ಭುವನೇಶ್ವರ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಪದಕ ಗೆಲುವಿನ ಸಾಧನೆ ಮಾಡಿದ ಭಾರತ ತಂಡದಲ್ಲಿ ಆಡಿದ್ದ ವಿವೇಕ್ ಸಾಗರ್ ಪ್ರಸಾದ್ ನೇತೃತ್ವದ ತಂಡವು ಬುಧವಾರ ಆರಂಭವಾಗಲಿರುವ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.
ಬಿ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡವು ಫ್ರಾನ್ಸ್ ಎದುರು ಆಡಲಿದೆ. 21 ವರ್ಷದೊಳಗಿನವರ 16 ತಂಡಗಳು ಈ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಭಾರತ ತಂಡವು ಹಾಲಿ ಚಾಂಪಿಯನ್ ಆಗಿದ್ದು ಟ್ರೋಫಿ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಅನುಭವಿ ಗ್ರಹಾಂ ರೀಡ್ ಮುಖ್ಯ ಕೋಚ್ ಮತ್ತು ಕನ್ನಡಿಗ ಬಿ.ಜೆ. ಕಾರಿಯಪ್ಪ ಕೋಚ್ ಆಗಿರುವ ತಂಡವು ಆತ್ಮವಿಶ್ವಾಸದ ಆಗಸದಲ್ಲಿದೆ. ಸತತ ಮೂರನೇ ಬಾರಿಗೆ ಭಾರತದಲ್ಲಿ ಈ ಟೂರ್ನಿ ಆಯೋಜನೆಯಾಗುತ್ತಿದೆ.
‘20 ಆಟಗಾರರ ತಂಡವನ್ನು ಆಯ್ಕೆ ಆಡಲಾಗಿದೆ. ಅದರಲ್ಲಿ 18 ಆಟಗಾರರು ಫ್ರಂಟ್‌ಲೈನ್‌ನಲ್ಲಿದ್ದಾರೆ. ಇನ್ನಿಬ್ಬರು ಬದಲಿ ಆಟಗಾರರಿದ್ದಾರೆ. ಇದು ಪ್ರಶಸ್ತಿ ಉಳಿಸಿಕೊಳ್ಳಲು ಸಾಮರ್ಥ್ಯವಿರುವ ತಂಡವಾಗಿದೆ. ಸಮತೋಲನವಿರುವ ಬಳಗ ಇದಾಗಿದೆ’ ಎಂದು ರೀಡ್ ಹೇಳಿದ್ದಾರೆ.
40 ವರ್ಷಗಳ ಹಿಂದೆ ಆರಂಭವಾದ ಟೂರ್ನಿಯಲ್ಲಿ ಫ್ರಾನ್ಸ್ ತಂಡವು 2013ರಲ್ಲಿ ರನ್ನರ್ಸ್ ಅಪ್ ಆಗಿತ್ತು. ಭಾರತ ಎರಡು ಬಾರಿ ಚಾಂಪಿಯನ್ ಮತ್ತು ಒಂದು ಬಾರಿ ರನ್ನರ್ಸ್ ಅಪ್ ಆಗಿದೆ. ಜರ್ಮನಿ ಒಟ್ಟು ಆರು ಸಲ ಪ್ರಶಸ್ತಿ ಜಯಿಸಿದ್ದು ಈ ಬಾರಿ ಡಿ ಗುಂಪಿನಲ್ಲಿ ಆಡಲಿದೆ. ತಲಾ ಒಂದು ಬಾರಿ ಪ್ರಶಸ್ತಿ ಜಯಿಸಿರುವ ಪಾಕಿಸ್ತಾನ ಮತ್ತು ಅರ್ಜೆಂಟಿನಾ ಕೂಡ ಇದೇ ಗುಂಪಿನಲ್ಲಿವೆ.
