬೆಂಗಳೂರು)–1, ಎನ್‌.ಡಿ. ನಿಕೇತನ್‌ ಹರಿ (ಬೆಂಗಳೂರು)–2. ವಾಲಿಬಾಲ್‌: ವಿಜಯಪುರ–1, ವಿದ್ಯಾನಗರ–2, ಕೊಪ್ಪಳ–3. ಶೂಟಿಂಗ್‌: 10 ಮೀ. ಏರ್‌ ಪಿಸ್ತೂಲ್‌: ಡ್ಯಾರನ್ ಕೆ. ಡಾನ್ (ಬೆಂಗಳೂರು)–1, ಶ್ರವಣ ಮಠದ ಶಶಿಧರ (ಬೆಂಗಳೂರು)–2, ಪುನೀತ್‌ ಸಾಯ್‌ ಎಸ್‌. (ಬೆಂಗಳೂರು ನಗರ)–3

ಬಾಲ‌ಕಿಯರು: ಅಥ್ಲೆಟಿಕ್ಸ್‌: 100 ಮೀ. ಓಟ: ಪೂಜಾ (ಉಡುಪಿ; ಕಾಲ 13ಸೆ)–1, ಖುಷಿ ಎಸ್‌. (ಶಿವಮೊಗ್ಗ)–2, ಬಿಯಾಂಕಾ ಕಾರಿಯಪ್ಪ (ಬೆಂಗಳೂರು)–3; ಹೈಜಂಪ್‌: ಬಿಯಾಂಕಾ ಕಾರಿಯಪ್ಪ (ಎತ್ತರ: 1.38 ಮೀ)–1, ಯಶಸ್ವಿನಿ ಆರ್‌. (ಚಿತ್ರದುರ್ಗ)–2, ನುಮೈರಾ ಸೈಫ್ (ಚಿತ್ರದುರ್ಗ)–3; ಜಾವೆಲಿನ್‌ ಥ್ರೋ; ತನಿಷ್ಕಾ ಸಿ. (ಬೆಂಗಳೂರು; ಎಸೆತ 27.48 ಮೀ)–1, ಐಮನ್ ಮಹಮ್ಮದಿ (ಚಿಕ್ಕಮಗಳೂರು)–2, ಶಿವಾನಿ ಶೆಲರ (ಬೆಳಗಾವಿ)–3

ಈಜು: 4x100 ಮೀ. ಫ್ರೀಸ್ಟೈಲ್ ರಿಲೆ: ಬಸವನಗುಡಿ ಅಕ್ವಾಟಿಕ್ಸ್‌ ಸೆಂಟರ್‌–1, ಡಿಕೆವಿ ಅಕ್ವಾಟಿಕ್‌ ಸೆಂಟರ್‌–2, ಗ್ಲೋಬಲ್ ಸ್ವಿಮ್ ಸೆಂಟರ್–3; 4x200 ಮೀ. ಫ್ರೀಸ್ಟೈಲ್ ರಿಲೆ: ಡಿಕೆವಿ ಅಕ್ವಾಟಿಕ್‌ ಸೆಂಟರ್‌–1, ಬಸವನಗುಡಿ ಅಕ್ವಾಟಿಕ್ಸ್‌ ಸೆಂಟರ್‌–2, ಗ್ಲೋಬಲ್ ಸ್ವಿಮ್ ಸೆಂಟರ್–3. 4x100 ಮೀ.ಮೆಡ್ಲೆ ರಿಲೆ; ಗ್ಲೋಬಲ್ ಸ್ವಿಮ್ ಸೆಂಟರ್–1, ಡಿಕೆವಿ ಅಕ್ವಾಟಿಕ್‌ ಸೆಂಟರ್‌–2, ಬಸವನಗುಡಿ ಅಕ್ವಾಟಿಕ್ಸ್‌ ಸೆಂಟರ್‌–3.

