ADVERTISEMENT

ದಾಖಲೆ ಉತ್ತಮಪಡಿಸಿಕೊಂಡ ಜಿನ್ಸನ್ ಜಾನ್ಸನ್

ಪಿಟಿಐ
Published 16 ಜೂನ್ 2019, 19:31 IST
Last Updated 16 ಜೂನ್ 2019, 19:31 IST
ಜಿನ್ಸನ್ ಜಾನ್ಸನ್ –ಪಿಟಿಐ ಚಿತ್ರ
ಜಿನ್ಸನ್ ಜಾನ್ಸನ್ –ಪಿಟಿಐ ಚಿತ್ರ   

ನವದೆಹಲಿ: ಭಾರತದ ಮಧ್ಯಮ ದೂರ ಓಟಗಾರ ಜಿನ್ಸನ್ ಜಾನ್ಸನ್ ತಮ್ಮ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ ನೆಕ್ಸ್ಟ್ ಜನರೇಷನ್ ಅಥ್ಲೆಟಿಕ್ ಕೂಟದ 1500 ಮೀಟರ್ಸ್ ಓಟದಲ್ಲಿ ಅವರು ಈ ಸಾಧನೆ ಮಾಡಿದರು.

ನಿಜ್ಮೆಜೆನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು 3 ನಿಮಿಷ, 37.62 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆರನೇ ಸ್ಥಾನ ತಮ್ಮದಾಗಿಸಿಕೊಂಡರು. ಕಳೆದ ವರ್ಷದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 3 ನಿಮಿಷ 37.86 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಅವರು ದಾಖಲೆ ಬರೆದಿದ್ದರು.

ಭಾರತದ ಅಜಯ್ ಕುಮಾರ್ ಸರೋಜ್ ನೆಕ್ಸ್ಟ್ ಜನರೇಷನ್ ಅಥ್ಲೆಟಿಕ್ ಕೂಟದಲ್ಲಿ ಪಾಲ್ಗೊಂಡಿದ್ದು 3 ನಿಮಿಷ 40.39 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಮಂಗಳವಾರ ಸ್ವೀಡನ್‌ನಲ್ಲಿ ನಡೆಯಲಿರುವ ಕೂಟದಲ್ಲೂ ಜಿನ್ಸನ್ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಮಹಿಳಾ ವಿಭಾಗದಲ್ಲಿ ಪಿ.ಯು.ಚಿತ್ರಾ ಮೊದಲಿಗರಾದರು. 4 ನಿಮಿಷ 13.52 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದ್ದರು.

ಪಿ.ಯು.ಚಿತ್ರಾ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.