ADVERTISEMENT

ಬಿಟ್ಸ್‌, ಎನ್‌ಐಟಿಕೆ ಮಹಿಳಾ ತಂಡಕ್ಕೆ ಗೆಲುವು

ಜೇಮ್ಸ್ ನೈಸ್ಮಿತ್ ಕಪ್ ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಡಿಒಸಿ ವಿರುದ್ಧ ಕೆಎಂಸಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:54 IST
Last Updated 24 ಅಕ್ಟೋಬರ್ 2024, 15:54 IST
ಗುರುವಾರ ನಡೆದ ಪಂದ್ಯದಲ್ಲಿ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದ ಕೆಎಂಸಿ ಕಾಲೇಜು ತಂಡದ ಆಟಗಾರನನ್ನು ನಿಟ್ಟೆ ಕ್ಯಾಂಪಸ್ (ನೀಲಿ) ತಂಡದ ಆಟಗಾರರು ತಡೆದರು. ಪ್ರಜಾವಾಣಿ ಚಿತ್ರ :ಫಕ್ರುದ್ದೀನ್ ಎಚ್
ಗುರುವಾರ ನಡೆದ ಪಂದ್ಯದಲ್ಲಿ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದ ಕೆಎಂಸಿ ಕಾಲೇಜು ತಂಡದ ಆಟಗಾರನನ್ನು ನಿಟ್ಟೆ ಕ್ಯಾಂಪಸ್ (ನೀಲಿ) ತಂಡದ ಆಟಗಾರರು ತಡೆದರು. ಪ್ರಜಾವಾಣಿ ಚಿತ್ರ :ಫಕ್ರುದ್ದೀನ್ ಎಚ್   

ಮಂಗಳೂರು: ಗೊವಾದ ಬಿಟ್ಸ್ ಮತ್ತು ಸುರತ್ಕಲ್‌ನ ಎನ್‌ಐಟಿಕೆ ತಂಡಗಳು ಜೇಮ್ಸ್ ನೈಸ್ಮಿತ್ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಕಾಲೇಜು ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಗೆಲುವು ಸಾಧಿಸಿದವು.

ದಕ್ಷಿಣ ಕನ್ನಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್‌ ನಗರದ ಯು.ಎಸ್‌.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಟೂರ್ನಿಯ ಎರಡನೇ ದಿನವಾದ ಗುರುವಾರ ಬಿಟ್ಸ್‌ 36–26ರಲ್ಲಿ ಸೇಂಟ್ ಜೋಸೆಫ್ಸ್ ಎಂಜಿನಿಯರಿಂಗ್ ಕಾಲೇಜು ತಂಡವನ್ನು ಮಣಿಸಿತು. ಮಹಿಳೆಯರ ವಿಭಾಗದಲ್ಲಿ ಫಾದರ್ ಮುಲ್ಲರ್ ಕಾಲೇಜು ತಂಡವನ್ನು ಎನ್‌ಐಟಿಕೆ 18–11ರಲ್ಲಿ ಸೋಲಿಸಿತು.

ಪುರುಷರ ಮತ್ತೊಂದು ಪಂದ್ಯದಲ್ಲಿ ಮಂಗಳೂರು ಕೆಎಂಸಿ ತಂಡ ಮಣಿಪಾಲ ಡಿಒಸಿಯನ್ನು 26–14ರಲ್ಲಿ ಮಣಿಸಿತು. ಆದರೆ ನಿಟ್ಟೆ ಕ್ಯಾಂಪಸ್ ಎದುರಿನ ಪಂದ್ಯದಲ್ಲಿ ಕೆೆಎಂಸಿ 20–35ರಲ್ಲಿ ಸೋತಿತು. ನಿಟ್ಟೆ ಪರವಾಗಿ ಸೃಜನ್ 13 ಪಾಯಿಂಟ್ ಗಳಿಸಿ ಮಿಂಚಿದರು.

ADVERTISEMENT

ಇತರ ಫಲಿತಾಂಶಗಳು: ಹೈಸ್ಕೂಲ್ ಬಾಲಕರ ವಿಭಾಗ: ಲೂರ್ದ್ಸ್‌ ಶಾಲೆಗೆ ಸೇಂಟ್ ಅಲೋಶಿಯಸ್ ಗೊಂಜಾಗ ವಿರುದ್ಧ 30–15ರಲ್ಲಿ ಜಯ; ಮಣಿಪಾಲ ಶಾಲೆಗೆ ಶಾರದಾ ವಿದ್ಯಾಲಯ ವಿರುದ್ಧ 23–5ರಲ್ಲಿ, ಸೇಂಟ್ ಅಲೋಶಿಯಸ್ ಮೇನ್ ಶಾಲೆಗೆ ಶಾರದಾ ವಿದ್ಯಾಲಯ ಎದುರು 19–8ರಲ್ಲಿ, ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ಗೆ 26–6ರಲ್ಲಿ ನಿಟ್ಟೆ ಸ್ಕೂಲ್ ವಿರುದ್ಧ, ಮಣಿಪಾಲ್ ಶಾಲೆಗೆ 14–2ರಲ್ಲಿ ಪ್ರೆಸಿಡೆನ್ಸ್ ಶಾಲೆ ವಿರುದ್ಧ ಗೆಲುವು.

ಹೈಸ್ಕೂಲ್ ಬಾಲಕಿಯರ ವಿಭಾಗ: ಸೇಂಟ್ ತೆರೆಸಾ ಶಾಲೆಗೆ ಲೂರ್ದ್ಸ್ ವಿರುದ್ಧ 20–15ರಲ್ಲಿ ಜಯ; ಪ್ರೆಸಿಡೆನ್ಸಿ ಶಾಲೆ ವಿರುದ್ಧ ಮಣಿಪಾಲ ಶಾಲೆಗೆ 9–2ರಲ್ಲಿ, ಕೇಂಬ್ರಿಜ್‌ಗೆ ಲೂರ್ದ್ಸ್ ವಿರುದ್ಧ 11–7ರಲ್ಲಿ, ಸೇಂಟ್ ತೆರೆಸಾ ಸ್ಕೂಲ್‌ಗೆ ನಿಟ್ಟೆ ಸ್ಕೂಲ್ ವಿರುದ್ಧ 8–5ರಲ್ಲಿ ಜಯ. ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ: ಸೇಂಟ್ ತೆರೆಸಾ ಶಾಲೆಗೆ ಲೂರ್ದ್ಸ್ ವಿರುದ್ಧ 19–10ರಲ್ಲಿ ಜಯ; ನಿಟ್ಟೆ ಸ್ಕೂಲ್‌ಗೆ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ವಿರುದ್ಧ 20–5ರಲ್ಲಿ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.