ಜಿಮ್ನಾಸ್ಟಿಕ್ಸ್: ಫ್ಲೋರ್‌ ಎಕ್ಸ್‌ಸೈಜ್‌: ರಿಯಾ ಎಂ. (ಬೆಂಗಳೂರು)–1, ನಿಯಾ ಮೇರಿ ವರ್ಗೀಸ್ (ಬೆಂಗಳೂರು)–2, ಅನ್ವಿ ಎ. ಹರಿಥಾಸ (ಮೈಸೂರು)–3; ವಾಲ್ಟ್: ರಿಯಾ ಎಂ.–1, ನಿಯಾ ಮೇರಿ ವರ್ಗೀಸ್–2, ಅನ್ವಿ ಎ. ಹರಿಥಾಸ–3; ಅನ್ಇವನ್‌ ಬಾರ್ಸ್‌: ನಿಯಾ ಮೇರಿ ವರ್ಗೀಸ್–1, ರಿಯಾ ಎಂ–2, ಅನ್ವಿ ಎ. ಹರಿಥಾಸ–3; ಬ್ಯಾಲೆನ್ಸಿಂಗ್‌ ಬೀಮ್‌: ಜಾನ್ವಿ ಎಲ್. ಗೌಡ (ಬೆಂಗಳೂರು)–1, ಅನ್ವಿ ಎ. ಹರಿಥಾಸ–2, ರಿಯಾ ಎಂ ಮತ್ತು  ವೇದಾ ಸಿದ್ದಪ್ಪ (ಧಾರವಾಡ)–3; ಏರೋಬಿಕ್ಸ್ ಜಿಮ್ನಾಸ್ಟಿಕ್ಸ್: ಉನ್ನತಿ ಬೊಕಾರಿಯಾ (ಬೆಂಗಳೂರು)–1, ತನಿಶಾ ದೇವ (ಬೆಂಗಳೂರು)–2, ಸಾನ್ವಿ ಗುಡ್ಡೇನವರ (ಧಾರವಾಡ)–3. ವೇಟ್‌ಲಿಫ್ಟಿಂಗ್‌: 71 ಕೆಜಿ: ಏಕ್ತಾ ಗುಂಡು ರಾವತ್‌ (ಬೆಳಗಾವಿ)–1, ಜಿಶಾನಾ ಫಾತಿಮಾ (ಉಡುಪಿ)–2, ಅನ್ವಿ ಹರ್ಷದ್ ಠಾಕೂರ್ (ಬೆಂಗಳೂರು)–3; 76ಕೆಜಿ: ಪಾವನಿ ಜೆ.ಆರ್‌. (ಹಾಸನ)–1, ದಿಶಾಲಿ (ದಕ್ಷಿಣ ಕನ್ನಡ)–2, ಖುಷಿ ಆರ್‌ (ಬೆಂಗಳೂರು)–3; 76+ಕೆಜಿ: ಭುವನೇಶ್ವರಿ (ಉಡುಪಿ)–1, ಪೂರ್ವಿತಾ ಉತ್ಕರ್ಷ್ ದೊಮನೆ (ಬೆಳಗಾವಿ)–2, ಮೊನಿಶಾ (ಉಡುಪಿ)–3. ಬ್ಯಾಡ್ಮಿಂಟನ್‌: ಸಿಂಗಲ್ಸ್‌: ಕಂದಿಬಿಲ್ಲ ಶ್ರೇಯಾ (ಬೆಂಗಳೂರು)–1, ತನ್ವಿ ಮುನೋತ್ (ಬೆಂಗಳೂರು)–2. ವಾಲಿಬಾಲ್‌: ಕೊಪ್ಪಳ–1, ಹಾಸನ–2, ಯಾದಗಿರಿ–3. ಶೂಟಿಂಗ್‌: 10 ಮೀ. ಏರ್‌ ಪಿಸ್ತೂಲ್‌: ನಿಸರ್ಗಾ ಎಚ್‌.ಎಸ್‌ (ಶಿವಮೊಗ್ಗ)–1, ದ್ವಿಜಾ ಮೋಹಿತ್ ಗೌಡ (ಬೆಂಗಳೂರು)–2, ಗಂಬೇರಿಯಾ ವಿ ಗೌಡ(ಬೆಂಗಳೂರು)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.