ಅಪಿಯಾ, ಸಮೊವಾ: ಯೂಥ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದ ಭಾರತದ ಜೆರೆಮಿ ಲಾಲ್‌ರಿನ್ನುಂಗ ಇಲ್ಲಿ ಗುರುವಾರ ಮೂರು ದಾಖಲೆಗಳನ್ನು ಬರೆದರು.
ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ದಿನ, 16 ವರ್ಷದ ಜೆರೆಮಿ 67 ಕೆಜಿ ವಿಭಾಗದ ಸ್ಪರ್ಧೆಯಲ್ಲಿ 136 ಕೆಜಿ ಭಾರ ಎತ್ತಿ ಯೂಥ್ ವಿಭಾಗ, ಏಷ್ಯನ್ ಚಾಂಪಿಯನ್‌ಷಿಪ್ ಮತ್ತು ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನ ದಾಖಲೆಗಳನ್ನು ಮುರಿದರು.
ಆದರೆ ಮಿಜೋರಾಂನ ಈ ಕ್ರೀಡಾಪಟುವಿಗೆ ಕ್ಲೀನ್ ಮತ್ತು ಜೆರ್ಕ್‌ನಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗಲಿಲ್ಲ. ಹೀಗಾಗಿ ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಸಾಧ್ಯತೆಯೂ ಕಮರಿ ಹೋಯಿತು.
ಭಾರತದ ಇತರ ಲಿಫ್ಟರ್‌ಗಳೂ ಉತ್ತಮ ಸಾಮರ್ಥ್ಯ ಮುಂದುವರಿಸಿ ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಗೆದ್ದರು. 73 ಕೆಜಿ ವಿಭಾಗದಲ್ಲಿ ಅಚಿಂತಾ ಶೇಹುಲಿ ಒಟ್ಟು 305 (136+169) ಕೆಜಿ ಎತ್ತಿ ಸೀನಿಯರ್ ಮತ್ತು ಜೂನಿಯರ್ ಪುರುಷರ ಚಿನ್ನ ಗೆದ್ದರು. ಮಹಿಳೆಯರ 76 ಕೆಜಿ ವಿಭಾಗದಲ್ಲಿ ಮನ್‌ಪ್ರೀತ್ ಕೌರ್ 207 ಕೆಜಿ (91+116) ಎತ್ತಿ ಚಿನ್ನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.