ಜಪಾನ್‌ನ ಟೆನಿಸ್ ಆಟಗಾರ್ತಿ ನವೊಮಿ ಒಸಾಕ ಅತಿ ಹೆಚ್ಚು ಆದಾಯ ಗಳಿಸುವ ಮಹಿಳಾ ಅಥ್ಲೀಟ್ ಎಂದು ಫೋರ್ಬ್ಸ್ ನಿಯತಕಾಲಿಕೆಪ್ರಕಟಿಸಿದೆ.
ಒಸಾಕ ಅವರು ಕಳೆದ ವರ್ಷ ಪ್ರಶಸ್ತಿಮತ್ತು ಹಲವು ಬ್ರಾಂಡ್‌ಗಳೊಂದಿಗೆ ಮಾಡಿಕೊಂಡ ಒಪ್ಪಂದದ ಮೂಲದಿಂದಬರೋಬ್ಬರಿ 57.3ಮಿಲಿಯನ್ ಡಾಲರ್ (ಅಂದಾಜು ₹ 423.59 ಕೋಟಿ) ಗಳಿಸಿದ್ದಾರೆ.
ನಾಲ್ಕು ಬಾರಿ ಗ್ರ್ಯಾನ್ ಸ್ಲಾಮ್ ಗೆದ್ದುಕೊಂಡಿರುವ ಒಸಾಕ ಅವರು ಮಾನಸಿಕ ಆರೋಗ್ಯದತ್ತ ಗಮನ ಹರಿಸುವ ಸಲುವಾಗಿ ಕಳೆದ ವರ್ಷ ಜೂನ್‌ನಲ್ಲಿ ಫ್ರೆಂಚ್ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅದರ ಹೊರತಾಗಿಯೂ ಅವರು ಮೊದಲ ಸ್ಥಾನದಲ್ಲಿಕಾಣಿಸಿಕೊಂಡಿದ್ದಾರೆ.
ಆದಾಯ ಗಳಿಕೆ ಪಟ್ಟಿಯಲ್ಲಿ ಒಸಾಕ ನಂತರದ ಸ್ಥಾನಗಳಲ್ಲಿ ದಿಗ್ಗಜ ಆಟಗಾರ್ತಿಯರಾದ ʼವಿಲಿಯಮ್ಸ್ʼ ಸಹೋದರಿಯರು ಇದ್ದಾರೆ. ಸೆರೆನಾ ವಿಲಿಯಮ್ಸ್ ಕಳೆದ ವರ್ಷ45.9 ಮಿಲಿಯನ್ ಡಾಲರ್ (ಅಂದಾಜು ₹ 332.03 ಕೋಟಿ) ಗಳಿಸಿ 2ನೇ ಸ್ಥಾನದಲ್ಲಿ ಮತ್ತುಅವರ ಅಕ್ಕ ವೀನಸ್ ವಿಲಿಯಮ್ಸ್ 11.3ಮಿಲಿಯನ್ ಡಾಲರ್ (ಅಂದಾಜು ₹ 83.56 ಕೋಟಿ) ಸಂಪಾದಿಸಿ3ನೇ ಸ್ಥಾನದಲ್ಲಿದ್ದಾರೆ.
ಅಮೆರಿಕದ ಜಿಮ್ನಾಸ್ಟ್ ಪಟು ಸಿಮೋನ್ ಬಿಲೆಸ್ (ಅಂದಾಜು ₹ 74.68 ಕೋಟಿ) ಮತ್ತು ಸ್ಪೇನ್ ಟೆನಿಸ್ ಆಟಗಾರ್ತಿಗಾರ್ಬೈನ್ ಮುಗುರಜಾ (ಅಂದಾಜು ₹ 65,07ಕೋಟಿ) ಕ್ರಮವಾಗಿ ನಾಲ್ಕುಹಾಗೂ ಐದನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಗ್ರ ಹತ್ತು ಆಟಗಾರ್ತಿಯರು ಒಟ್ಟು45.9 ಮಿಲಿಯನ್ ಡಾಲರ್ (ಅಂದಾಜು₹ 1,232.00ಕೋಟಿ) ಆದಾಯ ಗಳಿಸಿದ್ದಾರೆ. ಇದು2020ರಲ್ಲಿಮೊದಲ ಹತ್ತುಮಂದಿ ಗಳಿಸಿದ್ದಕ್ಕಿಂತ ಶೇ23 ರಷ್ಟು ಅಧಿಕವಾಗಿದೆ.ಅಗ್ರ ಹತ್ತರ ಪಟ್ಟಿಯಲ್ಲಿ ಐದು ಮಂದಿ ಟೆನಿಸ್ ಆಟಗಾರ್ತಿಯರೇ ಇದ್ದಾರೆ ಎಂದು ಫೋರ್ಬ್ಸ್ ಹೇಳಿದೆ.
ದಕ್ಷಿಣ ಕೊರಿಯಾದ ಗಾಲ್ಫ್ ಆಟಗಾರ್ತಿ ಕೊ ಜಿನ್-ಯಂಗ್ (ಅಂದಾಜು ₹ 55,46 ಕೋಟಿ), ಭಾರತದ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು (ಅಂದಾಜು ₹ 53.24 ಕೋಟಿ), ಆಸ್ಟ್ರೇಲಿಯಾದಟೆನಿಸ್ ಆಟಗಾರ್ತಿ ಆ್ಯಶ್ಲಿ ಬಾರ್ಟಿ (ಅಂದಾಜು ₹ 51.02 ಕೋಟಿ), ಅಮೆರಿಕದ ಗಾಲ್ಫರ್ ನೆಲ್ಲಿ ಕೊರ್ದಾ (ಅಂದಾಜು ₹ 43.63 ಕೋಟಿ) ಮತ್ತು ಅಮೆರಿಕದ ಬಾಸ್ಕೆಟ್ ಬಾಲ್ ಪಟು ಕಂಡಸಿ ಪಾರ್ಕರ್ (ಅಂದಾಜು ₹ 42.15 ಕೋಟಿ) ಮೊದಲ ಹತ್ತು ಸ್ಥಾನದಲ್ಲಿರುವ ಉಳಿದ ಐವರು ಅಥ್ಲೀಟ್‌ಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.