ADVERTISEMENT

ವಿಶ್ವ ಜೂನಿಯರ್‌ ಬಾಕ್ಸಿಂಗ್‌: ಹಾರ್ದಿಕ್‌, ಪ್ರಾಚಿಗೆ ಬೆಳ್ಳಿ

ಪಿಟಿಐ
Published 4 ಡಿಸೆಂಬರ್ 2023, 16:02 IST
Last Updated 4 ಡಿಸೆಂಬರ್ 2023, 16:02 IST
ಹಾರ್ದಿಕ್‌ ಪನ್ವಾರ್‌
ಹಾರ್ದಿಕ್‌ ಪನ್ವಾರ್‌    

ನವದೆಹಲಿ: ಭಾರತದ ಬಾಕ್ಸರ್‌ಗಳಾದ ಹಾರ್ದಿಕ್‌ ಪನ್ವಾರ್‌, ಅಮಿಶಾ ಕೆರೆಟ್ಟಾ ಮತ್ತು ಪ್ರಾಚಿ ಟೋಕಾಸ್‌ ಅವರು ಅರ್ಮೇನಿಯಾದ ಯೆರೆವಾನ್‌ನಲ್ಲಿ ನಡೆಯುತ್ತಿರುವ ಐಬಿಎ ವಿಶ್ವ ಜೂನಿಯರ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ವಿಭಾಗಗಳ ಫೈನಲ್‌ನಲ್ಲಿ ಸೋತು ಬೆಳ್ಳಿ ಗೆದ್ದರು.

ಏಷ್ಯನ್ ಜೂನಿಯರ್ ಚಾಂಪಿಯನ್ ಹಾರ್ದಿಕ್ (80 ಕೆಜಿ) ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ರಷ್ಯಾದ ಅಶುರೊವ್ ಬೈರಾಮ್‌ಖಾನ್ ಅವರಿಗೆ 2-3ರಿಂದ ಮಣಿದರು.

ಅಮಿಶಾ (54 ಕೆಜಿ) 0–5ರಿಂದ ಕಜಕಿಸ್ತಾನ್‌ನ ಅಯಾಜಾನ್ ಸೈಡಿಕ್‌ಗೆ ಮತ್ತು ಪ್ರಾಚಿ (80 ಕೆಜಿ) 0–5ರಿಂದ ಎರಡು ಬಾರಿ ಏಷ್ಯನ್ ಜೂನಿಯರ್ ಚಾಂಪಿಯನ್ ಉಜ್ಬೇಕಿಸ್ತಾನ್‌ನ ಸೊಬಿರಾಖೋನ್ ಶಖೋಬಿದ್ದಿನೋವಾ ವಿರುದ್ಧ ಪರಾಭವಗೊಂಡರು.

ADVERTISEMENT

ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳು ಐದು ಕಂಚು ಸೇರಿದಂತೆ ಒಟ್ಟು 17 ಪದಕಗಳನ್ನು ಗೆದಿದ್ದಾರೆ.

ಪಾಯಲ್ (48 ಕೆಜಿ), ನಿಶಾ (52 ಕೆಜಿ), ವಿನಿ (57 ಕೆಜಿ), ಸೃಷ್ಟಿ (63 ಕೆಜಿ), ಆಕಾಂಕ್ಷಾ (70 ಕೆಜಿ), ಮೇಘಾ (80 ಕೆಜಿ), ಜತಿನ್ (54 ಕೆಜಿ), ಸಾಹಿಲ್ (75 ಕೆಜಿ) ಮತ್ತು ಹೇಮಂತ್ (80+ ಕೆಜಿ) ಅವರು ತಮ್ಮ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದು, ಸೋಮವಾರ ಚಿನ್ನದ ಪದಕಕ್ಕಾಗಿ ಹೋರಾಡಲಿದ್ದಾರೆ.

ನೇಹಾ (46 ಕೆಜಿ), ನಿಧಿ (66 ಕೆಜಿ), ಪರಿ (50 ಕೆಜಿ), ಕೃತಿಕಾ (75 ಕೆಜಿ) ಮತ್ತು ಸಿಕಂದರ್ (48 ಕೆಜಿ) ಅವರು ಸೆಮಿಫೈನಲ್‌ನಲ್ಲಿ ಅಭಿಯಾನ ಮುಗಿಸಿ ಕಂಚಿನ ಪದಕ ಗೆದ್ದುಕೊಂಡರು. 

ಪ್ರಾಚಿ ಟೋಕಾಸ್‌
ಅಮಿಶಾ ಕೆರೆಟ್ಟಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.