ಕಳಿಂಗ ಕ್ರೀಡಾಂಗಣದಲ್ಲಿ ಬಯೋಬಬಲ್ ವ್ಯವಸ್ಥೆಯಲ್ಲಿ ಪಂದ್ಯಗಳು ನಡೆಯಲಿವೆ. ಪ್ರೇಕ್ಷಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ತಂಡಗಳು: ಭಾರತ: ವಿವೇಕ್ ಸಾಗರ್ ಪ್ರಸಾದ್(ನಾಯಕ), ಅಂಕಿತ್ ಪಾಲ್, ಗುರುಮುಖ್ ಸಿಂಗ್, ಮಣಿಂದರ್ ಸಿಂಗ್, ರವಿಚಂದ್ರ ಸಿಂಗ್ ಮೊರಂಗ್ತೇಮ್, ವಿಷ್ಣುಕಾಂತ್ ಸಿಂಗ್ (ಮಿಡ್‌ಫೀಲ್ಡರ್‌ಗಳು), ಅಭಿಷೇಕ್ ಲಾಕ್ರಾ, ದಿನಚಂದ್ರ ಸಿಂಗ್ ಮೋರೆಂಗ್ತೆಮ್, ಸಂಜಯ್, ಶ್ರದ್ಧಾನಂದ ತಿವಾರಿ, ಸುನೀಲ್ ಜೊಜೊ, ಯಶದೀಪ್ ಸಿವಾಚ್ (ಡಿಫೆಂಡರ್ಸ್), ಪವನ್, ಪ್ರಶಾಂತ್ ಕುಮಾರ್ ಚೌಹಾಣ್ (ಗೋಲ್‌ಕೀಪರ್ಸ್), ಅರೈಜಿತ್ ಸಿಂಗ್ ಹುಂಡೇಲ್, ಬಾಬಿ ಸಿಂಗ್ ಧಾಮಿ, ಮಂಜೀತ್, ರಾಹುಲ್ ಕುಮಾರ್ ರಾಜಭಾರ್, ಸುದೀಪ್ ಚಿರ್ಮಾಕೊ, ಉತ್ತಮ್ ಸಿಂಗ್ (ಫಾರ್ವಡ್ಸ್), ಗ್ರಹಾಂ ರೀಡ್ (ಮುಖ್ಯ ಕೋಚ್), ಬಿ.ಜೆ. ಕಾರಿಯಪ್ಪ (ಕೋಚ್), ಸಿ.ಬಿ. ಜನಾರ್ಧನ್ (ಸಹಾಯಕ ಕೋಚ್), ಎಂ. ರಂಗನಾಥನ್ (ಫಿಸಿಯೊಥೆರಪಿಸ್ಟ್), ಹರ್ಷಿತ್ ಎಂ ಲಕ್ಷ್ಮಣ್ (ವಿಡಿಯೊ ಅನಾಲಿಸ್ಟ್), ಅರೂಪ್ ನಾಸ್ಕರ್ , ಸತ್ಪಾಲ್ ಸಿಂಗ್ (ಮಸಾಜ್ ತಜ್ಞ).
ಫ್ರಾನ್ಸ್:ತಿಮೊತಿ ಕ್ಲೆಮೆಂಟ್ (ನಾಯಕ), ಮಾರಿಯಸ್ ಮೆಥ್ಯೂ, ಗೈಲೇಮ್ ಡಿ ವಾಸೆಲೆಸ್ (ಗೋಲ್‌ಕೀಪರ್ಸ್), ಲೂಕಾಸ್ ಮಾಂಟೆಕಾಟ್, ಜೆತನ್ ಲಾರ್ನಿಕೊಲ್, ಮ್ಯಾಟಿಯೊ ಡೆಸ್‌ಗೈಲನ್ಸ್, ಬ್ರೂಸ್ ಡೆಲೆಮಜರ್, ಸ್ಟಾನಿಸ್ಲಾಸ್ ಬ್ರಾನಿಕಿ, ಕೊರೆಂಟಿನ್ ಸೆಲ್ಲಿರ್, ಮಥಾಯಿಸ್ ಕ್ಲೆಮೆಂತ, ಪಾಲ್ ಪ್ಲಾಟ್, ಜೂಲಸ್ ವೆರಿಯರ್, ಬೆಂಜಮಿನ್ ಮರ್ಕ್ಯೂ, ಗಾಸ್ಪರ್ ಕ್ಸೇವಿಯರ್, ರೆಫಿ ಗೊನೆಸಾ, ಲೂಯಿಸ್ ಹಾರ್ಟೆಲ್‌ಮೆಯೆರ್, ಆ್ಯಂಟೊನಿನ್ ಐಗೆ, ನೊಯೊ ಜೂಲಿನ್, ಜೂಲ್ಸ್ ಬಾರ್ನೆಕ್, ಥಾಮಸ್ ಅಸೊನನ್. ಮ್ಯಾಥ್ಯೂ ಮಾರೀಸ್.
ಇಂದಿನ ಪಂದ್ಯಗಳು
ಬೆಲ್ಜಿಯಂ–ದಕ್ಷಿಣ ಆಫ್ರಿಕಾ (ಬೆಳಿಗ್ಗೆ 9.30)
ಜರ್ಮನಿ–ಪಾಕಿಸ್ತಾನ; (ಮಧ್ಯಾಹ್ನ 12)
ಕೆನಡಾ–ಪೊಲೆಂಡ್ (ಮಧ್ಯಾಹ್ನ 2.30)
ಮಲೇಷ್ಯಾ–ಚಿಲಿ (ಸಂಜೆ 5)
ಭಾರತ–ಫ್ರಾನ್ಸ್ (ರಾತ್ರಿ 8)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.